ಭರ್ಜರಿ ಮೈಲೇಜ್, ಕಡಿಮೆ ಬೆಲೆಯ ಟಾಟಾ ಆಲ್ಟ್ರೋಜ್ ಸಿಎನ್‌ಜಿ ಕಾರಿನ ವಿಶೇಷತೆಗಳು
ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಸಿಎನ್‌ಜಿ ಪ್ರಯಾಣಿಕ ವಾಹನ ಜಾಗವನ್ನು ಪ್ರವೇಶಿಸಿದ ಜನಪ್ರಿಯ ಸ್ವದೇಶೀ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಈಗ ತನ್ನ ಸಿಎನ್‌ಜಿ ವಾಹನ ವಿಭಾಗವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಆಲ್ಟ್ರೊಜ್ ಕಾರನ್ನು ಸಿಎನ್‌ಜಿ ಮಾದರಿಯಲ್ಲಿ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು.
ಹೊಸ ಆಲ್ಟ್ರೊಜ್ iCNG ಕಾರು XE, XM+, XM+ (S), XZ, XZ+ (S), ಮತ್ತು XZ+ O (S) ಎಂಬ ಆರು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ XE ಬೇಸ್ ವೆರಿಯೆಂಟ್ ಆದರೆ, XZ+ O (S) ಟಾಪ್-ಸ್ಪೆಕ್ ಆಗಿದೆ. ಹೊಸ ಟಾಟಾ ಆಲ್ಟ್ರೊಜ್ iCNG ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.55 ಲಕ್ಷವಾಗಿದೆ. ಇದು ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ನೀಡಲಾಗುವ ಮೊದಲ CNG ಹ್ಯಾಚ್‌ಬ್ಯಾಕ್ ಆಗಿದೆ.

ಈ ಕಾರಿನ XZ+ O (S) ಟಾಪ್-ಸ್ಪೆಕ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.55 ಲಕ್ಷವಾಗಿದೆ. ಇನ್ನು ಹೊಸ ಟಾಟಾ ಆಲ್ಟ್ರೊಜ್ iCNG ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿದೆ. ಹೆಚ್ಚು ಕೈಗೆಟುಕುವ ಕಾರುಗಳ ಬ್ರ್ಯಾಂಡ್ ಎಂದೇ ಜನಪ್ರಿಯವಾದ ಮಾರುತಿ ಸುಜುಕಿಯ ಬಲೆನೊ ಸಿಎನ್‌ಜಿ ಕಾರಿನ ಬೆಲೆಯು ರೂ.8.35 ಲಕ್ಷದಿಂದ ರೂ.9.28 ಲಕ್ಷವಾಗಿದೆ.
ಇನ್ನು ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ಬೆಲೆಯು ರೂ.8.50 ಲಕ್ಷದಿಂದ ರೂ.9.53 ಲಕ್ಷವಾಗಿದೆ, ಇನ್ನು ಹೊಸ ಟಾಟಾ ಆಲ್ಟ್ರೊಜ್ iCNG ಕಾರು 210-ಲೀಟರ್ ಬೂಟ್ ಸ್ಪೇಸ್ ನೊಂದಿಗೆ ಬರುತ್ತದೆ. ಸ್ಟ್ಯಾಂಡರ್ಡ್ ಆಲ್ಟ್ರೊಜ್ ಕಾರಿನ ಬೂಟ್ ಸ್ಪೇಸ್ 345 ಲೀಟರ್ ಗಳಾಗಿದೆ. ಇದನ್ನು ಸಿಎನ್‌ಜಿ ಕಾರಿಗೆ ಹೋಲಿಸಿದರೆ 135 ಲೀಟರ್ ಹೆಚ್ಚು ಇದೆ, ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಟಾಟಾ ಆಲ್ಟ್ರೊಜ್ iCNG, ನ್ಯಾಚುರಲ್ ಆಸ್ಪೈರ್ಡ್, CNG-ಹೊಂದಾಣಿಕೆಯ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ CNG ಮೋಡ್‌ನಲ್ಲಿ 72.5bhp ಪವರ್ ಮತ್ತು 103Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಮೋಡ್‌ನಲ್ಲಿ, ಈ ಎಂಜಿನ್ 85bhp ಮತ್ತು 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸಿಎನ್‌ಜಿ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದ ಭಾರತದ ಏಕೈಕ ಹ್ಯಾಚ್‌ಬ್ಯಾಕ್ ಈ ಟಾಟಾ ಆಲ್ಟ್ರೋಜ್ ಆಗಿದೆ.
ಹೊಸದಾಗಿ ಬಿಡುಗಡೆಗೊಂಡ ಟಾಟಾ ಆಲ್ಟ್ರೊಜ್ iCNG ಹ್ಯಾಚ್‌ಬ್ಯಾಕ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ವಿನ್-ಸಿಲಿಂಡರ್ ತಂತ್ರಜ್ಞಾನ, ಇದು ಬೂಟ್‌ನಲ್ಲಿ ಹೆಚ್ಚು ಬಳಸಬಹುದಾದ ಜಾಗವನ್ನು ಮುಕ್ತಗೊಳಿಸಲು ಎರಡು 30-ಲೀಟರ್ CNG ಟ್ಯಾಂಕ್‌ಗಳನ್ನು ಬಳಸುತ್ತದೆ. ಆಲ್ಟ್ರೋಜ್ ಸಿಎನ್‌ಜಿಯು ಮಾರುತಿ ಬಲೆನೊ ಸಿಎನ್‌ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್‌ಜಿಯಷ್ಟು ಪವರ್ ಫುಲ್ ಆಗಿದೆ. ಕುತೂಹಲಕಾರಿಯಾಗಿ, ಹ್ಯಾಚ್‌ಬ್ಯಾಕ್ ಅನ್ನು ನೇರವಾಗಿ CNG ಮೋಡ್‌ನಲ್ಲಿ ಪ್ರಾರಂಭಿಸಬಹುದು.
ಈ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಮುಖ್ಯಯನ್ನು ನೀಡಿದ್ದಾರೆ. ಈ ಟಾಟಾ ಆಲ್ಟ್ರೊಜ್ iCNG ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ABS, EBD, ISOFIX ಪಾಯಿಂಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಹೆಚ್ಚಿನವುಗಳಂತಹ ಸುರಕ್ಷತ ಫೀಚರ್ಸ್ ಗಳನ್ನು ಒಳಗೊಂಡಿವೆ. ಟಾಟಾ ಆಲ್ಟ್ರೊಜ್ iCNG ಸ್ಟ್ಯಾಂಡರ್ಡ್ ಮಾದರಿಯಂತೆಯೇ ಅದೇ ಫೀಚರ್ಸ್ ಗಳನ್ನು ನೀಡುವುದನ್ನು ಮುಂದುವರೆಸಿದೆ.
ಇನ್ನು ಈ ಹೊಸ ಕಾರಿನಲ್ಲಿ Apple CarPlay ಮತ್ತು Android Auto ಜೊತೆಗೆ 7.0-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ಧ್ವನಿ-ಸಕ್ರಿಯ ಸನ್‌ರೂಫ್, ಟಿಲ್ಟ್-ಹೊಂದಾಣಿಕೆ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಒಳಗೊಂಡಿದೆ. ಅತ್ಯಂತ ಸುರಕ್ಷಿತ ಹ್ಯಾಚ್‌ಬ್ಯಾಕ್ ಆದ ಟಾಟಾ ಆಲ್ಟ್ರೊಜ್ ಕಾರು ಆಕರ್ಷಕ ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ.


Click it and Unblock the Notifications