ಕಡಿಮೆ ಬೆಲೆಯ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರಿನ ಹೆಸರು ಬಹಿರಂಗಪಡಿಸಿದ ಎಂಜಿ ಮೋಟಾರ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ತನ್ನ ಚಿಕ್ಕ ಮತ್ತು ಅತ್ಯಂತ ಕಡಿಮೆ ಬೆಲೆಯ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಈ ಹೊಸ ಎಂಜಿ ಮಿನಿ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಮುಂಚಿತವಾಗಿ, ಹೆಸರನ್ನು ಬಹಿರಂಗಪಡಿಸಿದೆ.

ಈ ಹೊಸ ಎಂಜಿ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರಿನ ಹೆಸರು MG Comet ಆಗಿದೆ. ಈ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ ಎಂದು ಕಂಪನಿ ಹೇಳಿದೆ. ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಕಾರಿನ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ, ಮುಂಬರುವ MG ಮಾದರಿಯು 2-ಡೋರ್ ಕಾಂಪ್ಯಾಕ್ಟ್ ಇವಿ ಆಗಿರುತ್ತದೆ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿರುತ್ತದೆ.

ಹೊಸ ಪುಟ್ಟ ಎಲೆಕ್ಟ್ರಿಕ್ ಕಾರಿನ ಹೆಸರು ಬಹಿರಂಗಪಡಿಸಿದ ಎಂಜಿ ಮೋಟಾರ್

ಮುಂಬರುವ MG ಕಾಮೆಟ್ ಸ್ಮಾರ್ಟ್ ಇವಿಚೀನಾ-ಸ್ಪೆಕ್ ವುಲಿಂಗ್ ಏರ್ ಎಲೆಕ್ಟ್ರಿಕ್ ಕಾರನ್ನು ಆಧರಿಸಿದೆ. 2023ರ ಮಾರ್ಚ್ ತಿಂಗಳಿನಲ್ಲಿ ಹೊಸ ಎಂಜಿ ಎಲೆಕ್ಟ್ರಿಕ್ ಖಾರು ಉತ್ಪಾದನೆಗೆ ಪ್ರವೇಶಿಸಲಿದೆ ಎಂದು ವರದಿಯಾಗಿದೆ. ಎಂಜಿ ಮೋಟಾರ್ ಇಂಡಿಯಾ ವಾರ್ಷಿಕ ಆಧಾರದ ಮೇಲೆ ಸುಮಾರು 36000 ಯುನಿಟ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ. ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 20kWh - 25kWh ನಡುವಿನ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಇದು ಸುಮಾರು 40 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸಣ್ಣ ಎಲೆಕ್ಟ್ರಿಕ್ ಕಾರು 200 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ನೋಡಿದಂತೆ ಬ್ಯಾಟರಿ ಪ್ಯಾಕ್ LFP ಸಿಲಿಂಡರಾಕಾರದ ಸೆಲ್ ಗಳನ್ನು ಹೊಂದಿರುತ್ತದೆ, ಈ ಸೆಲ್ ಗಳು ಹಗುರವಾಗಿರುತ್ತವೆ ಮತ್ತು ಹೆಚ್ಚು ಚಾರ್ಜ್ ದಕ್ಷವಾಗಿರುತ್ತವೆ ಮತ್ತು NMC ಸೆಲ್‌ಗಳಿಗಿಂತ ಕಡಿಮೆ ನಿರ್ವಹಣೆಯನ್ನು ಹೊಂದಿವೆ.

