Hyundai Creta: ಭಾರತದಲ್ಲಿ ಕ್ರಾಂತಿ ಮಾಡಲು ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ ಈ ಜನಪ್ರಿಯ ಎಸ್‍ಯುವಿ

ಹ್ಯುಂಡೈ ಕ್ರೆಟಾ (Hyundai Creta) ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹ್ಯುಂಡೈ ಕ್ರೆಟಾ ಎಸ್‍ಯುವಿಯು ಮಾರಾಟದಲ್ಲಿ ಚಾಂಪಿಯನ್ ಆಗಿದೆ .

ಹ್ಯುಂಡೈ ಕ್ರೆಟಾದ ಪ್ಲಾಟ್‌ಫಾರ್ಮ್ ಆಧಾರಿತವಾಗಿ ಪಾಲುದಾರ ಕಿಯಾ ಸೆಲ್ಟೋಸ್ ಬಂದಿದೆ. ದಕ್ಷಿಣ ಕೊರಿಯಾದ ಸೋದರ ಸಂಬಂಧಿಗಳು ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಬಿರುಗಾಳಿ ಸೃಷ್ಟಿಸಿತು. ಚೀನಾ ಮತ್ತು ಅಮೆರಿಕಾ ನಂತರ ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿರುವುದರಿಂದ, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಪಾತ್ರವಹಿಸುತ್ತವೆ, ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

Hyundai Creta EV

ಬೇಡಿಕೆ ಹೆಚ್ಚಾಗಿರುವುದರಿಂದ, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಜನಪ್ರಿಯ ಎಸ್‍ಯುವಿಯಾದ ಕ್ರೆಟಾವನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಹ್ಯುಂಡೈ ಕ್ರೆಟಾ ಮಾದರಿಯು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗೆ ಪ್ರತಿಸ್ಪರ್ಧಿಯಾಗಲಿದೆ. ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳನ್ನು Team-BHP ಬಹಿರಂಗಪಡಿಸಿದೆ. ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಈ ಹೊಸ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಕಾಣಿಸಿಕೊಂಡಿದೆ.

ಈ ಕಾರಿನಲ್ಲಿ ಎಕ್ಸಾಸ್ಟ್ ಇಲ್ಲ, ರೇಡಿಯೇಟರ್ ಇಲ್ಲ. ಚಾಲಕ ಸಾಕಷ್ಟು ವೇಗವಾಗಿ ಓಡಿಸುತ್ತಿದ್ದ. ಸಾಮಾನ್ಯ ಕ್ರೆಟಾ ಎಸ್‍ಯುವಿಗೆ ಹೋಲಿಸಿದರೆ ಎರಡೂ ಬಂಪರ್‌ಗಳು ಬೆಳ್ಳಿಯ ವಿಭಿನ್ನ ಛಾಯೆಯನ್ನು ಹೊಂದಿದೆ. ಕ್ರೆಟಾ ಇವಿ ಟೆಸ್ಟಿಂಗ್ ಮಾದರಿಯು ಸ್ಟ್ಯಾಂಡರ್ಡ್ ಕ್ರೆಟಾ ಎಸ್‍ಯುವಿ ಮಾದರಿ ವಿನ್ಯಾಸದಂತೆ ಇದೆ. ಈ ಹುಂಡೈ ಭಾರತೀಯ ಮಾರುಕಟ್ಟೆಗೆ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ.

Hyundai Creta EV

ಹೊಸ ಹುಂಡೈ ಕ್ರೆಟಾ ಮಾದರಿಯು ಹೊಸ ವೆರ್ನಾ ಸೆಡಾನ್‌ನಿಂದ ಒಳಭಾಗ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಹ್ಯುಂಡೈ ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಕ್ರೆಟಾ ಹಲವಾರು ಭಾರತ-ನಿರ್ದಿಷ್ಟ ವಿನ್ಯಾಸ ಬದಲಾವಣೆಗಳನ್ನು ಮತ್ತು ಒಳಾಂಗಣವನ್ನು ಸ್ವೀಕರಿಸುತ್ತದೆ ಎಂದು ಕೊರಿಯನ್ ದೈತ್ಯ ಕಂಪನಿಯು ಹೇಳಿದೆ. ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯು 2023ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು.

ಈ ಹೊಸ ಹುಂಡೈ ಕ್ರೆಟಾ ಹೊಸ ವೆರ್ನಾ ಸೆಡಾನ್‌ನೊಂದಿಗೆ ಇಂಟೀರಿಯರ್ ಸ್ಟೈಲಿಂಗ್ ಅನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇದು ಇಂಟಿಗ್ರೇಟೆಡ್ ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಆಗಿದೆ. ಇದಲ್ಲದೆ ಎಸ್‍ಯುವಿ ವೆರ್ನಾದ ಬದಲಾಯಿಸಬಹುದಾದ ಹವಾಮಾನ ಮತ್ತು ಇನ್ಫೋಟೈನ್‌ಮೆಂಟ್ ಕಂಟ್ರೋಲ್ ಗಳನ್ನು ಪಡೆಯುವ ಸಾಧ್ಯತೆಯಿದೆ.

ಆದರೆ ಈ ಹೊಸ ಎಸ್‍ಯುವಿಯು 2024ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು 1.5-ಲೀಟರ್ NA ಪೆಟ್ರೋಲ್ ಮತ್ತು 1.5L ಟರ್ಬೊ ಡೀಸೆಲ್ ಎಂಜಿನ್ ಗಳಾಗಿದೆ. ಹ್ಯುಂಡೈ ಕಂಪನಿಯು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದೆ. ಏಕೆಂದರೆ ಇದನ್ನು BS6 ಹಂತ II ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುವುದಿಲ್ಲ.

ಹೊಸ ಹ್ಯುಂಡೈ ಕ್ರೆಟಾವು ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ವೀಕರಿಸುತ್ತದೆ, ಇದನ್ನು ಇತ್ತೀಚೆಗೆ ಹೊಸ ವೆರ್ನಾ ಮತ್ತು ಅಲ್ಕಾಜರ್‌ನಲ್ಲಿ ಪರಿಚಯಿಸಲಾಗಿದೆ. ಈ ಪವರ್‌ಟ್ರೇನ್ 160PS ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.4 ಲೀಟರ್ ಟರ್ಬೊ ಯುನಿಟ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಹೊಸ ಕ್ರೆಟಾ 1.5 ಲೀಟರ್ ಅದರ ವರ್ಗದಲ್ಲಿ ಅತ್ಯಂತ ಪವರ್ ಫುಲ್ ಮಾದರಿಗುತ್ತದೆ.

Article Published On: Monday, May 1, 2023, 8:30 [IST]
English summary
New hyundai creta electric suv spied testing details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+