ಹಂಪಿಯ ಗತ ವೈಭವಕ್ಕೆ ಸಾಕ್ಷಿಯಾದ ಆಧುನಿಕ ರಾಜ Mercedes GLC ರಿವ್ಯೂ ವಿಡಿಯೋ ನೋಡಿ
ಕರ್ನಾಟಕದ ಭವ್ಯ ಇತಿಹಾಸದಲ್ಲಿ ಹಂಪಿಯ ಸ್ಥಾನ ಮಹತ್ವದಾಗಿದೆ. ಹಂಪಿ ಕರ್ನಾಟಕದ ಪುರಾತನ ಪಟ್ಟಣಗಳಲ್ಲಿ ಒಂದು. ಹಂಪಿಯ ವೈಭವದ ಕುರುಹುಗಳು ಹಂಪಿಯಲ್ಲಿ ಇಂದಿಗೂ ನೋಡಬಹುದು. ಹಂಪಿಯ ವೈಭವ ವಿದೇಶದಲ್ಲೂ ಖ್ಯಾತಿ ಗಳಿಸಿದೆ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಹಂಪಿ ನೋಡಲು ವಿದೇಶದಿಂದಲ್ಲೂ ಸಾವಿರಾರು ಪ್ರವಾಸಿಗರು ಬರುತ್ತಾರೆ.
ಹಂಪಿಯ ಗತ ವೈಭವದ ನಡುವೆ ಆಧುನಿಕ ರಾಜ ಎಂದೇ ಹೇಳಬಹುದಾದ ಮರ್ಸಿಡಿಸ್ ಬೆಂಝ್ GLC (Mercedes GLC) ಎಸ್‍ಯುವಿಯ ರಿವ್ಯೂ ಅನ್ನು ಮಾಡಿದ್ದೇವೆ. ಕರ್ನಾಟಕದ ಹಂಪಿ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಈ ಎಸ್‍ಯುವಿಯನ್ನು ಡ್ರೈವ್ ಮಾಡಿದ್ಡೇವೆ. 2023ರ ಮರ್ಸಿಡಿಸ್ ಜಿಎಲ್‌ಸಿಯ ಆಕರ್ಷಕ ಆಕರ್ಷಣೆಯನ್ನು ಡ್ರೈವಿಂಗ್ ಅನುಭವ, ಕಾರಿನ ಫೀಚರ್ಸ್ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೊವನ್ನು ನೋಡಿ.
ಈ ಹೊಸ ಮರ್ಸಿಡಿಸ್ GLC ಎಸ್‍ಯುವಿಯ ವಿನ್ಯಾಸವು ಆಕರ್ಷಕವಾಗಿದೆ. ಈ ಹೊಸ GLC ಮುಂಭಾಗದಲ್ಲಿ ಸ್ವಲ್ಪ ದೊಡ್ಡದಾದ ಗ್ರಿಲ್ ಅನ್ನು ಹೊಂದಿದ್ದು, ಅದರ ಮಧ್ಯದಲ್ಲಿ ಬೃಹತ್ ಮರ್ಸಿಡಿಸ್ ಬ್ಯಾಡ್ಜ್ ಮತ್ತು ಅಂಚುಗಳಿಗೆ ವಿಸ್ತರಿಸಿರುವ ಕ್ರೋಮ್ ಬಾರ್‌ಗಳನ್ನು ಹೊಂದಿದೆ. ಈ ಎಸ್‍ಯುವಿಯ ಗ್ರಿಲ್ ಅನ್ನು ಸುತ್ತುವರೆದಿರುವುದು ಹೊಸ DRL ಸಿಗ್ನೇಚರ್ ಅನ್ನು ಹೊಂದಿರುವ ಮತ್ತು ಮುಂಭಾಗದ ಫೆಂಡರ್‌ಗಳ ಕಡೆಗೆ ವಿಸ್ತರಿಸುವ ಮರುರೂಪದ ಹೆಡ್‌ಲೈಟ್‌ಗಳಾಗಿವೆ.
2023ರ ಮರ್ಸಿಡಿಸ್ GLC ಎಸ್‍ಯುವಿಯ ಕ್ಯಾಬಿನ್ ಅದರ ಪೂರ್ವವರ್ತಿಗಳಿಗಿಂತ ಭಿನ್ನವಾಗಿದೆ ಮತ್ತು ಹೊಸ ಸಿ-ಕ್ಲಾಸ್ ಅನ್ನು ಎಲ್ಲಕ್ಕಿಂತ ಹೆಚ್ಚಾಗಿ ಹೋಲುತ್ತದೆ, ಇದು ನಮಗೆ ಉತ್ತಮವಾದ ವಿಷಯವಾಗಿದೆ. ಈ ಎಸ್‍ಯುವಿಯಲ್ಲಿ ಪನರೋಮಿಕ್ ಸನ್ ರೂಫ್ ಅನ್ನು ನೀಡಲಾಗಿದೆ. ಇನ್ನು ಈ ಎಸ್‍ಯುವಿಯು ಉತ್ತಮ ವೀಲ್‌ಬೇಸ್ ಅನ್ನು ಹೊಂದಿದೆ. 2023ರ ಮರ್ಸಿಡಿಸ್ GLC ಎಸ್‍ಯುವಿಯಲ್ಲಿ ಎರಡು ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆಗಳೊಂದಿಗೆ (ಪೆಟ್ರೋಲ್ ಮತ್ತು ಡೀಸೆಲ್) ಭಾರತಕ್ಕೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








