465 ಕಿ.ಮೀ ರೇಂಜ್, ಆಕರ್ಷಕ ಬೆಲೆಯ ಹೊಸ ಟಾಟಾ ನೆಕ್ಸಾನ್ ಇವಿ ವಿಶೇಷತೆಗಳು
ಜನಪ್ರಿಯ ದೇಶಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಇದೇ ಸೆಪ್ಟೆಂಬರ್ ತಿಂಗ 14 ರಂದು ಫೇಸ್‌ಲಿಫ್ಟ್ ನೆಕ್ಸಾನ್ ಇವಿಯನ್ನು (Nexon EV) ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.14.74 ಲಕ್ಷದಿಂದ ರೂ.19.94 ಲಕ್ಷವಾಗಿದೆ.
ಸದ್ಯ, ನವೀಕರಿಸಿದ ನೆಕ್ಸಾನ್ ಇವಿಯ (Tata Nexon EV) ಕಾಯುವಿಕೆ ಅವಧಿ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬಿಡುಗಡೆಗೊಂಡು ವಾರ ಕಳೆಯುವುದರಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಮುಂಬೈ ಮಹಾನಗರಿಯಲ್ಲಿ ಈ ಎಸ್‌ಯುವಿಯನ್ನು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು ಎಂಟು ವಾರಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಹಬ್ಬದ ಸೀಸನ್ ನಲ್ಲಿ ಮತ್ತಷ್ಟು ಡಿಮ್ಯಾಂಡ್ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಆದರೆ, ರಾಜ್ಯದಿಂದ ರಾಜ್ಯಕ್ಕೆ, ರೂಪಾಂತರ, ಬಣ್ಣ ಹಾಗೂ ಬ್ಯಾಟರಿ ಪ್ಯಾಕ್ ಅನ್ವಯ ಕಾಯುವಿಕೆ ಅವಧಿ ಬೇರೆ - ಬೇರೆ ಇದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್‌ಶಿಪ್ ಸಂಪರ್ಕಿಸಿರಿ. ನೂತನ ಟಾಟಾ ನೆಕ್ಸಾನ್ ಇವಿ, ಮೀಡಿಯಂ ರೇಂಜ್ (ಎಂಆರ್) ಮತ್ತು ಲಾಂಗ್ ರೇಂಜ್ (ಎಲ್ಆರ್) ಎಂಬ ವೇರಿಯೆಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಬ್ಯಾಟರಿ ಪ್ಯಾಕ್: ಟಾಟಾ ನೆಕ್ಸಾನ್ ಇವಿ ಮಾದರಿಯು ಎಂಆರ್ ರೂಪಾಂತರ 30 kWh ಹಾಗೂ ಎಲ್ಆರ್ ರೂಪಾಂತರ 40.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಜನರೇಷನ್ 2 ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಕ್ರಮವಾಗಿ, 127 bhp ಹಾಗೂ 143 bhp ಗರಿಷ್ಠ ಪವರ್, 215 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರೇಂಜ್: ಕಾರಿನ ರೇಂಜ್ ಬಗ್ಗೆ ಮಾತನಾಡುವುದಾದರೆ, ಎಂಆರ್ ವೇರಿಯೆಂಟ್ ಸಂಪೂರ್ಣ ಚಾರ್ಜ್ ನಲ್ಲಿ 325 km ಹಾಗೂ ಎಲ್ಆರ್ ವೇರಿಯೆಂಟ್ 465 km ರೆಂಜ್ ನೀಡುತ್ತದೆ. ಬ್ಯಾಟರಿ ಪ್ಯಾಕ್ ಮನೆ ವಿದ್ಯುತ್ ಬಳಕೆಯಲ್ಲಿ 10 - 15 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಇದು ನಿಜಕ್ಕೂ ಉತ್ತಮ ರೇಂಜ್ ಆಗಿದೆ.
ವಿನ್ಯಾಸ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ವಿನ್ಯಾಸ ದೃಷ್ಟಿಯಿಂದ ಆಕರ್ಷಕ ಸ್ಲಿಕ್ ಸ್ಪ್ಲಿಟ್ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ ಸ್ಟ್ರಿಪ್ ಅನ್ನು ಪಡೆದಿದೆ. ಈ ಟಾಟಾ ನೆಕ್ಸಾನ್ ಇವಿ, ಎಂಪವರ್ಡ್ ಆಕ್ಸೈಡ್, ಪ್ರಿಸ್ಟಿನ್ ವೈಟ್ ಫ್ಲೇಮ್ ರೆಡ್ ಒಳಗೊಂಡಂತೆ 7 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು ತಮ್ಮ ಮೆಚ್ಚಿನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಫೀಚರ್ಸ್: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸ್ಟೀರಿಂಗ್ - ಮೌಂಟೆಡ್ ಪ್ಯಾಡಲ್ ಶಿಫ್ಟರ್ ಅನ್ನು ಹೊಂದಿದೆ. ಇದರೊಂದಿಗೆ 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಫಂಕ್ಷನ್ ಸೇರಿದಂತೆ ಹತ್ತಾರು ಫೀಚರ್ಸ್ ಗಳನ್ನು ಹೊಂದಿದೆ.
ಸುರಕ್ಷತಾ ಫೀಚರ್ಸ್: ಸುರಕ್ಷತೆಯ ದೃಷ್ಟಿಯಿಂದಲ್ಲೂ ಉತ್ತಮವಾಗಿದ್ದು, ನೆಕ್ಸಾನ್ ಇವಿ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್, ರೇರ್ ಡಿಸ್ಕ್ ಬ್ರೇಕ್ಸ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಪಡೆದಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಕಾರಿಗೆ ನೇರ ಪ್ರತಿಸ್ಪರ್ಧಿಯೆಂದರೆ, ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರು. ಇದು, ಬಿಟ್ಟರೆ ಬೇರೆ ಯಾವ ಪ್ರತಿಸ್ಪರ್ಧಿಗಳು ಇಲ್ಲ.
ಇನ್ನು, ಬಿಡುಗಡೆಯಾದ ಕೇವಲ ಒಂದು ವಾರ ಕಳೆಯುವುದರೊಳಗೆ ಟಾಟಾ ನೆಕ್ಸಾನ್ ಇವಿ ಈ ಮಟ್ಟಿಗೆ ಬೇಡಿಕೆ ಪಡೆದುಕೊಳ್ಳುತ್ತದೆ ಎಂದು ಯಾರು ಊಹಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಸಾಲು - ಸಾಲು ಹಬ್ಬಗಳು ಬರುವುದರಿಂದ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಬಹುದು. ದೇಶದಲ್ಲಿ ನೆಕ್ಸಾನ್ ಇವಿ, ಈಗಾಗಲೇ ಸಾಕಷ್ಟು ಜನ ಮನ್ನಣೆ ಪಡೆದಿರುವುದರಿಂದ ಮೊದಲ ಸ್ಥಾನಕ್ಕೂ ಬಂದರೂ ಆಶ್ಚರ್ಯವಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications