ಹೆಚ್ಚು ಮೈಲೇಜ್, ಗರಿಷ್ಠ ಸುರಕ್ಷತೆ ಹೊಂದಿರುವ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ಚೀನಾ ಕಂಪನಿ
BYD ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕರಲ್ಲಿ ಒಬ್ಬರಾಗಿದ್ದಾರೆ. ಚೀನಾದ ಕಾರು ತಯಾರಕರಾದ BYD ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ e6 eMPV ಮತ್ತು Atto 3 ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ BYD ಕಂಪನಿಯು ಭಾರತೀಯ ಮಾರುಕಟ್ಟೆಯ ಅಖಾಡಕ್ಕೆ ಮೂರನೇ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜ್ಜಾಗುತ್ತಿದೆ.
BYD ಕಂಪನಿಯು ಭಾರತದಲ್ಲಿ ಸೀಲ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಚೀನಾದ ಕಾರು ತಯಾರಕರು ಈಗಾಗಲೇ ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಈ ಎಲೆಕ್ಟ್ರಿಕ್ ಸೆಡಾನ್‌ನ ಹೆಸರನ್ನು ಸೇರಿಸಲಾಗಿದೆ. ಈ ವರ್ಷದ ಆಟೋ ಎಕ್ಸ್‌ಪೋದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದ ಮಾದರಿಯು 2023ರ ನಾಲ್ಕನೇ ತ್ರೈಮಾಸಿಕದಲ್ಲಿ (ಬಹುಶಃ ಸೆಪ್ಟೆಂಬರ್ - ಅಕ್ಟೋಬರ್‌ನಲ್ಲಿ) ಬಿಡುಗಡೆಯಾಗಲಿದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.70 ಲಕ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಚೀನಾ ಮತ್ತು ಅಮೆರಿಕಾದಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ BYD ಸೀಲ್ ಕಾರು ಟೆಸ್ಲಾ ಮಾಡೆಲ್ 3 ಕಾರಿಗೆ ಪೈಪೋಟಿ ನೀಡುತ್ತದೆ. BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ಇತರ ಪ್ರೀಮಿಯಂ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ EV6 GT ಲೈನ್ ಮತ್ತು Volvo XC40 ರೀಚಾರ್ಜ್ ಎಂಬ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ BYD ಸೀಲ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಬಗ್ಗೆ ಹೇಳುವುದಾದರೆ, ಈ ಕಾರು ಅಗ್ರೇಸಿವ್ ಲುಕ್ ಅನ್ನು ಹೊಂದಿದ್ದು, ಈ ಕಾರು ರೂಫ್ ರೈಲ್ ನೊಂದಿಗೆ ಬಹಳ ಆಕರ್ಷಕವಾಗಿ ಕಾಣುತ್ತದೆ.
ಇತರ ವಿನ್ಯಾಸದ ಮುಖ್ಯಾಂಶಗಳು ಸೊಗಸಾದ ಅಲಾಯ್ ವ್ಹೀಲ್ ಗಳು, ಚೂಪಾದ ಕ್ರೀಸ್‌ಗಳು, ಪೂರ್ಣ-ಅಗಲ ಟೈಲ್‌ಲ್ಯಾಂಪ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಇತರ ಅಂಶಗಳನ್ನು ಒಳಗೊಂಡಿದೆ. ಹೊಸ BYD ಸೀಲ್ ಎಲೆಕ್ಟ್ರಿಕ್ ಕಾರಿನ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 61.4kWh ಆಗಿದ್ದರೆ, ದೊಡ್ಡ ಬ್ಯಾಟರಿ ಪ್ಯಾಕ್ 82.5kWh ಆಗಿದೆ. ಈ ಕಾರಿನ RWD ರೂಪಾಂತರವು 204 bhp ಪವರ್ ಅನ್ನು ಉತ್ಪಾದಿಸುತ್ತದೆ.
ಇನ್ನು ಈ ಎಲೆಕ್ಟ್ರಿಕ್ ಕಾರು ಟಾಪ್-ಸ್ಪೆಕ್ AWD ರೂಪಾಂತರವು 530 ಮತ್ತು 670 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟಾಪ್-ಸ್ಪೆಕ್ BYD ಸೀಲ್ ಕೇವಲ 3.8 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. BYD ಸೀಲ್ ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌ನಲ್ಲಿ 700 ಕಿಲೋಮೀಟರ್ ದೂರವನ್ನು ಕ್ರಮಿಸಬಹುದು. ಹೊಸ BYD ಸೀಲ್ ಎಲೆಕ್ಟ್ರಿಕ್ ಕಾರಿನಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡುತ್ತದೆ.
ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳು, HUD (ಹೆಡ್-ಅಪ್ ಡಿಸ್ಪ್ಲೇ), ವಿವಿಧ ಡ್ರೈವ್ ಮೋಡ್ ಅನ್ನು ಆಯ್ಕೆ ಮಾಡಲು ಸ್ಕ್ರಾಲ್ ವೀಲ್, ಪ್ರೀಮಿಯಂ ಆಡಿಯೊ ಸಿಸ್ಟಮ್ ಮತ್ತು ಹಿಟೆಡ್ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ. ಈ ಹ್ಯುಂಡೈ ಸೀಲ್ ಎಲೆಕ್ಟ್ರಿಕ್ ಸೆಡಾನ್‌ನ ವಿನ್ಯಾಸ ಮತ್ತು ವಿನ್ಯಾಸವು ಓಷನ್ ಎಕ್ಸ್ ಕಾನ್ಸೆಪ್ಟ್ ನಿಂದ ಪ್ರೇರಿತವಾಗಿದೆ. ಈ ಹೊಸ BYD ಸೀಲ್ ಎಲೆಕ್ಟ್ರಿಕ್ ಕಾರು 4800 mm ಉದ್ದ, 1875 mm ಅಗಲ ಮತ್ತು 1460 mm ಎತ್ತರವನ್ನು ಹೊಂದಿದೆ.
ಇನ್ನು BYD ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತು. ಇದೀಗ BYD ಕಂಪನಿಯು ತನ್ನ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಿದೆ. ಈ ಎಸ್‍ಯುವಿ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.99 ಲಕ್ಷವಾಗಿದೆ. BYD ಕಂಪನಿಯು ತನ್ನ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯ 340 ಯುನಿಟ್‌ಗಳನ್ನು ದೇಶಾದ್ಯಂತ ತಮ್ಮ ಡೀಲರ್ ಮೂಲಕ ಗ್ರಾಹಕರಿಗೆ ವಿತರಿಸಲಾಗುತ್ತದೆ. ಈ ಬಿವೈಡಿ ಕಂಪನಿಯು ಈ ಹೊಸ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಆಸಕ್ತ ಖರೀದಿದಾರರು ಈಗ 50,000 ರೂಪಾಯಿಗಳನ್ನು ಪಾವತಿಸಿ ಬುಕ್ ಮಾಡಬಹುದು. ಬಿವೈಡಿ ಕಂಪನಿಯು ಈ ಹೊಸ ಎಸ್‍ಯುವಿಗಾಗಿ 2,000 ಕ್ಕಿಂತ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಚೀನಾದ ತಯಾರಕರು ಹೇಳಿಕೊಂಡಿದ್ದಾರೆ. ಈ ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. 3.0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಬಿವೈಡಿ ಬ್ರ್ಯಾಂಡ್‌ನ ಎರಡನೇ ವಾಹನವಾಗಿದೆ.


Click it and Unblock the Notifications








