Tata Altroz: ಟಾಟಾ ಅಲ್ಟ್ರೋಜ್ ಹೊಸ ರೂಪಾಂತರಗಳು ಬಿಡುಗಡೆ, ನಿರೀಕ್ಷೆಗಿಂತ ದುಪ್ಪಟು ವಿಶೇಷತೆಗಳಿವೆ
ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಅದು, ಬಿಡುಗಡೆಗೊಳಿಸುವ ಹೊಸ ಕಾರುಗಳೇ ಆಗಲಿ, ಇಲ್ಲವೇ ಪ್ರಸ್ತುತ ಖರೀದಿಗೆ ದೊರೆಯುವ ಮಾದರಿಗಳ ಹೊಸ ರೂಪಾಂತರವಾಗಲಿ ಅವುಗಳ ಮೇಲೆ ಗ್ರಾಹಕರು ತಮ್ಮದೇ ನೀರಿಕ್ಷೆ ಹೊಂದಿರುತ್ತಾರೆ. ಇದೀಗ, ಕಂಪನಿಯು ಹಲವು ವಿಶೇಷತೆಗಳೊಂದಿಗೆ ಅಲ್ಟ್ರೋಜ್ ನೂತನ ವೇರಿಯೆಂಟ್ಸ್ ಲಾಂಚ್ ಮಾಡಿದೆ.
ಟಾಟಾ ಮೋಟಾರ್ಸ್ ಅಲ್ಟ್ರೋಜ್ ಲೈನ್ಅಪ್ ಅನ್ನು ಎರಡು ನೂತನ ರೂಪಾಂತರಗಳೊಂದಿಗೆ ಬಲಪಡಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೊಸ ವೇರಿಯೆಂಟ್ಸ್ ಎಕ್ಸ್‌ಎಂ ಮತ್ತು ಎಕ್ಸ್‌ಎಂ(ಎಸ್) ಕ್ರಮವಾಗಿ ರೂ.6.90 ಲಕ್ಷದಿಂದ ರೂ.7.35 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿವೆ. ಇವೆರೆಡು ರೂಪಾಂತರಗಳು ಯುವ ಗ್ರಾಹಕರನ್ನು ಆಕರ್ಷಿಸುವ ಸಾಕಷ್ಟು ಅತ್ಯಾಧುನಿಕ ಫೀಚರ್ಸ್ ಪಡೆದಿವೆ.

ಟಾಟಾ ಅಲ್ಟ್ರೋಜ್ ಹೊಸ ರೂಪಾಂತರವಾದ ಎಕ್ಸ್‌ಎಂ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟರ್, ಎಲೆಕ್ಟ್ರಿಕಲಿ ಆಪರೇಟೆಡ್ ORVMs, ಆರ್16 ಫುಲ್ ವೀಲ್ ಕವರ್ ಜೊತೆಗೆ ಪ್ರೀಮಿಯಂ ಲುಕ್ ಹೊಂದಿರುವ ಡ್ಯಾಶ್ ಬೋರ್ಡ್ ಅನ್ನು ಒಳಗೊಂಡಿದೆ. ಎಕ್ಸ್‌ಎಂ(ಎಸ್) ವೇರಿಯೆಂಟ್ ಹೆಚ್ಚುವರಿಯಾಗಿ ಎಲೆಕ್ಟ್ರಿಕ್ ಸನ್‌ರೂಫ್ ಪಡೆದಿದೆ.
ಇನ್ನುಳಿದಂತೆ ದೊಡ್ಡದಾದ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿವೆ. ಜೊತೆಗೆ ಈ ಅಲ್ಟ್ರೋಜ್ ಮ್ಯಾನುಯಲ್ ಪೆಟ್ರೋಲ್ ಟ್ರಿಮ್‌ಗಳು, 4 ಪವರ್ ವಿಂಡೋ ಮತ್ತು ರಿಮೋಟ್ ಕೀಲೆಸ್ ಎಂಟ್ರಿಯಂತಹ ಭರಪೂರ ವೈಶಿಷ್ಟ್ಯಗಳನ್ನು ಪಡೆಯುವ ಮೂಲಕ ಹೆಚ್ಚು ಆಕರ್ಷಣೀಯವಾಗಿವೆ. ಇದು, ಟಾಟಾ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದ್ದು, ಹೊಸ ಅಲ್ಟ್ರೋಜ್ ರೂಪಾಂತರಗಳನ್ನು ಖರೀದಿಸಲು ಮನಸು ಮಾಡಬಹುದು.
ನೂತನ ಎಕ್ಸ್‌ಎಂ ಮತ್ತು ಎಕ್ಸ್‌ಎಂ(ಎಸ್) ರೂಪಾಂತರಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇವೆರೆಡು, 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 88.2 hp ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿವೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಟಾಟಾ ಅಲ್ಟ್ರೋಜ್ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ವಯಸ್ಕ ರಕ್ಷಣೆ ವಿಭಾದಲ್ಲಿ 16.13/17 ಅಂಕ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 29/49 ಪಾಯಿಂಟ್ ಪಡೆಯುವ ಮೂಲಕ ಈ ರೇಟಿಂಗ್ ತನ್ನದಾಗಿಸಿಕೊಂಡಿದೆ. ಈ ಕಾರು, ಏರ್ ಬಾಗ್ಸ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ಟಾಟಾ ಮೋಟಾರ್ಸ್, ಅಲ್ಟ್ರೋಜ್ ಮಾದರಿಯಲ್ಲಿ ಹೊಸ ರೂಪಾಂತರಗಳು ಬಿಡುಗಡೆಗೊಳಿಸಿರುವುದು ಗ್ರಾಹಕರಿಗೆ ಸಂತೋಷ ತಂದಿದೆ. ಈ ಎಕ್ಸ್‌ಎಂ ಮತ್ತು ಎಕ್ಸ್‌ಎಂ(ಎಸ್) ವೇರಿಯೆಂಟ್ಸ್ ನವೀನ ವೈಶಿಷ್ಟ್ಯಗಳೊಂದಿಗೆ ದೇಶೀಯ ಮಾರುಕಟ್ಟೆಗೆ ಬಂದಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಖರೀದಿದಾರರು, ಇವುಗಳನ್ನು ಕೊಂಡುಕೊಳ್ಳಲು ಮನಸ್ಸು ಮಾಡಬಹುದು. ಜೊತೆಗೆ, ಕಂಪನಿ ಮಾರಾಟವು ಮತ್ತಷ್ಟು ವೃದ್ಧಿಯಾಗಲು ನೆರವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications