ಅಗ್ಗದ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಕಾರು ಪರಿಚಯಿಸಿದ ಕಿಯಾ: ಎಂಜಿ ಕಾಮೆಟ್‌ಗೆ ನಡುಕ ಶುರು

ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ನಡುವೆ ಕಿಯಾ (Kia) ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಇದೀಗ ಕಿಯಾ ಕಂಪನಿಯು ತನ್ನ ಹೊಸ ಕಿಯಾ ರೇ (Kia Ray) ಎಲೆಕ್ಟ್ರಿಕ್ ಕಾರನ್ನು ಅಧಿಕೃತವಾಗಿ ಪರಿಚಯಿಸಿದೆ. ಈ ಹೊಸ ಕಿಯಾ ರೇ ಎಲೆಕ್ಟ್ರಿಕ್ ಕಾರಿಗೆ ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಬೆಲೆಯು 27.35 ಮಿಲಿಯನ್ ವೋನ್ ($20,500) ಆಗಿದ್ದು, ಇದನ್ನು ಭಾರತದ ಕರೆನ್ಸಿಯಲ್ಲಿ ರೂ.17 ಲಕ್ಷವಾಗುತ್ತದೆ. ಕಿಯಾ ರೇ ಎಲೆಕ್ಟ್ರಿಕ್ ಕಾರು ಅತ್ಯುತ್ತಮವಾಗಿ ಕಾಣುವ ಎಲೆಕ್ಟ್ರಿಕ್ ಕಾರ್ ಅಲ್ಲವಾದರೂ ಕಾಂಪ್ಯಾಕ್ಟ್ ಅನುಪಾತಗಳು ಮತ್ತು ಆನ್-ಪಾಯಿಂಟ್ ಸ್ಟೈಲಿಂಗ್ ಅನ್ನು ಹೊಂದಿದೆ.

Kia Ray EV

ಈ ಹೊಸ ಕಿಯಾ ರೇ ಕಾರು ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ಇಲ್ಲಿ ಮುಖ್ಯಾಂಶಗಳು ನವೀಕರಿಸಿದ ಹೆಡ್ ಲೈಟ್ ವಿನ್ಯಾಸವನ್ನು ಒಳಗೊಂಡಿವೆ. ವಾಹನದ ಒಟ್ಟಾರೆ ಅನುಪಾತಗಳು ಒಂದೇ ಆಗಿರುತ್ತವೆ ಅಂದರೆ ಎಲೆಕ್ಟ್ರಿಕ್ ಕಾರು ದಕ್ಷಿಣ ಕೊರಿಯಾದ ಲೈಟ್ ಕಾರ್ ವರ್ಗಕ್ಕೆ ಅರ್ಹತೆ ಪಡೆಯುತ್ತದೆ. ಇಲ್ಲಿ 3,600 mm ಉದ್ದ ಮತ್ತು 1,600 mm ಗಿಂತ ಕಡಿಮೆ ಅಗಲವಿರುವ ವಾಹನಗಳಿಗೆ ತೆರಿಗೆ ಪ್ರೋತ್ಸಾಹವನ್ನು ನೀಡುತ್ತದೆ.

ಕಿಯಾದಿಂದ ನವೀಕರಿಸಿದ ಈ ರೇ ಎಲೆಕ್ಟ್ರಿಕ್ ಕಾರು 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಾಲಮ್-ಟೈಪ್ ಎಲೆಕ್ಟ್ರಾನಿಕ್ ಶಿಫ್ಟ್ ಲಿವರ್, ಸೆಂಟ್ರಲ್ ಕ್ಲಸ್ಟರ್‌ನಲ್ಲಿ ಹೊಸ ಎಸಿ ಡಿಸ್ ಪ್ಲೇ ಮತ್ತು ಸ್ಟೋರೇಜ್ ಸ್ಪೇಸ್ ಅನ್ನು ಪಡೆಯುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಎಲ್ಲಾ ಸೀಟುಗಳನ್ನು ಫ್ಲಾಟ್ ಮಡಚಬಹುದು ಆದರೆ ಕಿಯಾ ಪ್ರಕಾರ, ಕಾರ್ಗೋ ಆವೃತ್ತಿಯು ಒಂದು-ಸೀಟ್ ಸೆಟಪ್ ಅನ್ನು ನೋಡುತ್ತದೆ.

