ದಶಕದ ಬಳಿಕ ಮತ್ತೆ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಬಂದ ಮರ್ಸಿಡಿಸ್-ಎಎಂಜಿ SL55
ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಮರ್ಸಿಡಿಸ್ SL55 ರೋಡ್‌ಸ್ಟರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್-ಎಎಂಜಿ SL55 (Mercedes-AMG SL55) ರೋಡ್‌ಸ್ಟರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.35 ಕೋಟಿಯಾಗಿದೆ.
ಒಂದು ದಶಕದ ನಂತರ ಭಾರತದಲ್ಲಿ ಎಸ್‌ಎಲ್ ಕಾರು ಕಾಣಿಸಿಕೊಳ್ಳುತ್ತಿದೆ. ಐದನೇ ತಲೆಮಾರಿನ ರೋಡ್‌ಸ್ಟರ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದ ಸುಮಾರು 11 ವರ್ಷಗಳ ನಂತರ ಹೊಸ 7ನೇ ಜನರೇಷನ್ SL ಕಾರನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತಕ್ಕೆ ತಂದಿದೆ. 7ನೇ ಜನರೇಷನ್ SL ಕಾರು ಆಗ್ರೇಸಿವ್ ಆಗಿದೆ. ಹೊಸ ಮರ್ಸಿಡಿಸ್-ಎಎಂಜಿ SL55 ಹೊಸ ಸ್ಕೇಲೆಬಲ್ ಮಾಡ್ಯುಲರ್ ಸ್ಪೋರ್ಟ್ಸ್ ಆರ್ಕಿಟೆಕ್ಚರ್ (MSA) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಮುಂದಿನ ಜನರೇಷನ್ AMG GT ಸ್ಪೋರ್ಟ್ಸ್ ಕಾರ್‌ನೊಂದಿಗೆ ಹಂಚಿಕೊಳ್ಳುತ್ತದೆ. ಹೊಸ ಮರ್ಸಿಡಿಸ್-ಎಎಂಜಿ SL55 ಕಾರು 4,705 mm ಉದ್ದ, 1,915 mm ಅಗಲ, 1,359 mm ಎತ್ತರವನ್ನು ಹೊಂದಿದೆ. ಇನ್ನು ಈ ಕಾರು 2,700 mm ವ್ಹೀಲ್ ಬೇಸ್ ಅನ್ನು ಹೊಂದಿದೆ. ಮರ್ಸಿಡಿಸ್ ಇಂಡಿಯಾ 2+2 ಸೀಟುಗಳ SL ಐಷಾರಾಮಿ ಕನ್ವರ್ಟಿಬಲ್‌ನ ಏಕೈಕ ಆವೃತ್ತಿಯನ್ನು ಭಾರತಕ್ಕೆ ತಂದಿದೆ.
ಮರ್ಸಿಡಿಸ್-ಎಎಂಜಿ SL55 ಕಾರು ಪ್ರಸಿದ್ಧ 4.0-ಲೀಟರ್ ಟ್ವಿನ್-ಟರ್ಬೊ V8 M177 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,500-6,500rpm ನಲ್ಲಿ 469 bhp ಮತ್ತು 2,250-4,500 rpm ನಲ್ಲಿ 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ಆಲ್-ವೀಲ್ ಡ್ರೈವ್ ಸಿಸ್ಟಮ್‌ನ ಸಹಾಯದಿಂದ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಈ ಹೊಸ ಐಷಾರಾಮಿ ಕಾರು ಕೇವಲ 3.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಮರ್ಸಿಡಿಸ್ ರೋಡ್‌ಸ್ಟರ್ ಕಾರಿನ ಟಾಪ್ ಸ್ಪೀಡ್ 295 ಕಿ.ಮೀ ಆಗಿದೆ. ಹೊಸ ಮರ್ಸಿಡಿಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಕಾರು ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಕನ್ವರ್ಟಿಬಲ್ ಸ್ಪೋರ್ಟಿಂಗ್ ಮರ್ಕ್‌ನ ಪನಾಮೆರಿಕಾ ಶೈಲಿಯ ಗ್ರಿಲ್‌ನೊಂದಿಗೆ ಸಾಕಷ್ಟು ಆಕರ್ಷಕವಾಗಿದೆ.
