MG Comet: ಈ ಪುಟ್ಟ ಎಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್ ಪ್ರಾರಂಭ: 1 ಕಿ.ಮೀ ಓಡಿಸಲು 50 ಪೈಸೆ ಖರ್ಚು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ತನ್ನ ಹೊಸ ಎಂಜಿ ಕಾಮೆಟ್ ಎಂಬ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಕೊನೆಗೂ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.98 ಲಕ್ಷವಾಗಿದೆ,
ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಸ್ಥಳೀಯ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ. ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್‌ಗಳು ಪ್ರಾರಂಭವಾಗಿದೆ. ಇನ್ನು ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಮೇ 15 ರಂದು ಪ್ರಾರಂಭವಾಗುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನ ವಿತರಣೆಯು ಮೇ ತಿಂಗಳಿನಲ್ಲೇ ಪ್ರಾರಂಭವಾಗುತ್ತವೆ.

ಈ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ. ವುಲಿಂಗ್ ಏರ್ ಇವಿ ಮಾದರಿಯನ್ನು ಆಧರಿಸಿರುವ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಪೂರ್ಣ-ಅಗಲ LED ಲೈಟ್ ಬಾರ್‌ನಂತಹ ಆಸಕ್ತಿದಾಯವಾದ ಬಾಕ್ಸ್ ವಿನ್ಯಾಸ ಭಾಷೆಯನ್ನು ಹೊಂದಿದೆ, ಜೊತೆಗೆ, ಎರಡೂ ವಿಂಗ್ ಮೀರರ್ಸ್ ಕ್ರೋಮ್ ಮತ್ತು ಪಿಯಾನೋ ಬ್ಲ್ಯಾಕ್ ಪಟ್ಟಿ ಇದೆ.
ಇನ್ನು ಈ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಚಾರ್ಜರ್ ಅನ್ನು ಲೈಟ್ ಬಾರ್ ಅಡಿಯಲ್ಲಿ ಮುಂಭಾಗದಲ್ಲಿ ಇರಿಸಲಾಗುತ್ತದೆ ಮತ್ತು ಅದರ ಫ್ಲಾಪ್ ಪ್ರಕಾಶಿತ MG ಲೋಗೋವನ್ನು ಹೊಂದಿದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 12-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ವಾಹನದ ಚಿಕ್ಕ ಚಕ್ರದ ಗಾತ್ರವಾಗಿದೆ. ಇದು ಆಕರ್ಷಕವಾದ ವಿಂಡೋ ವಿನ್ಯಾಸವನ್ನು ಸಹ ಪಡೆಯುತ್ತದೆ.

ಹಿಂಭಾಗದ ವಿಂಡೋಗಳನ್ನು ಲಂಬವಾಗಿ ಜೋಡಿಸಲಾಗಿದೆ. ಈ ಕಾರಿನ ಹಿಂಭಾಗದಲ್ಲಿ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ವಿಸ್ತೃತ ಹಾರಿಜಾನ್ ಸಂಪರ್ಕಿಸುವ ಲ್ಯಾಂಪ್ ಗಳನ್ನು ಪಡೆಯುತ್ತದೆ. ಇನ್ನು ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸ್ಟಿಕ್ಕರ್ ಶೈಲಿಗಳು ಮತ್ತು ಲಿಟ್ ಪ್ಯಾಕ್‌ಗಳ ಅಡಿಯಲ್ಲಿ ವರ್ಗೀಕರಿಸಲಾದ ಬಹು ಗ್ರಾಫಿಕ್ಸ್ ಪ್ಯಾಕ್‌ಗಳೊಂದಿಗೆ ಐದು ಬಣ್ಣಗಳಲ್ಲಿ ಲಭ್ಯವಿದೆ.
ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಒಳಭಾಗದಲ್ಲಿ, ಎರಡು 10.25-ಇಂಚಿನ ಸ್ಕ್ರೀನ್‌ಗಳಿಂದ ಹೈಲೈಟ್ ಮಾಡಲಾದ ಬಿಳಿ ಮತ್ತು ಬೂದು ಬಣ್ಣದ ಒಳಾಂಗಣವನ್ನು ಹೊಂದಿದೆ. ಇನ್ನು ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ. ಮುಂಭಾಗದ ಪ್ರಯಾಣಿಕರ ಸೀಟ್ ಒನ್-ಟಚ್ ಟಂಬಲ್ ಮತ್ತು ಫೋಲ್ಡ್ ಫೀಚರ್ಸ್ ಅನ್ನು ಹೊಂದಿದೆ, ಇನ್ನು ಈ ಕಾರಿನ ಹಿಂದಿನ ಸೀಟುಗಳು 50:50 ಸ್ಪ್ಲಿಟ್ ಅನ್ನು ಪಡೆಯುತ್ತವೆ.

ಇನ್ನು ಕಾಮೆಟ್ ರೋಟರಿ ಡ್ರೈವ್ ಸೆಲೆಕ್ಟರ್ ಅನ್ನು ಸಹ ಹೊಂದಿದೆ. ಇನ್ನು ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಮ್ಯಾನುಯಲ್ ಎಸಿ ಕಂಟ್ರೋಲ್ ಹೊಂದಿವೆ. ಇದರೊಂದಿಗೆ ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮೂರು ಯುಎಸ್‌ಬಿ ಪೋರ್ಟ್‌ಗಳು ಮತ್ತು 55 ಕ್ಕೂ ಹೆಚ್ಚು ಕನೆಕ್ಟಿವಿಟಿಗಳನ್ನು ಪಡೆಯುತ್ತದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್ ಗಳಿಗೆ ಹೆಚ್ಚು ಪ್ರಾಮುಖ್ಯಯತೆಯನ್ನು ನೀಡಲಾಗಿದೆ.
ಇನ್ನು ಈ ಕಾರಿನಲ್ಲಿ ಸುರಕ್ಷತೆಗಾಗಿ, ABS, EBD, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಕ್ಯಾಮೆರಾ ಮತ್ತು ಸೆನ್ಸರ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ನೀಡಲಾಗಿದೆ, ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67-ರೇಟ್ ಮಾಡಲ್ಪಟ್ಟಿದೆ ಮತ್ತು ARAI- ಪ್ರಮಾಣೀಕೃತ ರೇಂಜ್ 230 ಕಿ.ಮೀ ಆಗಿದೆ.
ಈ ಎಂಜಿ ಕಾರಿನಲ್ಲಿ 3.3kW ಆನ್‌ಬೋರ್ಡ್ ಚಾರ್ಜರ್ ಅನ್ನು ಸಹ ನೀಡುತ್ತಿದೆ, ಇದು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಂಜಿ ಕಾಮೆಟ್ 42hp ಮತ್ತು 110Nm ಟಾರ್ಕ್ ಅನ್ನು ಉತ್ಪಾದಿಸುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.


Click it and Unblock the Notifications








