ಬೈಕ್‌ನಂತೆ ಮೈಲೇಜ್, ಗರಿಷ್ಠ ಸುರಕ್ಷತೆಯೊಂದಿಗೆ ಬರುತ್ತಿದೆ ಹೊಸ ಹ್ಯುಂಡೈ ಕಾರು

ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹ್ಯುಂಡೈ ಕಂಪನಿಯು ಭಾರತದಲ್ಲಿ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಮುಂದಾಗಿದ, ಇದೀಗ ಹ್ಯುಂಡೈ ಹೊಸ ಎಕ್ಸ್‌ಟರ್ ಎಂಬ ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಹ್ಯುಂಡೈ ತನ್ನ ಮುಂಬರುವ ಎಕ್ಸ್‌ಟರ್ ಎಸ್‌ಯುವಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ 25 ಇತರ ಸುರಕ್ಷತಾ ಪೀಚರ್ಸ್ ಗಳೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದೆ. ಹ್ಯುಂಡೈ ಇಂಡಿಯಾ ಈ ಹೊಸ ಎಕ್ಸ್‌ಟರ್ ಎಸ್‍ಯುವಿಯಲ್ಲಿ ಲೋ-ಸ್ಪೆಕ್ ರೂಪಾಂತರಗಳಲ್ಲಿ ಹೆಚ್ಚುವರಿ ಸುರಕ್ಷತಾ ಫೀಚರ್ಸ್ ಗಳಆಯ್ಕೆಯನ್ನು ನೀಡುತ್ತದೆ.ಇನ್ನೂ ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಅಪಘಾತಗಳ ಸಂದರ್ಭದಲ್ಲಿ ಸಾಕ್ಷಿ ಒದಗಿಸಲು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್‌ನೊಂದಿಗೆ ಬರಲಿದೆ.

Hyundai Exter

ಮುಂಬರುವ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (ವಿಎಸ್‌ಎಂ), ಹಿಲ್-ಸ್ಟಾರ್ಟ್ ಅಸಿಸ್ಟ್, ಎಬಿಎಸ್, ಇಬಿಡಿ, ಐಎಸ್‌ಒಫಿಕ್ಸ್ ಆಂಕರಿಂಗ್ ಪಾಯಿಂಟ್‌ಗಳು, ರಿಮೈಂಡರ್‌ನೊಂದಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು (ಎಲ್ಲಾ ಸೀಟ್‌ಗಳು) ಒಳಗೊಂಡಿವೆ. ESS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಹೊಂದಿವೆ.

ಹುಂಡೈ ಇಂಡಿಯಾ ತನ್ನ ಮುಂಬರುವ ಮೈಕ್ರೋ ಎಸ್‌ಯುವಿ ಎಕ್ಸ್‌ಟರ್‌ಗಾಗಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಿದೆ. ಈ ಹೊಸ ಹುಂಡೈ ಎಕ್ಸ್‌ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್‌ಗಳಲ್ಲಿ ಬರುತ್ತದೆ. ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯ ಪವರ್‌ಟೈನ್ ಸೆಟಪ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ.

ಹ್ಯುಂಡೈ ಎಕ್ಸ್‌ಟರ್ ಎಂಟ್ರಿ ಲೆವೆಲ್ ಎಂಜಿನ್ ಆಯ್ಕೆಯು ವೆನ್ಯೂ , ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾ ನಂತಹ ಅದೇ .1.2-ಲೀಟರ್ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಆಗಿರುತ್ತದೆ .ಹುಂಡೈ ನಂತರದ ಹಂತದಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಅನ್ನು ಸೇರಿಸಬಹುದು. ಎಕ್ಸ್‌ಟರ್ ಫ್ಯಾಕ್ಟರಿ ಸಿಎನ್‌ಜಿ ಆಯ್ಕೆಯನ್ನು ಸಹ ಪಡೆಯುತ್ತದೆ. ಇದು ಹುಂಡೈನ ಅತ್ಯಂತ ಚಿಕ್ಕ ಎಸ್‍ಯುವಿ ಆಗಿರುತ್ತದೆ.

