ಬುಕ್ಕಿಂಗ್‌ನಲ್ಲಿ ಸುನಾಮಿ: ಮರ್ಸಿಡಿಸ್-ಬೆಂಝ್ ಜಿಎಲ್‌ಸಿ ಎಸ್‍ಯುವಿಗಾಗಿ ಮುಗಿಬಿದ್ದ ಶ್ರೀಮಂತರು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್-ಬೆಂಝ್ ಜಿಎಲ್‌ಸಿ (Mercedes-Benz GLC) ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಐಷಾರಾಮಿ ಎಸ್‍ಯುವಿ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಮರ್ಸಿಡಿಸ್-ಬೆಂಝ್ ಜಿಎಲ್‌ಸಿ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.73.5 ಲಕ್ಷವಾಗಿದೆ.

ಮರ್ಸಿಡಿಸ್-ಬೆಂಝ್ ಜಿಎಲ್‌ಸಿ ಎಸ್‍ಯುವಿಗಾಗಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಐಷಾರಾಮಿ ಮರ್ಸಿಡಿಸ್-ಬೆಂಝ್ ಜಿಎಲ್‌ಸಿ ಎಸ್‍ಯುವಿಗಾಗಿ ಈಗಾಗಲೇ 1,500+ ಬುಕ್ಕಿಂಗ್‌ಗಳನ್ನು ಸ್ವೀಕರಿಸಲಾಗಿದೆ. ಈ ಹೊಸ ಮರ್ಸಿಡಿಸ್-ಬೆಂಝ್ ಜಿಎಲ್‌ಸಿ ಎಸ್‍ಯುವಿ 300 4ಮ್ಯಾಟಿಕ್ ಪೆಟ್ರೋಲ್‌ ಮತ್ತು 220d 4ಮ್ಯಾಟಿಕ್ ಡೀಸೆಲ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡೂ ರೂಪಾಂತರಗಳು 48V ಮೈಲ್ಡ್-ಹೈಬ್ರಿಡ್ ಸಿಸ್ತಂ ಅನ್ನು ಪಡೆಯುತ್ತದೆ.

Mercedes-Benz GLC

ಈ ಹೊಸ ಮರ್ಸಿಡಿಸ್ ಜಿಎಲ್‌ಸಿ ಎಸ್‍ಯುವಿ 4,716mm ಉದ್ದ, 2,075mm ಅಗಲ ಮತ್ತು 1,650mm ಎತ್ತರವನ್ನು ಹೊಂದಿದೆ. ಇದು ಹಿಂದಿನ ಮಾದರಿಗೆ ಹೋಲಿಸಿದರೆ, 60mm ಉದ್ದವಾಗಿದೆ, 21mm ಕಿರಿದಾಗಿದೆ ಮತ್ತು ಅದು ಬದಲಿಸುವ ಮಾದರಿಗಿಂತ 4mm ಕಡಿಮೆಯಾಗಿದೆ. ಅಲ್ಲದೆ, ಹೊಸ ಮಾದರಿಯು 15 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ.

ಈ ಹೊಸ ಮರ್ಸಿಡಿಸ್ ಜಿಎಲ್‌ಸಿ ಎಸ್‍ಯುವಿಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ತುಂಬಾ ಬದಲಾವಣೆಗಳನ್ನು ಪದೆದುಕೊಂಡಿದೆ. ಈ ಹೊಸ ಮರ್ಸಿಡಿಸ್ ಎಸ್‍ಯುವಿಯು ದೊಡ್ಡ ಮತ್ತು ಬೃಹತ್ ಪ್ರಮಾಣದಲ್ಲಿರದೆ ಪ್ರೀಮಿಯಂ ಅನ್ನು ಹೊರಹಾಕುತ್ತದೆ. ಹೊಸ GLC ಮುಂಭಾಗದಲ್ಲಿ ಸ್ವಲ್ಪ ದೊಡ್ಡದಾದ ಗ್ರಿಲ್ ಅನ್ನು ಹೊಂದಿದ್ದು, ಅದರ ಮಧ್ಯದಲ್ಲಿ ಬೃಹತ್ ಮರ್ಸಿಡಿಸ್ ಬ್ಯಾಡ್ಜ್ ಮತ್ತು ಅಂಚುಗಳಿಗೆ ವಿಸ್ತರಿಸಿರುವ ಕ್ರೋಮ್ ಬಾರ್‌ಗಳನ್ನು ಹೊಂದಿವೆ.

