ಭರ್ಜರಿ 35 ಕಿ.ಮೀ ಮೈಲೇಜ್, ಅಗ್ಗದ ಬೆಲೆಯಲ್ಲಿ ಮಹೀಂದ್ರಾ ಜೀತೋ ಸ್ಟ್ರಾಂಗ್ ಬಿಡುಗಡೆ

ಮಹೀಂದ್ರಾದ ಅಂಗಸಂಸ್ಥೆಯಾದ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML) "ಮಹೀಂದ್ರಾ ಜೀತೋ ಸ್ಟ್ರಾಂಗ್" ಅನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ 2,00,000ಕ್ಕೂ ಹೆಚ್ಚು ಸಂತೃಪ್ತ ಜೀತೋ ಗ್ರಾಹಕರಿದ್ದು, ಈಗ ಜೀತೋ ಸ್ಟ್ರಾಂಗ್ ಪರಿಚಯಿಸುವಿಕೆಯೊಂದಿಗೆ ಬ್ರ್ಯಾಂಡ್‌ನ ಮೌಲ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಹೀಂದ್ರಾ ಜೀತೋ ಸ್ಟ್ರಾಂಗ್ (Mahindra Jeeto Strong) ತನ್ನ ವಿಭಾಗದಲ್ಲಿ ಅತ್ಯುತ್ತಮ ಮೈಲೇಜ್ - ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಡೀಸೆಲ್ ಆವೃತ್ತಿಯಲ್ಲಿ 815 ಕೆ.ಜಿ ಮತ್ತು ಸಿಎನ್‌ಜಿಯಲ್ಲಿ 750 ಕೆ.ಜಿಯಷ್ಟು ಹೆಚ್ಚಿನ ಪೇಲೋಡ್ ಸಾಮರ್ಥ್ಯದೊಂದಿಗೆ ಬರುತ್ತದೆ. ಅಲ್ಲದೇ ವಿನ್ಯಾಸದಲ್ಲೂ ಈಗಿನ ಎಲ್ಲಾ ವಾಹನಗಳಿಗಿಂತ ಆಧುನಿಕವಾಗಿ ಕಾಣುತ್ತದೆ.

new-mahindra-jeeto-strong-launched-best-in-mileage

ಮಹೀಂದ್ರಾ ಜೀತೋ ಸ್ಟ್ರಾಂಗ್ ಮೈಲೇಜ್ ವಿಷಯದಲ್ಲೂ ನಿರಾಸೆಗೊಳಿಸುವುದಿಲ್ಲ. ಡೀಸೆಲ್ ವೇರಿಯೆಂಟ್‌ನಲ್ಲಿ 32 ಕಿ.ಮೀ/ಲೀ, ಸಿಎನ್‌ಜಿಯಲ್ಲಿ 35 ಕಿ.ಮೀ/ಕೆಜಿ) ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಈ ಸಬ್-2 ಟನ್ ICE ಕಾರ್ಗೋ 4-ವೀಲರ್‌ನಲ್ಲಿ ಎಲೆಕ್ಟ್ರಿಕ್ ವ್ಯಾಕ್ಯೂಮ್ ಪಂಪ್-ಅಸಿಸ್ಟೆಡ್ ಬ್ರೇಕಿಂಗ್, ಬಳಕೆದಾರ- ಸ್ನೇಹಿ ಹೊಚ್ಚಹೊಸ ಡಿಜಿಟಲ್ ಕ್ಲಸ್ಟರ್ ಮತ್ತು ಸುಧಾರಿತ ಸಸ್ಪೆನ್ಷನ್ ನೀಡಲಾಗಿದೆ.

