ಹೊಸ ಟಾಟಾ ಏಸ್ ಇವಿ ವಿತರಣೆ ಆರಂಭ: ರೂ.9.99 ಲಕ್ಷಕ್ಕೆ ಸಿಗುತ್ತೆ..

ಭಾರತ ರಸ್ತೆಗಳಲ್ಲಿ ಬಸ್, ಕಾರು ಹಾಗೂ ಬೈಕ್ ಎಲ್ಲವು ಎಲೆಕ್ಟ್ರಿಕ್ ಚಾಲಿತವಾಗುತ್ತಿದ್ದು, ಪ್ರತಿಯೊಬ್ಬ ಗ್ರಾಹಕರು ಇಂತಹ ವಾಹನಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಪ್ರತಿಯೊಂದು ವಾಹನ ತಯಾರಿಕ ಕಂಪನಿಗಳು ಎಲೆಕ್ಟ್ರಿಕ್ ವಾಹನ (ಇವಿ) ತಯಾರಿಕೆಗೆ ಮುಂದಾಗಿವೆ. ಟಾಟಾ ಕಂಪನಿ ಇವಿ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಟಾಟಾ ಮೋಟಾರ್ಸ್ ಸೋಮವಾರ ನಗರಗಳಲ್ಲಿ ಬಳಸಬಹುದಾದ ಕಾರ್ಗೋ ವಾಹನವಾಗಿರುವ ನೂತನ ಏಸ್ ಇವಿ ವಿತರಣೆಯನ್ನು ಪ್ರಾರಂಭಿಸಿದ್ದು, ಟಾಟಾ ಏಸ್ ಇವಿ ಬೆಲೆ ಗ್ರಾಹಕರ ಕೈಗೆಟುಕಲಿದ್ದು, ಬರೋಬ್ಬರಿ ರೂ.9.99 ಲಕ್ಷದಿಂದ ಆರಂಭವಾಗಲಿದೆ (ಎಕ್ಸ್ ಶೋರೂಂ, ದೆಹಲಿ). ಏಸ್ ಇವಿಯ ಮೊದಲ ಉತ್ಪಾದನಾ ಮಾದರಿಗಳನ್ನು FMCG ಮತ್ತು ಅಮೆಜಾನ್, ಡೆಲ್ಲಿವೆರಿ, ಡಿಎಚ್ಎಲ್, ಫೆಡ್ಇಎಕ್ಸ್, MoEVing, ಫ್ಲಿಪ್ ಕಾರ್ಟ್, ಸೇಫ್ ಎಕ್ಸ್ ಪ್ರೆಸ್ ಸೇರಿದಂತೆ ಹಲವು ಕೊರಿಯರ್ ಕಂಪನಿಗಳಿಗೆ ತಲುಪಿಸಲಾಗಿದೆ ಎಂದು ಟಾಟಾ ಹೇಳಿದೆ.

ಮೇ 2022ರಲ್ಲಿ ಬಿಡುಗಡೆಯಾದ ಬಹುನಿರೀಕ್ಷಿತ ಹೊಸ ಏಸ್ ಇವಿ 5 ವರ್ಷಗಳ ಮೈಂಟೆನನ್ಸ್ ಪ್ಯಾಕೇಜ್ ಅನ್ನು ಹೊಂದಿದೆ. ಏಸ್ ಇವಿಯು EVOGEN ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಒಂದೇ ಚಾರ್ಜಿನಲ್ಲಿ ಗರಿಷ್ಠ 154 ಕಿ.ಮೀ ರೇಂಜ್ ನೀಡಲಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೇ, ಇದು ಡ್ರೇವಿಂಗ್ ರೇಂಜ್ ಅನ್ನು ಹೆಚ್ಚಿಸಲು ರೆಜೆನೆರೇಟಿವ್ ಬ್ರೇಕಿಂಗ್ ಸಿಸ್ಟಮ್ ಮತ್ತು ಸುಧಾರಿತ ಬ್ಯಾಟರಿ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ವಾಹನವು ನಿಯಮಿತ ಮತ್ತು ವೇಗದ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ ಎಂದು ಹೇಳಬಹುದು.

ಹೊಸ ಟಾಟಾ ಏಸ್ ಇವಿ 27kW ಮೋಟಾರ್ ನಿಂದ ಚಾಲಿತವಾಗಿದ್ದು, 36 hp ಗರಿಷ್ಠ ಪವರ್ ಮತ್ತು 130 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು 208 ft³ ಕಾರ್ಗೋ ವಾಲ್ಯೂಮ್ ಸಾಮರ್ಥ್ಯವನ್ನು ಖಾತ್ರಿಪಡಿಸುತ್ತದೆ. ಆರಂಭದಲ್ಲಿ, ಟಾಟಾ ಕಂಪನಿ ಹತ್ತು ನಗರಗಳಲ್ಲಿ ಎಲೆಕ್ಟ್ರಿಕ್ ಮಿನಿ ಟ್ರಕ್ ಅನ್ನು ಪರಿಚಯಿಸಿದ್ದು, ದೆಹಲಿ, ಪುಣೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಮಾರಾಟ ಮಾಡಲಿದೆ. ಈ ಬಗ್ಗೆ ಟಾಟಾ ಮೋಟಾರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