ಈ ಹೊಸ ಮರ್ಸಿಡಿಸ್ ಜಿಎಲ್‌ಸಿ ಎಸ್‍ಯುವಿಯ ಒಳಬಾಗದಲ್ಲಿ ಹೆಚ್ಚು ಆಧುನಿಕ ಮತ್ತು ಐಷಾರಾಮಿ ಆಗಿ ಕಾಣುತ್ತದೆ. ಈ ಐಷಾರಾಮಿ ಎಸ್‍ಯುವಿಯಲ್ಲಿ 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಮತ್ತು ಇನ್ನೂ ದೊಡ್ಡದಾದ 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ವೈಶಿಷ್ಟ್ಯಗಳೊಂದಿಗೆ ಇತ್ತೀಚಿನ ತಲೆಮಾರಿನ ಸಿ-ಕ್ಲಾಸ್ ಸೆಡಾನ್‌ನ ಒಳಭಾಗವನ್ನು ಅನುಕರಿಸುವಂತಿದೆ.

ಇನ್ನು ಈ ಮರ್ಸಿಡಿಸ್ ಜಿಎಲ್‌ಸಿ ಎಸ್‍ಯುವಿಯಲ್ಲಿ ವೈರ್‌ಲೆಸ್ ಫೋನ್ ಸಂಪರ್ಕ, ಹೆಡ್-ಅಪ್ ಡಿಸ್ಪ್ಲೇ, 15-ಸ್ಪೀಕರ್ ಬರ್ಮೆಸ್ಟರ್ ಆಡಿಯೊ ಸಿಸ್ಟಮ್, ಪನರೊಮಿಕ್ ಸನ್‌ರೂಫ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಸಕ್ರಿಯ ಬ್ರೇಕ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಅಸಿಸ್ಟ್ ಸೇರಿದಂತೆ ಇತರ ಗಮನಾರ್ಹ ವೈಶಿಷ್ಟ್ಯಗಳು , ಸಕ್ರಿಯ ಲೇನ್ ಕೀಪಿಂಗ್ ಅಸಿಸ್ಟ್, ಮತ್ತು ಇನ್ನೂ ಅನೇಕ ಫೀಚರ್ಸ್ ಗಳನ್ನು ಪಡೆಯಲಿವೆ.

ಹೊಸ ಮರ್ಸಿಡಿಸ್ ಜಿಎಲ್‌ಸಿ ಎಸ್‍ಯುವಿಯಲ್ಲಿ 2.0-ಲೀಟರ್, ಟರ್ಬೋಚಾರ್ಜ್ಡ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ ಆರೋಗ್ಯಕರ 254bhp ಮತ್ತು 400Nm ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಜಿಎಲ್‌ಸಿ ಎಸ್‍ಯುವಿಯ 4MATIC ರೂಪಾಂತರವು 2.0-ಲೀಟರ್, ಟರ್ಬೋಚಾರ್ಜ್ಡ್, 4-ಸಿಲಿಂಡರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ ಕೇವಲ 194.4bhp ಮತ್ತು 440Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎರಡೂ ಪವರ್‌ಟ್ರೇನ್ ಯುನಿಟ್ ಗಳು, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಜೊತೆಗೆ 48-ವೋಲ್ಟ್ ಮೈಲ್ಡ್ ಸಿಸ್ತಂ ಅನ್ನು ಹೊಂದಿದೆ. ಈ ISG ಯುನಿಟ್ ಹೆಚ್ಚುವರಿ 23 bhp ಮತ್ತು 200 Nm ಟಾರ್ಕ್‌ನೊಂದಿಗೆ ಎರಡೂ ಪವರ್‌ಟ್ರೇನ್‌ಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಮರ್ಸಿಡಿಸ್ ಜಿಎಲ್‌ಸಿ ಎಸ್‍ಯುವಿ ಎರಡೂ ರೂಪಾಂತರಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಸಜ್ಜುಗೊಂಡಿವೆ.

ಇನ್ನು GLC 220d 4Matic 8 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ ಮತ್ತು 19.47 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಮರ್ಸಿಡಿಸ್ ಜಿಎಲ್‌ಸಿ ಎಸ್‍ಯುವಿಯಲ್ಲಿನ 4MATIC ಆಲ್-ವೀಲ್-ಡ್ರೈವ್ ಸಿಸ್ಟಮ್ ಆಫ್-ರೋಡಬಿಲಿಟಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಅತ್ಯುತ್ತಮವಾದ ಟ್ರ್ಯಾಕ್ಷನ್ ಅನ್ನು ಒದಗಿಸುತ್ತದೆ. GLC 300 4MATIC ಕೇವಲ 6.2 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು 14.72 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

More from DriveSpark

Article Published On: Sunday, August 13, 2023, 13:00 [IST]
English summary
New mercedes benz glc suv gets over 1500 bookings details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+