ಎಂಜಿ ಟಾಟಾ ಆಟೋಕಾಂಪ್‌ನಿಂದ ಸ್ಥಳೀಯವಾಗಿ ಬ್ಯಾಟರಿಗಳನ್ನು ಪಡೆಯುತ್ತದೆ. MG Comet ಎಲೆಕ್ಟ್ರಿಕ್ ಕಾರಿನಲ್ಲಿ FWD (ಫ್ರಂಟ್-ವೀಲ್-ಡ್ರೈವ್) ಸಿಸ್ಟಂ ಅನ್ನು ಹೊಂದಿರುತ್ತದೆ ಮತ್ತು ಸುಮಾರು 2.9 ಮೀಟರ್ ಉದ್ದವನ್ನು ಹೊಂದಿರುತ್ತದೆ. ಇದನ್ನು ಬ್ರ್ಯಾಂಡ್‌ನ ಹೊಸ ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (GSEV) ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಎತ್ತರದ ಮತ್ತು ಬಾಕ್ಸಿ ನಿಲುವು ಹೊಂದಿದೆ. ಸಣ್ಣ ಅರ್ಬನ್ ಎಲೆಕ್ಟ್ರಿಕ್ ಕಾರು ಡ್ಯುಯಲ್ 10.25-ಇಂಚಿನ ಡಿಸ್ ಪ್ಲೇಯಂತಹ ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಇನ್ನು ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್ಸ್ ಟ್ರೂಮೆಂಟ್, ಆಟೋಮ್ಯಾಟಿಕ್ ಎಸಿ, ಕೀಲೆಸ್ ಎಂಟ್ರಿ, ಸಂಪರ್ಕಿತ ಕಾರ್ ಟೆಕ್ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳನ್ನು ಒಳಗೊಂಡಿರುತ್ತದೆ. ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾ ಮಾತನಾಡಿ, ಸಿಟಿಗಳಲ್ಲಿ ಟ್ರಾಫಿಕ್ ನಂತಹ ಸವಾಲುಗಳನ್ನು ಎದುರಿಸಲು ಹೊಸ ಯುಗದ ಪರಿಹಾರಕ್ಕೆ ಉತ್ತಮ ಕೊಡುಗೆಯಾಗಲಿದೆ.

ನಾವು ಡಿಜಿಟಲ್ ಯುಗಕ್ಕೆ ಮತ್ತಷ್ಟು ಚಲಿಸುತ್ತಿರುವಾಗ, ಭವಿಷ್ಯದ ತಂತ್ರಜ್ಞಾನಗಳಿಂದ ಹಿಡಿದು ವಿಶಿಷ್ಟ ವಿನ್ಯಾಸಗಳವರೆಗೆ ಕ್ಲೀನ್ ಮೊಬಿಲಿಟಿ ಮತ್ತು ಇತರ ಹಲವು ಆವಿಷ್ಕಾರಗಳಿಗೆ ನಾವು ಸಾಕ್ಷಿಯಾಗುತ್ತೇವೆ. ನಾವು MG Comet ಮೂಲಕ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಭವಿಷ್ಯಕ್ಕಾಗಿ ಪರಿಹಾರಗಳನ್ನು ರಚಿಸುವ ದಿಕ್ಕಿನಲ್ಲಿ ಅಗತ್ಯವಾದ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಿದ್ದೇವೆ ಎಂದು ಹೇಳಿದರು.

ಎಂಜಿ ಮೋಟಾರ್ ಇಂಡಿಯಾ ಭಾನುವಾರ ORIX ಇಂಡಿಯಾ ಕಂಪನಿಯ ರೆಂಟ್-ಎ-ಕಾರ್ ವಿಭಾಗಕ್ಕೆ ಒಂದೇ ದಿನದಲ್ಲಿ ಒಟ್ಟು 108 ಹೆಕ್ಟರ್ ಎಸ್‍ಯುವಿಗಳನ್ನು ವಿತರಿಸಿದೆ. ಎಂಜಿ ಕಂಪನಿಯ ಜನಪ್ರಿಯ ಎಸ್‍ಯುವಿ ಹೆಕ್ಟರ್ ಆಗಿದ್ದು, ಈ ಎಸ್‍ಯುವಿಯು ಭಾರತದಲ್ಲಿ ಎಂಜಿ ಕಂಪನಿಗೆ ಉತ್ತಮ ಅಡಿಪಾಯ ಹಾಕಿ ಕೊಟ್ಟಿದೆ. ORIX ಇಂಡಿಯಾ, ಭಾರತದಲ್ಲಿನ ಅತಿ ದೊಡ್ಡ ಕಾರು ಲೀಸ್ ಮತ್ತು ಬಾಡಿಗೆಗೆ ನೀಡುವ ಕಂಪನಿಗಳಲ್ಲಿ ಒಂದಾಗಿದೆ,

Article Published On: Friday, March 3, 2023, 8:30 [IST]
English summary
New electric car to be named mg comet details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+