'ಭಾರತದ ಮಾರುಕಟ್ಟೆಯಲ್ಲಿ ಏಸ್ ಇವಿ ಬಿಡುಗಡೆ ಮಾಡಲಾಗಿದೆ. ಇದು ಶೂನ್ಯ-ಹೊರಸೂಸುವಿಕೆ ಕಾರ್ಗೋ ವಿಭಾಗದಲ್ಲಿ ದೊಡ್ಡ ಹೆಜ್ಜೆಯಾಗಿದೆ. ನಮ್ಮ ಪಾಲುದಾರರಿಗೆ ನೀಡಿರುವ ಈ ಏಸ್ ಇವಿ, ವಿವಿಧ ನಗರಗಳಲ್ಲಿ ವಿತರಣಾ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಹಾಗೂ ವೇಗವಾಗಿ ಪೂರೈಸುತ್ತದೆ. ಎಲ್ಲಾ ಪಾಲುದಾರರಿಗೆ ಇದು ಉತ್ತಮ ಸೇವೆಯನ್ನು ಒದಗಿಸುತ್ತದೆ' ಎಂದು ಗಿರೀಶ್ ವಾಘ್ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಈ ಏಸ್ ಇವಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಬಹುದು. ಜೊತೆಗೆ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳಬಹುದು.

ಟಾಟಾ ಮೋಟಾರ್ಸ್ ತನ್ನ ಮಿನಿ ಕಾರ್ಗೋ ಟ್ರಕ್ ಏಸ್ ಅನ್ನು 2005ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತು. ಈವರೆಗೆ ಬರೋಬ್ಬರಿ 20 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಡೀಸೆಲ್, ಸಿಎನ್‌ಜಿ ಹಾಗೂ ಪೆಟ್ರೋಲ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಏಸ್ ಗೋಲ್ಡ್, ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಕಾರ್ಗೋ ಟ್ರಕ್ ಎಂದು ಹೇಳಬಹುದು. ಇದರ ಬೆಲೆ ರೂ.3.99 ದಿಂದ ರೂ.6.35 ಲಕ್ಷ ಇದೆ (ಎಕ್ಸ್-ಶೋರೂಂ). ಹೊಸ ಗ್ರಾಹಕರು ರೂ.46,000 ಮುಂಗಡ ಹಣ ಪಾವತಿಸಿ, ಇದನ್ನು ಖರೀಸಬಹುದು.

ಏಸ್ ಗೋಲ್ಡ್ ಡೀಸೆಲ್ ಆವೃತ್ತಿ 2-ಸಿಲಿಂಡರ್, 700ಸಿಸಿ, ನ್ಯಾಚುರಲ್ ಆಸ್ಪಿರೇಟೆಡ್ ಡೈರೆಕ್ಷನ್ ಇಂಜೆಕ್ಷನ್ ಎಂಜಿನ್ ಹೊಂದಿದೆ. ಇದು 20hp ಪವರ್ ಹಾಗೂ 45Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಆವೃತ್ತಿಯು 275 ಗ್ಯಾಸೋಲಿನ್, MPFI 4 ಸ್ಟ್ರೋಕ್, ವಾಟರ್ ಕೂಲ್ಡ್ ಎಂಜಿನ್ ಹೊಂದಿದ್ದು, 30hp ಗರಿಷ್ಠ ಪವರ್ 55Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಿಎನ್‌ಜಿ ಆವೃತ್ತಿಯು ವಾಟರ್-ಕೂಲ್ಡ್, ಮಲ್ಟಿ-ಪಾಯಿಂಟ್ ಗ್ಯಾಸ್ ಇಂಜೆಕ್ಷನ್ 694ಸಿಸಿ ಎಂಜಿನ್ ಹೊಂದಿದ್ದು, ಇದು 25hp ಪವರ್ 50Nm ಟಾರ್ಕ್‌ ಉತ್ಪಾದಿಸುತ್ತದೆ ಎಂದು ಹೇಳಬಹುದು.

ಒಟ್ಟಾರೆಯಾಗಿ ಟಾಟಾ ಏಸ್ ಇವಿಯು ದುಡಿಯುವ ಮಧ್ಯಮ ವರ್ಗದ ಜನರ ಕೈಗೆಟುವ ಕಾರ್ಗೋ ವಾಹನವಾಗಲಿದೆ. ಇದರ ಖರೀದಿಯಿಂದ ಅವರ ಜೀವನ ಮಟ್ಟವು ಸುಲಭವಾಗಿ ಸುಧಾರಿಸುತ್ತದೆ. ಜೊತೆಗೆ ಇಂಧನ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ, ಇದರ ನಿರ್ವಹಣೆ ವೆಚ್ಚವು ತುಂಬಾ ಕಡಿಮೆ ಎಂದು ಹೇಳಬಹುದು. ಪೆಟ್ರೋಲ್ ಹಾಗೂ ಡಿಸೇಲ್ ಚಾಲಿತ ಕಾರ್ಗೋ ವಾಹನಗಳ ನಡುವೆ ಇಂತಹ ಇವಿ ಕಾರ್ಗೋ ವಾಹನಗಳ ಖರೀದಿಯತ್ತ ಗ್ರಾಹಕರು ನಿಧಾನವಾಗಿ ಮನಸ್ಸು ಮಾಡಬಹುದು. ಇದು ಭಾರತದ ಇವಿ ಮಾರುಕಟ್ಟೆಯ ವಿಸ್ತರಣೆಗೆ ಕಾರಣವಾಗಬಹುದು.

Most Read Articles

Kannada
English summary
New tata ace ev delivery begins available at 6 60 Lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X