Kia sonet facelift: ಟೀಸರ್‌ನಲ್ಲಿ ADAS ವೈಶಿಷ್ಟ್ಯ ಬಹಿರಂಗ: ಪ್ರತಿಸ್ಪರ್ಧಿಗಳಿಗೆ ಶುರುವಾಯ್ತು ಭಯ!

Kia sonet facelift: ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸಬ್ 4ಮೀ. SUV ವಿಭಾಗವು ಸಖತ್ ಬೇಡಿಕೆಯನ್ನು ಹೊಂದಿದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್ ಹೆಚ್ಚಿನ ಪ್ರಾಬಲ್ಯ ಹೊಂದಿವೆ. ಇವೆರಡರ ಜೊತೆಗೆ ಹ್ಯುಂಡೈ ವೆನ್ಯೂ ಕೂಡ ಸಾಕಷ್ಟು ಪೈಪೋಟಿ ನೀಡುತ್ತದೆ. ಹಾಗಾದ್ರೆ ಕಿಯಾ ಸಾನೆಟ್ ಪರಿಸ್ಥಿತಿಯೇನು?

ಈ ಮಟ್ಟದ ಪೈಪೋಟಿಯನ್ನು ಎದುರಿಸಿ ಮುನ್ನುಗ್ಗಲು ಕಿಯಾ ಸರಿಯಾದ ಫೇಸ್‌ಲಿಫ್ಟ್ ಸಾನೆಟ್ ಅನ್ನು ಇಳಿಸಲು ಸಜ್ಜಾಗಿದೆ. ಕಿಯಾ ಸಾನೆಟ್ ಫೇಸ್‌ಲಿಫ್ಟ್ (Kia sonet facelift) ಡಿಸೆಂಬರ್ 14 ರಂದು ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿದೆ. ಮೂಲಗಳ ಪ್ರಕಾರ 2024 ರ ಆರಂಭದಲ್ಲಿ ಬಿಡುಗಡೆ ಆಗಬಹುದು. ಇದೀಗ ಹೊಸ ಅನಿರೀಕ್ಷಿತ ಮಾಹಿತಿಯೆಂದರೆ ಇದರಲ್ಲಿನ ADAS ವೈಶಿಷ್ಟ್ಯ.

new-kia-sonet-facelift-teaser-revealed-adas-feature

ಹೌದು, ಇತ್ತೀಚಿನ ಟೀಸರ್ ವೀಡಿಯೊದಲ್ಲಿ ಕಂಪನಿಯು ಸಾನೆಟ್‌ನೊಂದಿಗೆ ADAS ತಂತ್ರಜ್ಞಾನವನ್ನು ದೃಢೀಕರಿಸಿದೆ. ಎಂಟ್ರಿ ಲೆವಲ್ ಕಾರಿನಲ್ಲಿ ವೈಶಿಷ್ಟ್ಯಭರಿತ ಎಸ್‌ಯುವಿಯನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಹ್ಯುಂಡೈ ವೆನ್ಯೂಗೆ ತೀವ್ರ ಪೈಪೋಟಿ ನೀಡಲು ರೆಡಿಯಾಗುತ್ತಿದೆ.

ಕಿಯಾ ಸಾನೆಟ್ ಫೇಸ್‌ಲಿಫ್ಟ್ ADAS: ಸಬ್ 4 ಮೀಟರ್ SUV ವಿಭಾಗದಲ್ಲಿ ಮೊದಲ ಬಾರಿಗೆ ADAS ಅನ್ನು ಪಡೆದ ಕಾರು ಹುಂಡೈ ವೆನ್ಯೂ. ಈಗ ಅದರ Kia ಕೌಂಟರ್ಪಾರ್ಟ್ Sonet ಕೂಡ ಮುಂಬರುವ ಫೇಸ್‌ಲಿಫ್ಟೆಡ್ ಮಾಡೆಲ್‌ನೊಂದಿಗೆ ಇದೇ ರೀತಿಯ ಸಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧವಾಗಿದೆ.

new-kia-sonet-facelift-teaser-revealed-adas-feature

ಸಾನೆಟ್ ADAS ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, Kia ತನ್ನ ದೊಡ್ಡ ಸಹೋದರ ಸೆಲ್ಟೋಸ್‌ನೊಂದಿಗೆ ನೋಡಿದ ಅದೇ 17 ವೈಶಿಷ್ಟ್ಯಗಳನ್ನು ಪಡೆಯುತ್ತದೆಯೇ ಅಥವಾ ಹುಂಡೈ ವೆನ್ಯೂ ಸಿಸ್ಟಮ್‌ನಲ್ಲಿ ನೋಡಿದ 8 ADAS ವೈಶಿಷ್ಟ್ಯಗಳನ್ನು ಪಡೆಯುತ್ತದೆಯೇ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ನಮ್ಮ ಪ್ರಕಾರ ಹುಂಡೈ ವೆನ್ಯೂನಲ್ಲಿ ನೀಡಲಾದ ಅಡಾಸ್ ವೈಶಿಷ್ಟ್ಯಗಳನ್ನು ಇದರಲ್ಲು ನೀಡಬಹುದು.