ಹ್ಯುಂಡೈ ಎಕ್ಸ್‌ಟರ್ ಕೆಲವು ವಿನ್ಯಾಸ ಅಂಶಗಳನ್ನು Grand i10 Nios ನೊಂದಿಗೆ ಹಂಚಿಕೊಂಡಾಗ , ಮೂರು ಹಂತದ ವಿನ್ಯಾಸದೊಂದಿಗೆ ಫ್ಲಾಟ್ ಬಾನೆಟ್ ಮತ್ತು ಸ್ಟೈಲಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿದೆ. ಮೇಲ್ಭಾಗದಲ್ಲಿ, ಇರಿಸಲಾದ ಇಂಡಿಕೇಟರ್ ಲ್ಯಾಂಪ್ ಗಳನ್ನು ಬ್ಲ್ಯಾಕ್ ಪಟ್ಟಿಯೊಂದಿಗೆ ಸಂಪರ್ಕಿಸಿದೆ. ಇನ್ನು ಕೆಲವು ರೂಪಾಂತರಗಳಲ್ಲಿ ಸಂಪರ್ಕಿತ ಎಲ್ಇಡಿಯನ್ನು ಹೊಂದಿರಬಹುದು. ಈ ಲ್ಯಾಂಪ್ ಗಳು ತಮ್ಮ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳಿಗಾಗಿ H- ಮಾದರಿಯ ನೋಟವನ್ನು ಪಡೆಯುತ್ತವೆ,

ಇದು ಭವಿಷ್ಯದಲ್ಲಿ ಸಾಂಟಾ ಫೆ ಮತ್ತು ಕ್ರೆಟಾ ಫೇಸ್‌ಲಿಫ್ಟ್‌ನಂತಹ ಹೆಚ್ಚಿನ ಹ್ಯುಂಡೈ ಎಸ್‌ಯುವಿಗಳಲ್ಲಿ ಕಂಡುಬರುತ್ತದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಯಲ್ಲಿ ಬ್ಲ್ಯಾಕ್ ಗ್ರಿಲ್ ಅಗಲವಾಗಿದೆ ಮತ್ತು ಮಧ್ಯದಲ್ಲಿ ಸರಿಯಾಗಿ ಇರುತ್ತದೆ. ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿ ಗ್ರಿಲ್ ಆವರಣದ ಒಳಗೆ ಚದರ ಹೆಡ್‌ಲ್ಯಾಂಪ್‌ಗಳನ್ನು ಇರಿಸಲಾಗಿದೆ. ಈ ಕಾರಿನ ಹೆಡ್‌ಲ್ಯಾಂಪ್‌ಗಳು ಪ್ರೊಜೆಕ್ಟರ್ ಯುನಿಟ್ ಗಳು ಹೊಂದಿರುವಂತೆ ಕಾಣುತ್ತದೆ ಮತ್ತು ಹೆಚ್ಚಿನ ರೂಪಾಂತರಗಳಿಗೆ ಎಲ್‌ಇಡಿ ಲ್ಯಾಂಪ್ ಗಳನ್ನು ಪಡೆಯಬಹುದು.

ಈ ಕಾರಿನ ಹೆಡ್‌ಲ್ಯಾಂಪ್‌ಗಳು ಪ್ರೊಜೆಕ್ಟರ್ ಯುನಿಟ್ ಗಳನ್ನು ಹೊಂದಿರುವಂತೆ ತೋರುತ್ತಿದೆ ಮತ್ತು ಹೆಚ್ಚಿನ ರೂಪಾಂತರಗಳಿಗೆ ಎಲ್‌ಇಡಿ ಲ್ಯಾಂಪ್ ಗಳನ್ನು ಪಡೆಯಬಹುದು. ಈ ಹೊಸ ಹ್ಯುಂಡೈ ಎಕ್ಸ್‌ಟರ್ ದುಂಡಗಿನ ಮತ್ತು ಸ್ವಲ್ಪ ವ್ಹೀಲ್ ಆರ್ಚ್‌ಗಳನ್ನು ಪಡೆಯುತ್ತದೆ, ಈ ಹೊಸ ಎಸ್‍ಯುವಿಯನ್ನು ಸ್ಕ್ವಾರಿಶ್ ನೋಟವನ್ನು ಸೇರಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಡೋರುಗಳನ್ನು ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ಅನುಕೂಲವಾಗುವಂತೆ ದೊಡ್ಡದಾಗಿದೆ ಎಂದು ತೋರುತ್ತದೆ, ದೊಡ್ಡ ವಿಂಡೋಗಳೊಂದಿಗೆ ಸರಳವಾಗಿದೆ.

Article Published On: Wednesday, May 17, 2023, 8:30 [IST]
English summary
New hyundai exter to come with dashcam 6 airbags more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+