Tata Nexon EV: ಭಾರತದಲ್ಲಿ ಧೂಳೆಬ್ಬಿಸಲು ಮತ್ತೊಂದು ಅವತಾರದಲ್ಲಿ ಬರುತ್ತಿದೆ ಜನಪ್ರಿಯ ಎಲೆಕ್ಟ್ರಿಕ್ ಕಾರು

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಮುಂಬರುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಸ್‍ಯುವಿಯ ಮೊದಲ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ನಲ್ಲಿ ಸ್ಟ್ಯಾಂಡರ್ಡ್ ರೂಪಾಂತರದ ಮೇಲೆ ಕೆಲವು ಅಪ್‌ಗ್ರೇಡ್‌ಗಳನ್ನು ಮಾಡುವ ಸಾಧ್ಯತೆಯಿದೆ.

ಮುಂಬರುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಎಲೆಕ್ಟ್ರಿಕ್ ಎಸ್‍ಯುವಿ ಬ್ರ್ಯಾಂಡ್‌ನ 'ಡಾರ್ಕ್' ಟ್ರೀಟ್‌ಮೆಂಟ್ ಅನ್ನು ಹೊಂದಿರುತ್ತದೆ. ಇದು ಈ ಎಲೆಕ್ಟ್ರಿಕ್ ಎಸ್‍ಯುವಿಗೆ ಸ್ಪೋರ್ಟಿ ಲುಕ್ ಅನ್ನು ನಿಡುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಗ್ಲೋಷ್ ಬ್ಲ್ಯಾಕ್ ವಿನ್ಯಾಸ, ಬ್ಲ್ಯಾಕ್-ಹೊರಗಿನ ವಿನ್ಯಾಸ ಅಂಶಗಳು, ಆಂತರಿಕ ಡಾರ್ಕ್ ಥೀಮ್ ಮತ್ತು ಕೆಲವು ಡಾರ್ಕ್' ಬ್ಯಾಡ್ಜ್‌ಗಳನ್ನು ಸೇರಿವೆ.

Tata Nexon EV Max Dark Edition

ಮುಂಬರುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಎಲೆಕ್ಟ್ರಿಕ್ ಎಸ್‌ಯುವಿಯು ನವೀಕರಿಸಿದ 2023 ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಿಂದ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆದುಕೊಳ್ಳುತ್ತದೆ ಎಂದು ಟೀಸರ್ ವೀಡಿಯೊವನ್ನು ಗಮನಿಸಿದರೆ ನೋಡಿದರೆ ತಿಳಿಯುತ್ತದೆ. ಈ ಟಾಟಾ ನೆಕ್ಸಾನ್ ಮ್ಯಾಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 40.5kWh ಬ್ಯಾಟರಿ ಪ್ಯಾಕ್ ಅನ್ನು ಪ್ಯಾಕ್ ಅನ್ನು ಹೊಂದಿದೆ.

ಇದು 437 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಟಾಟಾ ನೆಕ್ಸಾನ್ ಮ್ಯಾಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ 125 ಕಿಮೀ ಹೆಚ್ಚು ರೇಂಜ್ ಅನ್ನು ನೀಡುತ್ತದೆ. ಇದರ ಜೊತೆಗೆ, ಟಾಟಾ ಮೋಟಾರ್ಸ್ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ 143 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ದೊಡ್ಡ ಬ್ಯಾಟರಿ ಪ್ಯಾಕ್‌ನ ಹೆಚ್ಚುವರಿ ತೂಕವನ್ನು ಸರಿದೂಗಿಸಲು ಸಜ್ಜುಗೊಳಿಸಿದೆ.

ಇದಲ್ಲದೆ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಸ್ಪೋರ್ಟ್ಸ್ ರಿಟ್ಯೂನ್ಡ್ ಸಸ್ಪೆನ್ಷನ್ ಮತ್ತು ಅಪ್‌ಗ್ರೇಡ್ ಬ್ರೇಕ್‌ಗಳನ್ನು ಸಹ ಹೊಂದಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ಕಾರ್ಯಕ್ಷಮತೆಯ ಅಂಕಿಅಂಶಗಳು ಟಾಟಾ ನೆಕ್ಸಾನ್ ಇವಿಗಿಂತ ಸುಧಾರಿಸಿದೆ. ಈ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯು ಕೇವಲ 9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯು 140 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಚಾರ್ಜಿಂಗ್ ವಿಷಯದಲ್ಲಿ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ 3.3kW AC ಚಾರ್ಜರ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ, ಆದರೆ ಗ್ರಾಹಕರು ಹೆಚ್ಚು ಶಕ್ತಿಶಾಲಿ 7.2kW ಚಾರ್ಜರ್‌ಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ನವೀಕರಣವು ಚಾರ್ಜಿಂಗ್ ಸಮಯವನ್ನು 15-16 ಗಂಟೆಗಳಿಂದ ಕೇವಲ 5-6 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದರಿಂದ ಹೆಚ್ಚು ಸಮಯ ವ್ಯರ್ಥವಾಗುವುದಿಲ್ಲ.

ಈ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನಲ್ಲಿನ ಗಮನಾರ್ಹ ಫಿಚರ್ಸ್ ಗಳೆಂದರೆ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ-ಹೋಲ್ಡ್ ಫಂಕ್ಷನ್, ವೇರಿಯಬಲ್ ರಿಜೆನೆರೇಟಿವ್ ಬ್ರೇಕಿಂಗ್, ಕ್ರೂಸ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಇಎಸ್‌ಪಿ ಮತ್ತು ಹೆಚ್ಚಿನ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ.

ಪ್ರಸ್ತುತ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ಬೆಲೆಗಳು ಮೂಲ 'ಎಕ್ಸ್‌ಎಂ' ರೂಪಾಂತರದ ಬೆಲೆಯು ರೂ 16.49 ಲಕ್ಷದಿಂದ ಪ್ರಾರಂಭವಾಗುತ್ತದೆ. ಇನ್ನು ಇದರ ಎಕ್ಸ್‌ಝಡ್+ ರೂಪಾಂತರ ಬೆಲೆಯು ರೂ 18.99 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೊರೂಂ ಪ್ರಕಾರವಾಗಿದೆ. ಇನ್ನು ಮುಂಬರುವ ಈ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

Article Published On: Thursday, April 13, 2023, 17:26 [IST]
English summary
New tata nexon ev max dark edition teased details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+