ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾಗೆ ಪೈಪೋಟಿಯಾಗಿ ಬರುತ್ತಿದೆ ಹೊಸ ಹೋಂಡಾ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಇತ್ತೀಚೆಗೆ ಸಿಟಿ ಸೆಡಾನ್ ಅನ್ನು ಆರ್‌ಡಿಇ-ಕಂಪ್ಲೈಂಟ್ ಎಂಜಿನ್‌ಗಳು ,ಹೊಸ ಫೀಚರ್ಸ್ ಮತ್ತು ಆಖಋಷಕ ವಿನ್ಯಾಸದ ನವೀಕರಣಗಳೊಂದಿಗೆ ಪರಿಚಯಿಸಿತು. ಇದೀಗ ಹೋಂಡಾ ಕಂಪನಿಯು ತನ್ನ ಹೊಸ ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ಹೋಂಡಾ ಮಿಡ್ ಸೈಜ್ ಎಸ್‍ಯುವಿಯು 2023ರ ಜುಲೈ-ಸೆಪ್ಟೆಂಬರ್ ತಿಂಗಳುಗಳ ನಡುವೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಹೋಂಡಾ ಮಿಡ್ ಸೈಜ್ ಎಸ್‍ಯುವಿ ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಜೊತೆಗೆ ಈ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಜನಪ್ರಿಯ ಹ್ಯುಂಡೈ ಕ್ರೆಟಾ ಎಸ್‍ಯುವಿಗೂ ಕೂಡ ಪೈಪೋಟಿ ನೀಡುತ್ತದೆ.

ಬರುತ್ತಿದೆ ಹೊಸ ಹೋಂಡಾ ಎಸ್‍ಯುವಿ

ಹೊಸ ಹೋಂಡಾ ಎಸ್‍ಯುವಿಯವಿನ್ಯಾಸವು ಜಾಗತಿಕ-ಸ್ಪೆಕ್ ಹೊಸ WR-V ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಈ ಹೊಸ ಹೋಂಡಾ ಎಸ್‍ಯುವಿ ಮೆಶ್ ಮಾದರಿಯ ಗ್ರಿಲ್, ಎಲ್ಇಡಿ DRL ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳು ಮತ್ತು ಉದ್ದವಾದ ಬಾನೆಟ್ ಇರುತ್ತದೆ. ಸ್ವಲ್ಪ ಮೊನಚಾದ ರೂಫ್, ಎಲೆಕ್ಟ್ರಿಕ್ ಸನ್‌ರೂಫ್, ಟೈಲ್‌ಗೇಟ್ ಮೌಂಟೆಡ್ ಸ್ಪಾಯ್ಲರ್ ಮತ್ತು ಎಲ್‌ಇಡಿ ಅಂಶಗಳೊಂದಿಗೆ ಸುತ್ತುವ ಟೈಲ್‌ಲ್ಯಾಂಪ್‌ಗಳೊಂದಿಗೆ ಎಸ್‌ಯುವಿ ನೇರವಾದ ನಿಲುವನ್ನು ಹೊಂದಿರುತ್ತದೆ.

ಇತ್ತೀಚಿನ ಸ್ಪೈ ಚಿತ್ರಗಳು, ಹೋಂಡಾದ ಕ್ರೆಟಾ ಪ್ರತಿಸ್ಪರ್ಧಿ ರಾಡಾರ್ ಆಧಾರಿತ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಂ) ತಂತ್ರಜ್ಞಾನದೊಂದಿಗೆ ಬರಲಿದೆ ಎಂದು ದೃಢಪಡಿಸಿದೆ. ಇದು ಬ್ರೇಕಿಂಗ್ ಸಿಸ್ಟಮ್, ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಮ್, ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹೈ-ಬೀಮ್‌ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಈ ಹೊಸ ಹೋಂಡಾ ಎಸ್‍ಯುವಿ 6 ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಮ್ಯಾನೆಜ್ ಮೆಂಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಲಾಂಚ್ ಅಸಿಸ್ಟ್, EBD ಜೊತೆಗೆ ABS ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನೊಂದಿಗೆ ಪ್ಯಾಕ್ ಮಾಡಬಹುದಾಗಿದೆ. ಈ ಎಸ್‍ಯುವಿಯಲ್ಲಿ 360 ಡಿಗ್ರಿ ಕ್ಯಾಮೆರಾ, ಕನೆಕ್ಟೆಡ್ ಕಾರ್ ಟೆಕ್, ಹೋಂಡಾದ ಲೇನ್ ವಾಚ್ ಸಿಸ್ಟಮ್ ಮತ್ತು ಇನ್ನೂ ಅನೇಕ ಫೀಚರ್ಸ್ ಗಳನ್ನು ಹೊಂದಿರುತ್ತವೆ.

ಈ ಹೊಸ ಹೋಂಡಾ ಎಸ್‍ಯುವಿಯಲ್ಲಿ ಎಂಜಿನ್ 1.5 ಲೀಟರ್ iVTEC ಪೆಟ್ರೋಲ್ ಮತ್ತು 1.5 ಲೀಟರ್ ಅಟ್ಕಿನ್ಸನ್ ಸೈಕಲ್ ಜೊತೆಗೆ e:HEV ಹೈಬ್ರಿಡ್ ಟೆಕ್ನೊಂದಿಗೆ ಬರುತ್ತದೆ ಎಂದು ವರದಿಗಳಾಗಿದೆ. ಗ್ಯಾಸೋಲಿನ್ ಯುನಿಟ್ 121 bhp ಮತ್ತು 145 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ.

ಈ ಹೈಬ್ರಿಡ್ ಸೆಟಪ್ 253 ಎನ್ಎಂ ಟಾರ್ಕ್‌ನೊಂದಿಗೆ 109 bhp ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ಹೋಂಡಾದ ಪ್ರಸ್ತುತ ಉತ್ಪನ್ನ ಪೋರ್ಟ್‌ಫೋಲಿಯೋ ಹೋಂಡಾ ಅಮೇಜ್, ಹೋಂಡಾ ಸಿಟಿ (4ನೇ ಜನರೇಷನ್), ಹೋಂಡಾ ಸಿಟಿ (5ನೇ ಜನರೇಷನ್), ಹೋಂಡಾ ಜಾಝ್ ಮತ್ತು ಹೋಂಡಾ ಡಬ್ಲ್ಯುಆರ್-ವಿ ಒಳಗೊಂಡಿದೆ. ಹೋಂಡಾ ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ವಿದೇಶಿ ಮಾರುಕಟ್ಟೆಯಲ್ಲಿ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಬಹು ಡ್ರೈವ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತು. ಇನ್ನು ಹೋಂಡಾ ಕಂಪನಿಯು 2023 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅಮೇಜ್ ಸೆಡಾನ್ ಪ್ಲಾಟ್‌ಫಾರ್ಮ್ ಆಧಾರಿತ ಅಭೂತಪೂರ್ವ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಪರಿಚಯಿಸುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲಿ ಹೊಂಡಾ ಕಂಪನಿಯು ಕೂಡ ಎಸ್‍ಯುವಿ ವಿಭಾಗಕ್ಕೆ ಲಗ್ಗೆಯಿಡುತ್ತಿದೆ.

Article Published On: Monday, March 6, 2023, 12:15 [IST]
English summary
New honda suv launch to be 2023 details in kannada
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+