ಹೊಸ ಕಿಯಾ ಕಾರೆನ್ಸ್ ಎಕ್ಸ್-ಲೈನ್ ಬಿಡುಗಡೆ: 2 ವೆರಿಯೆಂಟ್‌ಗಳಲ್ಲಿ ಲಭ್ಯ, ಬೆಲೆ ವಿವರಗಳು
ದಕ್ಷಿಣ ಕೊರಿಯಾ ಕಾರು ತಯಾರಕ ಕಂಪನಿಯಾದ ಕಿಯಾ ಭಾರತದಲ್ಲಿ ಕಾರೆನ್ಸ್ ಎಕ್ಸ್-ಲೈನ್ ಅನ್ನು ಬಿಡುಗಡೆ ಮಾಡಿದೆ. ಹೊಸ ಕಿಯಾ ಕಾರೆನ್ಸ್ ಎಕ್ಸ್-ಲೈನ್‌ನ ಬೆಲೆಯು ರೂ. 18.95 ಲಕ್ಷದಿಂದ ಪ್ರಾರಂಭವಾಗುತ್ತದೆ. (ಎಕ್ಸ್-ಶೋ ರೂಂ). ಕಿಯಾ ಕಾರೆನ್ಸ್ MPV ಅನ್ನು ಹೊಸ X-ಲೈನ್ ಸೆಟಪ್‌ಗಾಗಿ 6-ಸೀಟರ್‌ನಲ್ಲಿ ಮಾತ್ರ ನೀಡಲಾಗುತ್ತದೆ.
ಕಿಯಾ ಕಾರೆನ್ಸ್ ಎಕ್ಸ್-ಲೈನ್ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳೊಂದಿಗೆ ನೀಡಲಾದ ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತದೆ. ಇದರ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 158bhp ಪವರ್ ಮತ್ತು 253Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಮತ್ತೊಂದೆಡೆ, ಕಿಯಾ ಕಾರೆನ್ಸ್ ಎಕ್ಸ್-ಲೈನ್ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 113bhp ಪವರ್ ಮತ್ತು 250Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಕಾರೆನ್ಸ್ ಎಕ್ಸ್-ಲೈನ್ ಡೀಸೆಲ್‌ನಲ್ಲಿರುವ ಎಂಜಿನ್ ಅನ್ನು 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎರಡರ ಬೆಲೆಗಳು ಕೆಳಗಿನಂತಿವೆ.
Kia Carens X-Line Petrol 7DCT ವೇರಿಯಂಟ್ ಬೆಲೆ ರೂ. 18,94,900 ಆಗಿದ್ದರೆ ಡೀಸೆಲ್ 6AT ಮಾಡೆಲ್ ಬೆಲೆ ರೂ. 19,44,900 (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ). ಹೊಸ ಡಿಸೈನ್ ಬಗ್ಗೆ ಹೇಳುವುದಾದ್ರೆ ಕಾರೆನ್ಸ್ ಎಕ್ಸ್ ಲೈನ್ ಕ್ರೋಮ್ ರೇಡಿಯೇಟರ್ ಗಾರ್ನಿಶ್, ಸಿಲ್ವರ್ ಪೇಂಟೆಡ್ ಫ್ರಂಟ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು 16-ಇಂಚಿನ ಡ್ಯುಯಲ್-ಟೋನ್ ಕ್ರಿಸ್ಟಲ್ ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಇದರ ರೇಡಿಯೇಟರ್ ಗ್ರಿಲ್, ಮುಂಭಾಗ ಮತ್ತು ಹಿಂಭಾಗದ ಬಂಪರ್ ಡಿಸೈನ್, ಡೋರ್ ಗಾರ್ನಿಶ್, ರೂಫ್ ರ್ಯಾಕ್, ರಿಯರ್ ಸ್ಕಿಡ್ ಪ್ಲೇಟ್ ಮತ್ತು ORVM ಗಳು ಹೊಳಪು ಕಪ್ಪು ನೋಟವನ್ನು ಹೊಂದಿವೆ. ಹೊಸ ಕಿಯಾ ಕ್ಯಾರೆನ್ಸ್ ಎಕ್ಸ್-ಲೈನ್ ಹೊರಭಾಗದಲ್ಲಿ ವಿಶಿಷ್ಟವಾದ 'ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್' ಪೇಂಟ್ ಅನ್ನು ಕೂಡ ಹೊಂದಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತದೆ.
ಕಾರೆನ್ಸ್‌ನ ಎಕ್ಸ್-ಲೈನ್ ರೂಪಾಂತರಗಳಿಗೆ ಒಳಭಾಗವು ಸಹ ಬದಲಾವಣೆಗೆ ಒಳಗಾಗಿದೆ. ಕ್ಯಾಬಿನ್ ಡ್ಯುಯಲ್-ಟೋನ್ ಬ್ಲಾಕ್ ಮತ್ತು ಸ್ಪ್ಲೆಂಡಿಡ್ ಸೇಜ್ ಗ್ರೀನ್ ಥೀಮ್ ಅನ್ನು ಹೊಂದಿದೆ. ಸೀಟ್‌ಗಳು, ಆರ್ಮ್‌ರೆಸ್ಟ್‌ಗಳು, ಡೋರ್ ಕಾರ್ಡ್‌ಗಳು ಮತ್ತು ಸ್ಟೀರಿಂಗ್ ವೀಲ್‌ಗಳ ಮೇಲೆ ಆರೆಂಜ್ ಕಾಂಟ್ರಾಸ್ಟ್ ಹೊಲಿಗೆಯನ್ನು ಸಹ ಕಾಣಬಹುದಾಗಿದ್ದು, ಸ್ಪೋರ್ಟಿಯಾಗಿ ಕಾಣುತ್ತದೆ.