ಇನ್ನು ಗ್ರಿಲ್ ಎರಡೂ ಬದಿಯಲ್ಲಿ ತ್ರಿಕೋನ ಹೆಡ್‌ಲೈಟ್‌ಗಳಿಂದ ಸುತ್ತುವರೆದಿದೆ. ಇದು ಕಾರಿಗೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ನೀಡುತ್ತದೆ. ಹೊಸ ಮರ್ಸಿಡಿಸ್-ಎಎಂಜಿ SL55 ಕಾರಿನ ಬದಿಗಳು 275/35 (ಮುಂಭಾಗ) ಮತ್ತು 305/30 (ಹಿಂಭಾಗದ) ಟೈರ್‌ಗಳೊಂದಿಗೆ 20-ಇಂಚಿನ ಅಲಾಯ್ ವ್ಹೀಲ್ ಗಳಿಗೆ ಹೋಸ್ಟ್ ಆಡುವ ಫ್ಲೇರ್ಡ್ ವೀಲರ್‌ಗಳನ್ನು ಹೊಂದಿದೆ. ಫ್ಯಾಬ್ರಿಕ್ ರೂಫ್ ಬ್ಲ್ಯಾಕ್, ರೆಡ್ ಮತ್ತು ಬೂದು ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಅಭ್ಯವಿದೆ.

ಈ ಹೊಸ ಮರ್ಸಿಡಿಸ್-ಎಎಂಜಿ SL55 ಕಾರಿನ ಹಿಂಭಾಗದಲ್ಲಿ ಟೈಲ್‌ಲೈಟ್‌ಗಳನ್ನು ಹೊಂದಿವೆ. ಇನ್ನು ಈ ಕಾರಿನ ಹಿಂಭಾಗದಲ್ಲಿ ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಕ್ವಾಡ್ ಎಕ್ಸಾಸ್ಟ್ ಪೈಪ್‌ಗಳನ್ನು ಹೊಂದಿವೆ. ಹೊಸ ಮರ್ಸಿಡಿಸ್-ಎಎಂಜಿ SL55 ಕಾರಿನ ಕ್ಯಾಬಿನ್ 2+2 ಸೀಟ್ ವಿನ್ಯಾಸವನ್ನು ಹೊಂದಿದ್ದು, ಹಿಂಬದಿಯ ಸೀಟುಗಳನ್ನು ಮಕ್ಕಳಿಗೆ ಉತ್ತಮವಾಗಿದೆ.
ಇನ್ನು ಕ್ಯಾಬಿನ್ 1.5 ಮೀಟರ್‌ಗಿಂತ ಕಡಿಮೆ ಎತ್ತರವನ್ನು ಹೊಂದಿದ್ದಾರೆ. ಕ್ಯಾಬಿನ್ ಲೆದರ್ ಹೊದಿಸಲ್ಪಟ್ಟಿದೆ ಮತ್ತು ಸುತ್ತಲೂ ಕಾರ್ಬನ್ ಫೈಬರ್ ಟ್ರಿಮ್ ಇದೆ. ಈ ಕಾರು ಇತ್ತೀಚಿನ MBUX ಸಾಫ್ಟ್‌ವೇರ್‌ನೊಂದಿಗೆ SL ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಅನ್ನು ಹೊಂದಿದೆ. ಈ ಕಾರಿನಲ್ಲಿ AMG ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ 11.9-ಇಂಚಿನ ಯುನಿಟ್ ಆಗಿದೆ.


Click it and Unblock the Notifications








