ಜಿಮ್ನಿ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಸಜ್ಜಾದಾಗ ಮಹೀಂದ್ರಾ ಥಾರ್ 5-ಡೋರ್ ಬಿಡುಗಡೆ ಮತ್ತಷ್ತು ತಡ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜಿಮ್ನಿ ಎಸ್‌ಯುವಿಯ 5-ಡೋರ್ ಆವೃತ್ತಿಯ ಬಿಡುಗಡೆಗೆ ಸಜ್ಜಾಗಿದೆ. ಆದರೆ ಮತ್ತೊಂದು ಜನಪ್ರಿಯ ಆಫ್-ರೋಡರ್ ಆದ ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ಬಿಡುಗಡೆಗಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಇದು ಬಹುನಿರೀಕ್ಷೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಬೇಸರ ಮೂಡಿಸಬಹುದು.

FY23 ಫಲಿತಾಂಶಗಳಿಗಾಗಿ ಕಂಪನಿಯ ಇತ್ತೀಚಿನ ಪ್ರೆಸ್ ಮೀಟ್‌ನಲ್ಲಿ 5-ಡೊರಿನ ಥಾರ್‌ನ ಬಿಡುಗಡೆ ಮಾಡುವ ನಿರ್ಧಾರವನ್ನು ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರು ವಾಹನ ತಯಾರಕರ FY23 ಹಣಕಾಸು ಫಲಿತಾಂಶಗಳಲ್ಲಿ ಬಹಿರಂಗಪಡಿಸಿದ್ದಾರೆ. 2024ರಲ್ಲಿ ಈ ಹೊಸ 5-ಡೊರಿನ ಮಹೀಂದ್ರಾ ಬಿಡುಗಡೆಯಾಗಲಿದೆ. ಇದು ಮಾರುತಿ ಸುಜುಕಿಗೆ ಪ್ರಯೋಜನವನ್ನು ನೀಡುತ್ತದೆ ಏಕೆಂದರೆ ಜಿಮ್ನಿ ಎಸ್‍ಯುವಿ ಮಾರಾಟದ ದೃಷ್ಟಿಕೋನದಿಂದ ಸ್ವಲ್ಪ ಉತ್ತಮ ಸ್ಟಾರ್ಟ್ ಸಿಗಲಿದೆ.

Mahindra Thar 5-Door

ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್ ರೋಡರ್ ಎಸ್‍ಯುವಿಯಾಗಿದ್ದು, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಈ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಿದೆ. ಇದೀಗ ಮಹಿಂದ್ರಾ ಕಂಪನಿಯು ಬಹುಬೇಡಿಕೆಯ ಥಾರ್ ಎಸ್‍ಯುವಿಯ 5-ಡೊರಿನ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಹೀಂದ್ರಾ ಥಾರ್ 5-ಡೊರಿನ ಆವೃತ್ತಿಯು ಕಳೆದ ಕೆಲವು ತಿಂಗಳುಗಳಿಂದ ಅಗಾಗ ರೋಡ್ ಟೆಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಇನ್ನಷ್ಟು ಆಕರ್ಷಕವಾಗಿಸಲು ಸಿದ್ಧವಾಗಿದೆ. ಥಾರ್ ಅನ್ನು ಪ್ರಸ್ತುತ 3-ಡೋರಿನ ಲೇಔಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಮಹಿಂದ್ರಾ ಥಾರ್‌ ಎಸ್‍ಯುವಿಯು 5-ಡೋರ್ ಆವೃತ್ತಿಯಾಗಿ ಬರಲು ಸಜ್ಜಾಗಿದೆ. ಈ ಮಹೀಂದ್ರಾ ಥಾರ್ 5-ಡೋರಿನ ಎಸ್‍ಯುವಿಯು ಇತ್ತೀಚೆಗೆ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ.

Mahindra Thar 5-Door

ಈ 5-ಡೋರಿನ ಆವೃತ್ತಿಯು 3-ಡೋರಿನ ಥಾರ್‌ಗೆ ಹೋಲುತ್ತದೆ. ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯು ಉದ್ದವಾದ ವೀಲ್‌ಬೇಸ್ ಮತ್ತು ಹಿಂಭಾಗದ ಡೋರುಗಳನ್ನು ಹೊಂದಿವೆ. ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಭಾರವಾದ ಮತ್ತು ಕಾರ್ಯವನ್ನು ನಿರ್ವಹಿಸುವ ಕಾರಣ, 5-ಡೋರ್ ಥಾರ್ 2-0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಬಹುದು.ಇನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ 370 ಎನ್ಎಂ ಮತ್ತು 6-ಸ್ಪೀಡ್ ಎಟಿಯೊಂದಿಗೆ 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಸೆಲ್ ಎಂಜಿನ್ 130 ಎಚ್‌ಪಿ ಮತ್ತು 172 ಎಚ್‌ಪಿ ಎಂಬ ಎರಡು ಸ್ಥಿತಿಗಳಲ್ಲಿ ನೀಡಲಾಗುತ್ತದೆ. ಮೊದಲನೆಯದು ಕೇವಲ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ ಮತ್ತು 300 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಟ್ಯೂನ್‌ನ ಉನ್ನತ ಸ್ಥಿತಿಯಲ್ಲಿ, ಟಾರ್ಕ್ ಔಟ್‌ಪುಟ್ ಮ್ಯಾನುಯಲ್‌ನೊಂದಿಗೆ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಮಹೀಂದ್ರಾ ಥಾರ್ ಡೀಸೆಲ್ 130 ಬಿಹೆಚ್‍ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಥಾರ್ ಪೆಟ್ರೋಲ್ 150 ಬಿಹೆಚ್‍ಪಿ ಪವರ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 6-ಸ್ಪೀಡ್ ಟಾರ್ಕ್ ಕರ್ನವಾಟರ್ ನೊಂದಿಗೆ 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿಯು ಅದ್ಭುತ ಯಶಸ್ಸನ್ನು ಕಂಡಿದೆ ಮತ್ತು ಇದು ಒಂದೆರಡು ತಿಂಗಳ ಹಿಂದೆ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ. ಇನ್ನು ಈ ಹೊಸ ಮಹೀಂದ್ರಾ ಥಾರ್ 5-ಡೋರ್ ಎಸ್‍ಯುವಿಯು ಅಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸಬಹುದು. ಇದು ಪ್ರಸ್ತುತ ಥಾರ್ 3 ಬಾಗಿಲಿನಂತೆಯೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ. ಮುಂಭಾಗದ ಸೀಟ್ ವಿನ್ಯಾಸವೂ ಹೋಲುತ್ತದೆ. ಈ 5 ಡೋರ್ ಆವೃತ್ತಿಯಾಗಿರುವುದರಿಂದ ಹಿಂದಿನ ಸೀಟ್‌ಗಳು ಯೋಗ್ಯವಾದ ಲೆಗ್‌ರೂಮ್ ನೀಡುತ್ತವೆ.

Article Published On: Saturday, May 27, 2023, 18:24 [IST]
English summary
New mahindra thar 5 door suv launch in 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+