ಕಿಯಾ ಕ್ಯಾರೆನ್ಸ್ ಎಕ್ಸ್-ಲೈನ್‌ನ ಕ್ಯಾಬಿನ್‌ನಲ್ಲಿನ ಅತಿದೊಡ್ಡ ಬದಲಾವಣೆ ಎಂದರೆ ಹಿಂದಿನ ಸೀಟ್ ಎಂಟರ್‌ಟೈನ್‌ಮೆಂಟ್ ಘಟಕದ ರೂಪದಲ್ಲಿ ಬರುತ್ತದೆ. ಇದು ಪಾಡ್‌ಕಾಸ್ಟ್‌ಗಳು, ಸ್ಕ್ರೀನ್ ಮಿರರಿಂಗ್, ಪಿಂಕ್‌ಫಾಂಗ್ ಮತ್ತು ವಿವಿಧ ಮನರಂಜನೆ ಮತ್ತು ಸುದ್ದಿ ಅಪ್ಲಿಕೇಶನ್‌ಗಳಿಗೆ ಅವಕಾಶ ನೀಡುತ್ತದೆ. ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಳಸಿ ಹಿಂಭಾಗದ ಪ್ರದರ್ಶನವನ್ನು ನಿಯಂತ್ರಿಸಬಹುದಾಗಿದೆ.
ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯವಹಾರ ಅಧಿಕಾರಿ ಮ್ಯುಂಗ್-ಸಿಕ್ ಸೊಹ್ನ್, ಬಿಡುಗಡೆಯ ಕುರಿತು ಮಾತನಾಡಿ, "ನಮ್ಮ ಉತ್ಪನ್ನಗಳ ವಿಶಿಷ್ಟ ಗುರುತು ನಮಗೆ ಮಹತ್ವಾಕಾಂಕ್ಷೆಯ ಬ್ರ್ಯಾಂಡ್ ಆಗಲು ಸಹಾಯ ಮಾಡಿದೆ. ಹೊಸ ಎಕ್ಸ್-ಲೈನ್ ಜನಪ್ರಿಯತೆ ಗಳಿಸಿದೆ. ಗ್ರಾಹಕರು ಅದನ್ನು ಮುಂದಿನ ಹಂತಕ್ಕೆ ಏರಿಸಿದ್ದಾರೆ. ಖರೀದಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವಿಶಿಷ್ಟವಾದ ಮತ್ತು ವಿಶೇಷವಾದ ಉತ್ಪನ್ನಗಳನ್ನು ಪರಿಗಣಿಸುವ ಬಹಳಷ್ಟು ಖರೀದಿದಾರರನ್ನು ನಾವು ನೋಡುತ್ತಿದ್ದೇವೆ.

ಆದ್ದರಿಂದ ನಾವು ಈ ಟ್ರಿಮ್ ಅನ್ನು ನಮ್ಮ ಇಂಡಿಯಾ ವರ್ಷದ ಕಾರ್ - ಕಿಯಾ ಕ್ಯಾರೆನ್ಸ್‌ಗೆ ವಿಸ್ತರಿಸಲು ನಿರ್ಧರಿಸಿದ್ದೇವೆ. ನಾವು ಈಗಾಗಲೇ 100,000 ಗ್ರಾಹಕರ ಬೆಳೆಯುತ್ತಿರುವ ಕ್ಯಾರೆನ್ಸ್ ಕುಟುಂಬವನ್ನು ಹೊಂದಿದ್ದೇವೆ. X-ಲೈನ್ ಅದನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ ಎಂಬ ಬಲವಾದ ನಂಬಿಕೆ ನಮಗಿದೆ ಎಂದು ಮ್ಯುಂಗ್-ಸಿಕ್ ಸೊಹ್ನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ."


Click it and Unblock the Notifications








