ಫೀಚರ್‌ ಪ್ಯಾಕಾಗಿ ಬಂದ‌ ಕಿಯಾ ಸೆಲ್ಟಸ್‌ ಫೇಸ್‌ಲಿಫ್ಟ್‌ 2023‌: ಇದು ಇದು ಆಕ್ಚುಯಲಿ ಚೆನ್ನಾಗಿರೋದು

ಬಹುನಿರೀಕ್ಷಿತ ಕಿಯಾ ಸೆಲ್ಟಸ್ ಫೇಸ್‌ಲಿಫ್ಟ್‌ ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣ ಆಗಿದ್ದು ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದೆ. ಈಗಾಗಲೇ ಮೊದಲ ಜನರೇಷನ್‌ನ ಕಿಯಾ ಸೆಲ್ಟಸ್‌ ಭಾರತೀಯರ ನೆಚ್ಚಿನ ಕಾರಾಗಿತ್ತು. ಹೀಗಾಗಿಯೇ ಕಿಯಾ ಸೆಲ್ಟಸ್‌ ಫೇಸ್‌ಲಿಫ್ಟ್‌ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ ಎಂಬ ಸುದ್ದಿ ಬಂದಾಗಲೇ ಜನರಲ್ಲಿ ಕುತೂಹಲ ಮನೆ ಮಾಡಿತ್ತು.

ಇದೀಗ ಕೊನೆಗೂ ಕಿಯಾ ಸೆಲ್ಟಸ್‌ ಫೇಸ್‌ಲಿಫ್ಟ್‌ ಜನರ ಕುತೂಹಲದ ನಿರೀಕ್ಷೆಯನ್ನು ಮುಟ್ಟಿದೆ ಎಂದೇ ಹೇಳಬಹುದು. ಪಕ್ಕಾ ಫೀಚರ್‌ ಪ್ಯಾಕ್‌ ಆಗಿ ಹೊರ ಬಂದಿದ್ದು ಇದರ ಕೆಲವೊಂದು ಫೀಚರ್‌ಗಳು ಜನರ ಮೆಚ್ಚುಗೆಗೆ ಪಾತ್ರವಾಗಿರಲಿದೆ ಎಂಬುದು ಹಲವರ ಲೆಕ್ಕಾಚಾರ. ಇಂದಿನ ಈ ಲೇಖನದಲ್ಲಿ ಕಿಯಾ ಸೆಲ್ಟಸ್ (Kia Seltos Facelift) ಫೇಸ್‌ಲಿಫ್ಟ್‌ ನ ಟಾಪ್‌ ಫೈವ್‌ ಫೀಚರ್‌ಗಳನ್ನು ನೋಡೋಣ.

Kia Seltos Facelift

1. ಅಡಾಸ್(ADAS)‌: ಹೊಸ ಕಿಯಾ ಸೆಲ್ಟಸ್‌ನಲ್ಲಿ ಕಂಪನಿಯು ಅಡಾಸ್‌ ಫೀಚರ್‌ ಅನ್ನು ಪರಿಚಯಿಸಿದೆ. ಇದರಿಂದ ಪ್ರಯಾಣ ಇನ್ನೂ ಆರಾಮದಾಯಕವಾಗಲಿದೆ ಎಂಬುದರಲ್ಲಿ ನಿಸ್ಸಂಶಯವಿಲ್ಲ. ಈಗಾಗಲೇ ಭಾರತದಲ್ಲಿ ಹಲವು ಕಾರುಗಳಲ್ಲಿ ನಾವು ಈ ಫೀಚರ್‌ ಅನ್ನು ನೊಡಿದ್ದೇವೆ. ಭಾರತದಲ್ಲಿ ಈ ಫೀಚರ್‌ ಅಷ್ಟೊಂದು ಉಪಯೋಗಕ್ಕೆ ಬರದೇ ಇದ್ದರು, ಹೆದ್ದಾರಿಗಳಲ್ಲಿ ಉಪಯೋಗವಾಗಲಿದೆ.

