ಟೆಸ್ಟಿಂಗ್ ವೇಳೆ ಮಾರುತಿ ಎರ್ಟಿಗಾಗೆ ಡಿಕ್ಕಿ ಹೊಡೆದ 2023 ಟಾಟಾ ಹ್ಯಾರಿಯರ್... ಏನಾಯ್ತು ನೋಡಿ

ಭಾರತದಲ್ಲಿ ಆಟೋ ಉದ್ಯಮ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ. ಎಲ್ಲಾ ಕಾರು ತಯಾರಕರು ಪೈಪೋಟಿಯನ್ನು ಎದುರಿಸಲು ಹೊಸ ಮಾಡಲ್‌ಗಳೊಂದಿಗೆ ತಮ್ಮ ಹಳೆಯ ಮಾದರಿಗಳನ್ನು ನವೀಕರಣಗೊಳಿಸಿ ಬಿಡುಗಡೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕೂಡ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಆನ್‌ರೋಡ್‌ನಲ್ಲಿ ಪರೀಕ್ಷೆಗಳನ್ನು ವೇಗಗೊಳಿಸಿದೆ.

ಮುಂಬರಲಿರುವ New Tata Harrier SUV ಯ ಸ್ಪೈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಖತ್ ವೈರಲ್ ಆಗಿವೆ. ನಮಗಿರುವ ಮಾಹಿತಿಯ ಪ್ರಕಾರ ಇದು ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇತ್ತೀಚೆಗೆ 2023 ಟಾಟಾ ಹ್ಯಾರಿಯರ್‌ನ ಪರೀಕ್ಷಾರ್ಥ ಮಾದರಿಯು ಅಪಘಾತಕ್ಕೀಡಾಗಿತ್ತು. ಈ ಕುರಿತ ವಿಡಿಯೋವನ್ನು ಗುರ್ಗಾಂವ್ ವಾಲೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಟೆಸ್ಟಿಂಗ್ ವೇಳೆ ಮಾರುತಿ ಎರ್ಟಿಗಾಗೆ ಡಿಕ್ಕಿ ಹೊಡೆದ 2023 ಟಾಟಾ ಹ್ಯಾರಿಯರ್... ಏನಾಯ್ತು ನೋಡಿ

ವಿಷಯಕ್ಕೆ ಬಂದರೆ ಟಾಟಾ ಹ್ಯಾರಿಯರ್ ಪರೀಕ್ಷಾರ್ಥ ಮಾದರಿಯು ಮಾರುತಿ ಎರ್ಟಿಗಾ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ. ಟಾಟಾ ಹ್ಯಾರಿಯರ್ ‌ನ ಎಡಭಾಗದ ಮುಂಭಾಗ ಮತ್ತು ಹಿಂಭಾಗದ ಚಕ್ರಗಳು ಫುಟ್‌ಪಾತ್‌ನಲ್ಲಿದ್ದವು ಮತ್ತು ಬಲಭಾಗದ ಬಂಪರ್ ಎರ್ಟಿಗಾದ ಹಿಂಭಾಗದ ಬಂಪರ್‌ಗೆ ಡಿಕ್ಕಿ ಹೊಡೆದಿದೆ. ಹ್ಯಾರಿಯರ್ ಮತ್ತು ಎರ್ಟಿಗಾದಲ್ಲಿನ ಫೆಂಡರ್ ಮತ್ತು ಇತರ ಪ್ಯಾನೆಲ್‌ಗಳು ಹೆಚ್ಚಾಗಿ ಹಾನಿಯಾಗಿಲ್ಲ, ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಷ್ಟೇನು ದೊಡ್ಡ ಅಪಘಾತವಲ್ಲ ಎಂಬುದು ತಿಳಿಯುತ್ತದೆ.

ಕೇವಲ ವಿಡಿಯೋವನ್ನು ಆಧರಿಸಿ ಏನಾಗಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಆದರೆ ಈ ಕುರಿತ ಹೆಚ್ಚಿನ ಮಾಹಿತಿ ನಮಗೆ ಲಭ್ಯವಾಗಿಲ್ಲ. ನಮಗೆ ತಿಳಿದಿರುವಂತೆ ಹೊಸ ಹ್ಯಾರಿಯರ್ ಎಸ್‌ಯುವಿಯಲ್ಲಿ ಆಟೋಮ್ಯಾಟಿಕ್ ಎರ್ಜನ್ಸಿ ಬ್ರೇಕಿಂಗ್ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿರಬಹುದು ಎಂದೆನಿಸುತ್ತಿದೆ. ಡಿಕ್ಕಿಯ ಬಳಿಕ ಎರಡೂ ವಾಹನಗಳಲ್ಲಿ ಇದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳು ಆಗದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಪಘಾತ ನಿಧಾನಗತಿಯಲ್ಲಿ ಆಗಿರುವುದರಿಂದ ಎರಡು ವಾಹನಗಳಿಗೆ ಹೆಚ್ಚಾಗಿ ಏನೂ ಹಾನಿಯಾಗಿಲ್ಲ.