ಈಗ ಹೊರ ಬಂದ ಟೀಸರ್‌ನಲ್ಲಿ, ಕಾರ್‌ಗಳು, ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳು ಅಡ್ಡ ಬಂದಾಗ ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ (Forward collision warning) ಮತ್ತು ಫಾರ್ವರ್ಡ್ ಡಿಕ್ಕಿ-ತಡೆಗಟ್ಟುವಿಕೆ (Forward collision-avoidance)ಯನ್ನು ಕಿಯಾ ಪ್ರದರ್ಶಿಸಿದೆ. ಇತರ ADAS ವೈಶಿಷ್ಟ್ಯಗಳಾದ ಲೇನ್ ಕೀಪಿಂಗ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಡ್ರೈವರ್ ಅಟೆನ್ಶನ್ ವಾರ್ನಿಂಗ್, ಲೇನ್ ಫಾಲೋಯಿಂಗ್ ಅಸಿಸ್ಟ್, ಹೈ-ಬೀಮ್ ಅಸಿಸ್ಟ್, ಲೀಡಿಂಗ್ ವೆಹಿಕಲ್ ಡಿಪಾರ್ಚರ್ ಅಲರ್ಟ್ ಸೇರಿವೆ.

new-kia-sonet-facelift-teaser-revealed-adas-feature

ಫೇಸ್‌ಲಿಫ್ಟ್‌ನೊಂದಿಗೆ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಸಹ ಕಂಪನಿ ಬಹಿರಂಗಪಡಿಸಿದೆ. ಹೊಸ ಫೇಸ್‌ಲಿಫ್ಟೆಡ್ ಮಾಡೆಲ್ ಹೊಸ ಗ್ರಿಲ್ ದೊಡ್ಡ ಎಲ್ಇಡಿ ಡಿಆರ್ಎಲ್ ಸಿಗ್ನೇಚರ್‌ಗಳನ್ನು ಪಡೆದಿದೆ. ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಮುಂಭಾಗದ ಬಂಪರ್ ಜೊತೆಗೆ ಎಲ್ಇಡಿ ಫಾಗ್ ಲೈಟ್‌ಗಳು ಎಸ್‌ಯುವಿಗೆ ಆಕ್ರಮಣಕಾರಿ ಲುಕ್‌ ನೀಡಿವೆ. ನೇರವಾಗಿ ನೋಡಿದ್ರೆ ಮಸ್ಕುಲರ್ ಲುಕ್‌ನಲ್ಲಿ ಎಂಥವರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೆಡ್‌ಲೈಟ್ ಟ್ರಿಪಲ್ ಪಾಡ್ ರಿಫ್ಲೆಕ್ಟರ್ ಸೆಟಪ್ ಪ್ರಸ್ತುತ ಮಾರಾಟದಲ್ಲಿರುವ ಸಾನೆಟ್‌ನಂತೆಯೇ ಇದೆ ಎಂದು ತೋರುತ್ತದೆ. ಒಟ್ಟಾರೆ ಗ್ರಿಲ್ ಈಗ ದಪ್ಪವಾಗಿ ಕಾಣುತ್ತಿದ್ದು, ಹಿಂಭಾಗದ ಟೈಲ್ ಲೈಟ್ ವಿಷಯಕ್ಕೆ ಬಂದರೆ ಎಲ್‌ಇಡಿ ಬಾರ್ ಮತ್ತು ಪರಿಷ್ಕೃತ ಎಲ್‌ಇಡಿ ಸೆಟಪ್ ಅನ್ನು ಪಡೆದಿಕೊಂಡಿದೆ. ಹಿಂಬದಿಯ ಇಂಡಿಕೇಟರ್‌ಗಳು ಸೆಲ್ಟೋಸ್‌ನಂತೆ ಎಲ್‌ಇಡಿ ಆಗಿರುವಂತೆ ತೋರುತ್ತಿದೆ.

new-kia-sonet-facelift-teaser-revealed-adas-feature

ಇಂಟೀರಿಯರ್ ವಿಷಯಕ್ಕೆ ಬಂದರೆ, ಅದೇ ಇನ್ಫೋಟೈನ್ಮೆಂಟ್ ಸೆಟಪ್ ಇದ್ದು, ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಈಗ ಸಂಪೂರ್ಣ ಡಿಜಿಟಲ್ ಆಗಿದೆ. ಈ ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಸೆಲ್ಟೋಸ್‌ನಂತೆಯೇ ಕಾಣುತ್ತದೆ. ADAS-ಸಂಬಂಧಿತ ವಿವರಗಳನ್ನು ಒಳಗೊಂಡಂತೆ ವಿವಿಧ ಕಾರ್ಯಗಳನ್ನು ತೋರಿಸಲು ಮಧ್ಯದಲ್ಲಿ ಮೀಸಲಾದ ಸ್ಥಳವನ್ನು ಹೊಂದಿದೆ.

ಪವರ್‌ಟ್ರೇನ್‌ಗಳಿಗೆ ಸಂಬಂಧಿಸಿದಂತೆ, ಕಿಯಾ ಮೊದಲಿನಂತೆಯೇ ಅದೇ ಎಂಜಿನ್ ಮತ್ತು ಗೇರ್‌ಬಾಕ್ಸ್ ಕೊಡುಗೆಗಳನ್ನು ಮುಂದುವರಿಸುವ ಸಾಧ್ಯತೆಯಿದೆ. ಅವುಗಳೆಂದರೆ 1.2L 4-ಸಿಲಿಂಡರ್ ಕಪ್ಪಾ NA ಪೆಟ್ರೋಲ್ (82 bhp, 115 Nm, 5MT), 1.0L 3-ಸಿಲಿಂಡರ್ GDI ಟರ್ಬೊ ಪೆಟ್ರೋಲ್ (118 bhp, 172 Nm, 6iMT, 7DCT) ಮತ್ತು 1.5L 4-ಸಿಲಿಂಡರ್ ಟರ್ಬೊ ಡೀಸೆಲ್ (114 bhp, 250 Nm, 6iMT, 6TC).

More from DriveSpark

Article Published On: Wednesday, December 6, 2023, 17:00 [IST]
English summary
New kia sonet facelift teaser revealed adas feature
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+