New Hyundai i20: ಬಿಡುಗಡೆಗೂ ಮೊದಲೇ ಹೊಸ ಹ್ಯುಂಡೈ ಐ20 ಬುಕ್ಕಿಂಗ್ ಶುರು, ಬೆಲೆ ಎಷ್ಟು?

ದೇಶೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಕಾರುಗಳನ್ನು ಮಾರಾಟ ಮಾಡಿ, ಹ್ಯುಂಡೈ (Hyundai) ಭಾರೀ ಜನಪ್ರಿಯತೆ ಗಳಿಸಿದೆ. ಹಬ್ಬದ ಋತುವಿನ ವೇಳೆ, ಹಲವು ನವೀಕರಣಗಳನ್ನು ಪಡೆದುಕೊಂಡಿರುವ ಐ20 (i20) ಹ್ಯಾಚ್‌ಬ್ಯಾಕ್ ಬಿಡುಗಡೆಗೊಳಿಸಲು ಸಾಕಷ್ಟು ಸಿದ್ಧತೆ ನಡೆಸುತ್ತಿದೆ. ಇದೀಗ, ನೂತನ ಕಾರಿನ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.

ಈಗಾಗಲೇ, ದೇಶಾದ್ಯಂತ ಆಯ್ದ ಹ್ಯುಂಡೈ ಡೀಲರ್ಸ್ (Hyundai dealers) ನವೀಕರಿಸಿದ ಐ20 ಹ್ಯಾಚ್‌ಬ್ಯಾಕ್‌ಗಾಗಿ ಪ್ರಿ-ಬುಕ್ಕಿಂಗ್ ಶುರು ಮಾಡಿವೆ. ಆಸಕ್ತ ಗ್ರಾಹಕರು, ರೂ.5,000 ದಿಂದ ರೂ.21,000. ಪಾವತಿಸಿ, ಆರ್ಡರ್ ಮಾಡಬಹುದು. ಅನೇಕ ಬಾರಿ ಈ ನೂತನ ಐ20 ಕಾರಿನ ಸ್ಪೈ ಚಿತ್ರಗಳು, ಟೀಸರ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಕಂಡು ಬಂದಿವೆ.

New Hyundai i20: ಬಿಡುಗಡೆಗೂ ಮೊದಲೇ ಹೊಸ ಹ್ಯುಂಡೈ ಐ20 ಬುಕ್ಕಿಂಗ್ ಶುರು, ಬೆಲೆ ಎಷ್ಟು?

ನವೀಕರಣದೊಂದಿಗೆ ಬರುತ್ತಿರುವ ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್‌, ವಿನ್ಯಾಸದಲ್ಲಿ ಸಾಕಷ್ಟು ಹೊಸತನವನ್ನು ಹೊಂದಿರುವ ನೀರಿಕ್ಷೆಯಿದೆ. ಮರುವಿನ್ಯಾಸಗೊಳಿಸಿದ ಬಂಪರ್, ಹೈಡ್ ಲೈಟ್ಸ್, ಎಲ್ಇಡಿ DRLs, ಅಲಾಯ್ ವೀಲ್ಸ್, ಹೆಚ್ಚುವರಿಯಾಗಿ ಹೊಸ ಬಣ್ಣದ ಆಯ್ಕೆಯನ್ನು ಪಡೆದಿರುವ ಸಾಧ್ಯತೆಯಿದೆ. ಇದು ಬಿಟ್ಟರೆ, ಹಿಂದಿನ ಮಾದರಿಗೆ ಹೋಲಿಕೆಯಾಗುವ ಕೆಲವೊಂದು ಡಿಸೈನ್ ಅನ್ನು ಹಾಗೆಯೇ ಉಳಿಸಿಕೊಳ್ಳಬಹುದು.

ಮುಂಬರಲಿರುವ ಹ್ಯುಂಡೈ ಐ20 ಕಾರು, ಕ್ಯಾಬಿನ್ ಒಳಭಾಗವು ಹಲವು ಬದಲಾವಣೆಯನ್ನು ಒಳಗೊಂಡಿರಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಡುಯೆಲ್ ಕ್ಯಾಮೆರಾ - ಡ್ಯಾಶ್ ಕ್ಯಾಮ್, ಹೊಸದಾದ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಪಡೆದಿರಲಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬ್ಯಾಗ್, 360-ಡಿಗ್ರಿ ಕ್ಯಾಮೆರಾ, ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ಹೊಂದಿದೆ.

ನವೀಕರಣದೊಂದಿಗೆ ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹ್ಯುಂಡೈ ಐ20, ಹಿಂದಿನ ಮಾದರಿಯಂತೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಇದು, 83 PS ಗರಿಷ್ಠ ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಹಾಗೂ CVT ಆಟೊಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು.

ಮತ್ತೊಂದು, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರಲಿದ್ದು, 120 PS ಗರಿಷ್ಠ ಪವರ್ ಹಾಗೂ 172 Nm ಪೀಕ್ ಟಾರ್ಕ್ ಹೊರಹಾಕಬಹುದು. 7-ಸ್ವೀಡ್ DCT ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಾಗುವ ನೀರಿಕ್ಷೆಯಿದೆ. ಹ್ಯುಂಡೈ ಕಂಪನಿಯು ಈ ಐ20 ಕಾರಿನ ಬೆಲೆ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗಪಡಿಸಿಲ್ಲ. ಆದರೂ, ರೂ.10 ಲಕ್ಷ ಬೆಲೆ ಆಸುಪಾಸಿಗೆ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20 ರೂ.7.46 ಲಕ್ಷದಿಂದ ರೂ.11.88 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಮ್ಯಾಗ್ನಾ, ಸ್ಪೋರ್ಟ್ಜ್ ಸೇರಿದಂತೆ ನಾಲ್ಕು ರೂಪಾಂತರಗಳು ಹಾಗೂ 2 ಡ್ಯೂಯಲ್ ಟೋನ್, 6 ಮೊನೊಟೊನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದ್ದು, ಪೆಟ್ರೋಲ್ ಎಂಜಿನ್ ನೊಂದಿಗೆ ಮಾತ್ರ ಲಭ್ಯವಿದೆ. ವೇರಿಯೆಂಟ್ ಅನುಗುಣವಾಗಿ 19.65 - 21.0 kmpl ಮೈಲೇಜ್ ನೀಡುತ್ತದೆ.

ಈ ಹ್ಯುಂಡೈ ಐ20 ಕಾರಿನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಕನೆಕ್ಟ್ದ್ ಕಾರ್ ಟೆಕ್, ಆಟೋ ಕ್ಲೈಮೇಟ್ ಕಂಟ್ರೋಲ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ರಿವರ್ಸ್ ಕ್ಯಾಮೆರಾವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Thursday, September 7, 2023, 14:37 [IST]
English summary
New hyundai i20 car bookings start dealership details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+