ಹೆಚ್ಚಿನ ಐಷಾರಾಮಿ ಫೀಚರ್ಸ್‌ಗಳೊಂದಿಗೆ 2023ರ ರೇಂಜ್ ರೋವರ್ ವೆಲಾರ್ ಬಿಡುಗಡೆ
ಬ್ರಿಟಿಷ್ ಕಾರು ತಯಾರಕ ಕಂಪನಿಯಾದ ಲ್ಯಾಂಡ್ ರೋವರ್ ಭಾರತದಲ್ಲಿ ಫೇಸ್‌ಲಿಫ್ಟೆಡ್ ರೇಂಜ್ ರೋವರ್ ವೆಲಾರ್ (Range Rover Velar) ಐಷಾರಾಮಿ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.93 ಲಕ್ಷವಾಗಿದೆ.
ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯ 2.0-ಲೀಟರ್ ಇನ್‌ಲೈನ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ನೀಡಲಾಗುತ್ತದೆ. 2023ರ ರೇಂಜ್ ರೋವರ್‌ನ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳು 8-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ.

ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಪೆಟ್ರೋಲ್ ಆವೃತ್ತಿಯು 5,500 rpm ನಲ್ಲಿ 246.6 bhp ಮತ್ತು 1,300 rpm ಮತ್ತು 4,500rpm ನಡುವೆ 365Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೇಂಜ್ ರೋವರ್ ವೆಲಾರ್ ಪಿ250 7.5 ಸೆಕೆಂಡ್‌ಗಳಲ್ಲಿ ಗಂಟೆಗೆ 01-00 ಕಿಮೀ ವೇಗವನ್ನು ತಲುಪುತ್ತದೆ. ಇನ್ನು ಈ ಮಾದರಿಯು 217 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಇನ್ನು 'D200' ಎಂದು ಕರೆಯಲ್ಪಡುವ ಡೀಸೆಲ್ ರೂಪಾಂತರವು 48V ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ. ಈ ಡೀಸೆಲ್ ಎಂಜಿನ್ 3,750 rpm ನಲ್ಲಿ 201 bhp ಮತ್ತು 1,750 rpm ಮತ್ತು 2,500rpm ನಡುವೆ 430 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಡೀಸೆಲ್ ವೆಲಾರ್ 8.3 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು 210 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಈ ಹೊಸ ರೇಂಜ್ ರೋವರ್ ವೆಲಾರ್ ಏರ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಇದು ರೇಂಜ್ ರೋವರ್ ವೆಲಾರ್ ಅನ್ನು ಸುಲಭವಾಗಿ ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುವು ಮಾಡಿಕೊಡುವ ಮೂಲಕ ರೈಡ್ ಎತ್ತರವನ್ನು 40 ಎಂಎಂ ಕಡಿಮೆ ಮಾಡಲು ಮತ್ತು ಹೆಚ್ಚಿಸಲು ಅನುಮತಿಸುತ್ತದೆ. ವೇಲಾರ್ 580 ಮಿಮೀ ಆಳದವರೆಗೆ ನೀರಿನ ಮೂಲಕ ವೇಡ್ ಮಾಡಬಹುದು.
ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಹೊಸ ಪಿಕ್ಸೆಲ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ, ಇದು ಪರಿಷ್ಕೃತ ಡಿಆರ್‌ಎಲ್ ಸಿಗ್ನೇಚರ್ ಅನ್ನು ಹೊಂದಿದೆ. ಬಂಪರ್‌ಗಳ ಜೊತೆಗೆ ಟೈಲ್‌ಲೈಟ್‌ಗಳನ್ನು ನವೀಕರಸಲಾಗಿದೆ. ಈ ಎಸ್‍ಯುವಿಯ ಬದಲಾವಣೆಗಳು ಹೆಚ್ಚು ಗೋಚರಿಸುತ್ತವೆ. ಹಿಂದಿನ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು 11.4-ಇಂಚಿನ ಪಿವಿ ಪ್ರೊ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನಿಂದ ಬದಲಾಯಿಸಲಾಗಿದೆ.
ಇನ್ನು ಈ ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಬೆಂಬಲಿಸುತ್ತದೆ ಮತ್ತು ಎಚ್‌ವಿಎಸಿ ಸೆಟಪ್ ಅನ್ನು ಸಹ ನಿಯಂತ್ರಿಸುತ್ತದೆ. ಈ ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿರುವ ಹೊಸ ಮುಚ್ಚಿದ ಸ್ಟೋವೇಜ್ ಪ್ರದೇಶವನ್ನು ಸಹ ನೋಡಲಾಗಿದೆ.
ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯಲ್ಲಿ ಗೇರ್ ಸೆಲೆಕ್ಟರ್ ಡಯಲ್ ಅನ್ನು ಹೆಚ್ಚು ಸಾಂಪ್ರದಾಯಿಕ ಗೇರ್ ಸೆಲೆಕ್ಟರ್ ಯುನಿಟ್ ನೊಂದಿಗೆ ಬದಲಾಯಿಸಲಾಗಿದೆ. ಇನ್ನು ಫೇಸ್‌ಲಿಫ್ಟೆಡ್ 2023 ರೇಂಜ್ ರೋವರ್ ವೆಲಾರ್ ಹೊಸ 11.4-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಜೊತೆಗೆ ಕೆಲವು ವಿನ್ಯಾಸ ನವೀಕರಣಗಳನ್ನು ಒಳಗೊಂಡಂತೆ ಕೆಲವು ನವೀಕರಣಗಳನ್ನು ಪಡೆಯುತ್ತದೆಪೋರ್ಷೆ ಮ್ಯಾಕನ್ ಮತ್ತು ಜಾಗ್ವಾರ್ ಎಫ್-ಪೇಸ್‌ನಂತಹ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಆಶಾದಾಯಕವಾಗಿ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ,


Click it and Unblock the Notifications