ಮಾಲೀಕತ್ವದ ಅನುಭವವನ್ನು ಹೆಚ್ಚಿಸಲು, ಮಹೀಂದ್ರಾ ತನ್ನ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಚಾಲಕನಿಗೆ ರೂ. 10 ಲಕ್ಷ ಮೌಲ್ಯದ ಉಚಿತ ಅಪಘಾತ ವಿಮೆಯನ್ನು ಸಹ ನೀಡುತ್ತಿದೆ. ಗುಣಮಟ್ಟ ಮತ್ತು ಬಾಳಿಕೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಸಾಟಿಯಿಲ್ಲದ 3 ವರ್ಷ ಅಥವಾ 72,000 ಕಿ.ಮೀ ವಾರಂಟಿಯನ್ನು ಸಹ ಮಹೀಂದ್ರಾ ಒದಗಿಸುತ್ತದೆ ಎಂದು ಭರವಸೆ ನೀಡಿದೆ.

new-mahindra-jeeto-strong-launched-best-in-mileage

ಜೀತೋ ಸ್ಟ್ರಾಂಗ್ ಜೀತೋ ಪ್ಲಸ್ (ಡೀಸೆಲ್ ಮತ್ತು ಸಿಎನ್‌ಜಿ) ಗೆ ಉತ್ತರಾಧಿಕಾರಿಯಾಗಿದ್ದು, ಎರಡನೆಯದಕ್ಕಿಂತ 100 ಕೆ.ಜಿ ಹೆಚ್ಚುವರಿ ಪೇಲೋಡ್ ಹೊಂದಿದೆ. ಹೊಸ ಜೀತೋ ಸ್ಟ್ರಾಂಗ್ ಆಕರ್ಷಕ ಬೆಲೆ ರೂ. 5.28 ಲಕ್ಷ (ಡೀಸೆಲ್) ಮತ್ತು ರೂ. 5.55 ಲಕ್ಷ (ಸಿಎನ್‌ಜಿ) ಈ ಎರಡೂ ಬೆಲೆಗಳು ಪುಣೆ ಎಕ್ಸ್ ಶೋರೂಂ ಆಗಿವೆ. ಸ್ಥಳೀಯ ಬೆಲೆಯನ್ನು ತಿಳಿಯಲು ಆನ್‌ಲೈನ್‌ ಮಹೀಂದ್ರಾ ವೆಬ್‌ ತಾಣಕ್ಕೆ ಭೇಟಿ ನೀಡಬಹುದು.

MLMML ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸುಮನ್ ಮಿಶ್ರಾ ಮಾತನಾಡಿ, "ಮಹೀಂದ್ರಾದಲ್ಲಿ, ನಾವು ಗ್ರಾಹಕರ ಪ್ರತಿಕ್ರಿಯೆ ಮತ್ತು ಅವರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ನಿರಂತರವಾಗಿ ಕೇಳುತ್ತೇವೆ. ನಿರಂತರ ಪ್ರಗತಿಗೆ ನಮ್ಮ ಬದ್ಧತೆ ಸಾಕ್ಷಿಯಾಗಿದೆ. ಜೀತೋ ಸ್ಟ್ರಾಂಗ್ ಈಗ ಸಾಟಿಯಿಲ್ಲದ ಪೇಲೋಡ್ ಸಾಮರ್ಥ್ಯದೊಂದಿಗೆ ಬರುವ ಅತ್ಯುತ್ತಮ ಉನ್ನತವಾಗಿದೆ ಎಂದರು.

new-mahindra-jeeto-strong-launched-best-in-mileage

ಮೈಲೇಜ್ ಮತ್ತು ಆಕರ್ಷಕ ಬೆಲೆಯು ಅದರ ವಿಭಾಗದಲ್ಲಿ ಗ್ರಾಹಕರಿಗೆ ಬಲವಾದ ಆಯ್ಕೆಯನ್ನಾಗಿ ಮಾಡುತ್ತದೆ. ಇದು ಕೊನೆಯ ಮೈಲಿ ಸರಕು ವಿತರಣೆಯನ್ನು ಮಾತ್ರವಲ್ಲದೆ ನಮ್ಮ ಚಾಲಕ ಪಾಲುದಾರರ ಜೀವನವನ್ನು ಸಹ ಪರಿವರ್ತಿಸುತ್ತದೆ, ಅವರಿಗೆ ಹೆಚ್ಚಿನ ಹಣ ತಲುಪಿಸಲು, ಹೆಚ್ಚು ಹಣ ಉಳಿಸಲು ಮತ್ತು ಹೆಚ್ಚಿನ ಮೌಲ್ಯವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 4, 2023, 10:22 [IST]
English summary
New mahindra jeeto strong launched best in mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+