Kia: ಬೆಂಗಳೂರಿನಲ್ಲಿ ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಕಾಣಿಸಿಕೊಂಡಿತು, ಭರ್ಜರಿ ಗುರು!
ಭಾರತದ ಕಾರು ಮಾರುಕಟ್ಟೆಗೆ ಕೆಲವೇ ವರ್ಷಗಳ ಹಿಂದೆ, ಪ್ರವೇಶಿಸಿದ ದಕ್ಷಿಣ ಕೊರಿಯಾ ಮೂಲಕ ಕಿಯಾ (Kia), ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಸದ್ಯ, ನವೀಕರಿಸಿದ ಸೋನೆಟ್ (Sonet facelift) ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಾಕಷ್ಟು ತಯಾರಿ ನಡೆಸುತ್ತಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಇತ್ತೀಚೆಗೆ, ಫೇಸ್‌ಲಿಫ್ಟ್ ಕಿಯಾ ಸೋನೆಟ್ ಬೆಂಗಳೂರಿನ (Bangalore) ಏರ್ಪೋರ್ಟ್ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ಆ ಫೋಟೋಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿವೆ. ಮುಂಬರಲಿರುವ ಈ ನೂತನ ಎಸ್‌ಯುವಿ ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಹಲವು ಹೊಸತನಗಳನ್ನು ಹೊಂದಿರಲಿದ್ದು, ಇದೇ ವರ್ಷದ (2023) ಡಿಸೆಂಬರ್ ವೇಳೆಗೆ ಬಿಡುಗಡೆಯಾಗುವ ಎಲ್ಲ ಸಾಧ್ಯತೆಯಿದೆ.

ಸೋರಿಕೆಯಾಗಿರುವ ಚಿತ್ರಗಳನ್ನು ಗಮನಿಸಿದರೆ, ಈ ಫೇಸ್‌ಲಿಫ್ಟ್ ಕಿಯಾ ಸೋನೆಟ್, ಹೊಸದಾದ ಡ್ಯುಯಲ್ - ಟೋನ್ ಅಲಾಯ್ ವೀಲ್ಸ್, ಶಾರ್ಕ್ - ಫಿನ್ ಆಂಟೆನಾ ಮತ್ತು ಹೈ - ಮೌಂಟೆಡ್ ಸ್ಟಾಪ್ ಲ್ಯಾಂಪ್ ಪಡೆದಿದೆ. ರೇರ್ ಎಲ್ಇಡಿ ಟೈಲ್ ಲ್ಯಾಂಪ್ ಹೊಂದಿದೆ. ಒಳಭಾಗವೂ ಹೆಚ್ಚು ಅತ್ಯಾಧುನಿಕವಾಗಿರಲಿದ್ದು, ಇತ್ತೀಚೆಗೆ ಬಿಡುಗಡೆಯಾದ ನವೀಕರಿಸಿದ ಸೆಲ್ಟೋಸ್‌ನಂತೆ ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ಹೊಂದಿರುವ ಸಾಧ್ಯತೆಯಿದೆ.
ಇದರೊಂದಿಗೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯಾಶ್ ಕ್ಯಾಮ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಒಳಗೊಂಡಿರುವ ನಿರೀಕ್ಷೆಯಿದೆ. ಈ ಕಾರು, 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.0 - ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5 - ಲೀಟರ್ ಡೀಸೆಲ್ ಎಂಜಿನ್ ಹೊಂದಿರಬಹುದು. ಫೇಸ್‌ಲಿಫ್ಟ್ ಸೋನೆಟ್ ಎಸ್‌ಯುವಿಗೆ ಟಾಟಾ ನೆಕ್ಸನ್, ಮಾರುತಿ ಸುಜುಕಿ ಫ್ರಾಂಕ್ಸ್, ಬ್ರೆಝಾ, ರೆನಾಲ್ಟ್ ಕಿಗರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ನೂತನ ಫೇಸ್‌ಲಿಫ್ಟ್ ಸೋನೆಟ್ ಬೆಲೆ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಕಿಯಾ ಸೋನೆಟ್ ಎಸ್‌ಯುವಿ, ರೂ.7.79 ಲಕ್ಷದಿಂದ ರೂ.14.89 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 5 ಆಸನ ಆಯ್ಕೆ ವ್ಯವಸ್ಥೆ ಪಡೆದಿದ್ದು, ಹೆಚ್‍ಟಿಇ , ಹೆಚ್‍ಟಿಕೆ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಈ ಕಾರು, 1 - ಲೀಟರ್ ಪೆಟ್ರೋಲ್, 1.2 - ಲೀಟರ್ ಪೆಟ್ರೋಲ್ ಹಾಗೂ 1.5 - ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಜೊತೆಗೆ ವೇರಿಯೆಂಟ್ ಅನುಗುಣವಾಗಿ 6 - ಸ್ವೀಡ್ ಮ್ಯಾನುವಲ್ ಅಥವಾ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 18.4 kmpl ನಿಂದ 19 kmpl ಮೈಲೇಜ್ ನೀಡುತ್ತದೆ.
ಕಿಯಾ ಸೋನೆಟ್ ಎಸ್‌ಯುವಿ, ಇಂಪೀರಿಯಲ್ ಬ್ಲೂ, ಸ್ಪಾರ್ಕ್ಲಿಂಗ್ ಸಿಲ್ವರ್, ಇಂಟೆನ್ಸ್ ರೆಡ್, ಗ್ಲೇಸಿಯರ್ ವೈಟ್ ಪರ್ಲ್, ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಒಳಗೊಂಡಿದ್ದು, ಈ ಮೂಲಕ ಹೆಚ್ಚು ಅತ್ಯಾಧುನಿಕವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: TeamBHP


Click it and Unblock the Notifications