2. ಟ್ವಿನ್‌ ಸ್ಕ್ರೀನ್‌ ಕರ್ವ್‌ ಡಿಸ್ಪ್ಲೇ: 2023 ರ ಕಿಯಾ ಸೆಲ್ಟೋಸ್‌ (Kia Seltos) ಫೇಸ್‌ಲಿಫ್ಟ್‌ನಲ್ಲಿ ಹೊಸ ಟ್ವಿನ್‌ ಸ್ಕ್ರೀನ್‌ ಕರ್ವ್‌ ಡಿಸ್ಪ್ಲೇಗಳು ಸಿಗಲಿದೆ. ಆರಂಭದಲ್ಲಿ ಮರ್ಸಿಡಿಸ್‌ ಬೆಂಝ್ ಪರಿಚಯಿಸಿದ್ದ ಈ ಫೀಚರ್‌, ಬರು ಬರುತ್ತಾ ಮಹೀಂದ್ರಾ ಎಕ್ಸ್‌ಯುವಿ 700 ಮತ್ತು ಹ್ಯುಂಡೈ ವರ್ನಾ ಕಾರುಗಳಲ್ಲಿ ನಾವು ಈ ಫೀಚರ್‌ ಕಂಡು ಬಂದಿತ್ತು.

Kia Seltos Facelift

3. ಪಾನೋರಾಮಿಕ್‌ ಸನ್‌ರೂಫ್‌: ಭಾರತೀಯರ ನಡುವೆ ಕಾರುಗಳಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವ ಫೀಚರ್‌ ಎಂದರೆ ಅದು ಅದು ಪಾನೋರಾಮಿಕ್‌ ಸನ್‌ರೂಫ್‌. ಇಲ್ಲಿಯ ತನಕ ಕಿಯಾ ಸೆಲ್ಟೋಸ್‌ನಲ್ಲಿ ಈ ಫೀಚರ್‌ ಲಭ್ಯವಿರಲಿಲ್ಲ. ಆದರೆ ಈ ಬಾರಿಯ ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ನಲ್ಲಿ ಇದು ಸಿಗಲಿದೆ.

4. ವೈರ್‌ಲೆಸ್‌ ಆಪಲ್‌ ಕಾರ್‌ಪ್ಲೇ / ಆ್ಯಂಡ್ರಾಯ್ಡ್‌ ಆಟೋ: ಹೊಸ ಕಿಯಾ ಸೆಲ್ಟೋಸ್‌ನಲ್ಲಿ ಈ ಫೀಚರ್‌ ಲಭ್ಯವಾಗಲಿದೆ. ಈ ಫೀಚರ್‌ನ ಸಹಾಯದಿಂದ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ ಆಗಿ ಬದಲಾಯಿಸಿಕೊಳ್ಳಬಹುದಾಗಿದೆ. ಇದರ ಮೂಲಕ ಕಿಯಾ ಸೆಲ್ಟೋಸ್‌ ಕ್ಯಾಬಿನ್‌ ಸಂಪೂರ್ಣ ವಯರ್‌ಲೆಸ್‌ ಆಗಲಿದೆ.

5. ಡ್ಯುಯಲ್‌ ಜೋನ್‌ ಕ್ಲೈಮೇಟ್‌ ಕಂಟ್ರೋಲ್‌: ಈ ಸೆಗ್ಮೆಂಟ್‌ಗಳಲ್ಲೇ ಡ್ಯುಯಲ್‌ ಜೋನ್‌ ಕ್ಲೈಮೇಟ್‌ ಕಂಟ್ರೋಲ್ ಪರಿಚಯಿಸುತ್ತಿರುವ ಮೊದಲ ಎಸ್‌ಯುವಿ ಈ ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌. ಇನ್ನು ಇದಕ್ಕಿಂತ‌ ಕೆಳಸೆಗ್ಮೆಂಟ್‌ ನ ಕಾರಾದ ಮಹೀಂದ್ರಾ ಎಕ್ಸ್‌ಯುವಿ 300 ನಲ್ಲಿ ಈ ಫೀಚರ್‌ ಅನ್ನು ಪರಿಚಯಿಸಲಾಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 4, 2023, 18:29 [IST]
English summary
New kia seltos top things to know details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+