Kia Ray EV

ಈ ಹೊಸ ಕಿಯಾ ರೇ ಎಲೆಕ್ಟ್ರಿಕ್ ಕಾರಿನಲ್ಲಿ ದೊಡ್ಡ ಅಪ್‌ಡೇಟ್ ಮಾದರಿಯಲ್ಲಿ ಗಣನೀಯವಾಗಿ ದೊಡ್ಡ ಬ್ಯಾಟರಿ ಪ್ಯಾಕ್ ಆಗಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಈಗ 35.2 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಈ ಹಿಂದೆ ಚಿಕ್ಕ 16.4 kWh ಯುನಿಟ್‌ಗೆ ವ್ಯತಿರಿಕ್ತವಾಗಿದೆ. ಇದರರ್ಥ ರೇಂಜ್ ಹೆಚ್ಚಳವು ಸಾಕಷ್ಟು ಮಹತ್ವದ್ದಾಗಿದೆ.

ಈ ಹಿಂದೆ ಮಾರಾಟವಾದ ಮಾದರಿಯಲ್ಲಿ 138 ಕಿಲೋಮೀಟರ್‌ಗಳಿಗೆ ಹೋಲಿಸಿದರೆ ಈ ಹೊಸ ರೇ ಎಲೆಕ್ಟ್ರಿಕ್ ಕಾರು ಸುಮಾರು 205 ಕಿಲೋಮೀಟರ್‌ಗಳವರೆಗೆ ರೇಂಜ್ ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ 150 kW ಚಾರ್ಜಿಂಗ್ ಡಾಕ್‌ಗಳನ್ನು ಬೆಂಬಲಿಸುತ್ತದೆಯಾದರೂ, 7 kW ಚಾರ್ಜರ್ ಅನ್ನು ಬಳಸುವಾಗ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ ಆಗಲು ಆರು ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.

ಇವು ಒಟ್ಟು 86 ಬಿಹೆಚ್‌ಪಿ ಪವರ್ ಮತ್ತು 146 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಿಯಾ ರೇ ಒಂದು ಮಿನಿ ಕಾರ್ ಆಗಿದ್ದು, ಇದನ್ನು ದಕ್ಷಿಣ ಕೊರಿಯಾದಲ್ಲಿ ಇತರ ದೇಶಗಳಲ್ಲಿ, ಇದರ ಪೆಟ್ರೋಲ್ ಎಂಜಿನ್ ಅವತಾದಲ್ಲಿ ವರ್ಷಗಳಿಂದ ಮಾರಾಟ ಮಾಡಲಾಗಿದೆ. ಕಿಯಾ ರೇ ಎಲೆಕ್ಟ್ರಿಕ್ ಆವೃತ್ತಿಯನ್ನು 2011 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು.

ಆ ಸಮಯದಲ್ಲಿ, ಇದು ದಕ್ಷಿಣ ಕೊರಿಯಾದಲ್ಲಿ ಮೊದಲ ಬೃಹತ್-ಉತ್ಪಾದಿತ ಎಲೆಕ್ಟ್ರಿಕ್ ಕಾರ್ ಆಗಿತ್ತು. ಆದರೆ ಹೊಸ ಕಿಯಾ ರೇ ಎಲೆಕ್ಟ್ರಿಕ್ ಕಾರು ಹಲವಾರು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ. ಈ ಕಿಯಾ ರೇ ಎಲೆಕ್ಟ್ರಿಕ್ ಕಾರು ಖರಿದಿಗಾಗಿ ದಕ್ಷಿಣ ಕೊರಿಯಾದಲ್ಲಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಪುಟ್ಟು ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಒಂದು ವೇಳೆ ಬಿಡುಗಡೆಯಾದರೆ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Thursday, August 24, 2023, 17:06 [IST]
English summary
New kia ray ev re introduced in south korea details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+