ಹ್ಯಾರಿಯರ್ ಫೇಸ್‌ಲಿಫ್ಟ್‌:
ಹ್ಯಾರಿಯರ್ ಫೆಸ್‌ಲಿಫ್ಟ್ ಈ ಬಾರಿ ಹೊಸ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಬಾಕ್ಸಿ ಹಾಗೂ ಮಸ್ಕುಲರ್ ಡಿಸೈನ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸೋರಿಕೆಯಾಗಿರುವ ಹೊಸ ಮಾದರಿಯ ಫೊಟೋಗಳಲ್ಲಿನ ಹ್ಯಾರಿಯರ್ ಫೆಸ್‌ಲಿಫ್ಟ್ ಅನ್ನು ಗಮನಿಸಿದರೆ ಈ ಬಾರಿ ಆಧುನಿಕ ಹೆಚ್ಚುವರಿ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಬಹುದು. ಬಂಪರ್‌ನ ಮೇಲೆ ಮತ್ತು ಕೆಳಗಿನ ಭಾಗಗಳ ನಡುವೆ ಸಮತಲವಾದ ಗ್ರಿಲ್ ವಿಭಜನೆಯನ್ನು ಹೊಸ ಹ್ಯಾರಿಯರ್ ಎಸ್‌ಯುವಿಯಲ್ಲಿ ನಾವು ನೋಡಬಹುದು.

ಇನ್ನು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ, ಆದರೆ ಬಂಪರ್ ಮೊದಲಿಗಿಂತ ಸ್ವಲ್ಪ ಹೆಚ್ಚು ಹರಿತ ಮತ್ತು ತೀಕ್ಷ್ಣವಾಗಿ ಕಾಣುತ್ತದೆ. ಇದು ಹ್ಯಾರಿಯರ್‌ಗೆ ಇನ್ನಷ್ಟು ಮಸ್ಕುಲರ್ ನೋಟವನ್ನು ನೀಡುತ್ತದೆ. ಇನ್ನು ಹಿಂಭಾಗದ ವಿಷಯಕ್ಕೆ ಇತ್ತೀಚೆಗೆ ಹೆಚ್ಚಿನ ವಾಹನ ತಯಾರಕರು ತಮ್ಮ ಎಂಟ್ರಿ ಲೆವಲ್ ಕಾರುಗಳಲ್ಲಿಯೇ ಟೈಲ್‌ಲೈಟ್ ಕನೆಕ್ಟಿಂಗ್ ಬಾರ್ ನೀಡುತ್ತಿದ್ದು, ಅಂತೆಯೇ ಟಾಟಾ ಕೂಡ ಟೈಲ್ ಲ್ಯಾಂಪ್‌ಗಳ ನಡುವೆ ಎಲ್ಇಡಿ ಕನೆಕ್ಟಿಂಗ್ ಬಾರ್ ಅನ್ನು ನೀಡುವ ಸಾಧ್ಯತೆಯಿದೆ.

ಟೆಸ್ಟಿಂಗ್ ವೇಳೆ ಮಾರುತಿ ಎರ್ಟಿಗಾಗೆ ಡಿಕ್ಕಿ ಹೊಡೆದ 2023 ಟಾಟಾ ಹ್ಯಾರಿಯರ್... ಏನಾಯ್ತು ನೋಡಿ

ಇಂಟೀರಿಯರ್ ವಿಷಯಕ್ಕೆ ಬಂದರೆ, ಒಳಗೆ ಹೆಚ್ಚಿನ ಬದಲಾವಣೆಗಳು ಆಗಿಲ್ಲ. ಡ್ಯಾಶ್‌ಬೋರ್ಡ್‌ ವಿನ್ಯಾಸವನ್ನು ಹಾಗೇ ಉಳಿಸಿಕೊಂಡಿದ್ದು, ಪ್ರಮುಖ ಬದಲಾವಣೆಯಾಗಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ನೋಡಬಹುದು. ಇದು ಹಳೆಯ ಆವೃತ್ತಿಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಹ್ಯಾರಿಯರ್ ಮತ್ತು ಸಫಾರಿಯ ರೆಡ್ ಮತ್ತು ಡಾರ್ಕ್ ಆವೃತ್ತಿಗಳೊಂದಿಗೆ ನಾವು ನೋಡಿದಂತೆಯೇ ಇರಲಿದೆ. ಹಾಗೆಯೇ ಗೇರ್ ಲಿವರ್‌ನ ವಿನ್ಯಾಸವು ಪ್ರಸ್ತುತ ಆವೃತ್ತಿಗಿಂತ ಭಿನ್ನವಾಗಿರಲಿದೆ.

ಎಂಜಿನ್ ವಿಷಯಕ್ಕೆ ಬಂದರೆ ಪ್ರಸ್ತುತ ಆವೃತ್ತಿಯಂತೆ 170 Ps ಮತ್ತು 350 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಅದೇ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದನ್ನು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡರಲ್ಲೂ ನೀಡಲಾಗುವುದು. ಡೀಸೆಲ್ ಎಂಜಿನ್ ಜೊತೆಗೆ, ಟಾಟಾ ಪೆಟ್ರೋಲ್ ಎಂಜಿನ್ ಅನ್ನು ಸಹ ನೀಡುವ ನಿರೀಕ್ಷೆಯಿದೆ. ಪೆಟ್ರೋಲ್ ಎಂಜಿನ್ 1.5-ಲೀಟರ್ ಟರ್ಬೋಚಾರ್ಜ್ಡ್ ಯುನಿಟ್ ಆಗಿದ್ದು, ಇದು 170 Ps ಮತ್ತು 280 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಟಾ ಈ ಎಂಜಿನ್‌ನೊಂದಿಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ನೀಡಲಿದೆಯೇ ಎಂಬುದು ನಾವು ಕಾಯಬೇಕು ಮತ್ತು ನೋಡಬೇಕಾಗಿದೆ.

Article Published On: Thursday, April 6, 2023, 12:37 [IST]
English summary
New tata harrier collided with maruti ertiga
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+