Tata: ಟಾಟಾ ನೆಕ್ಸಾನ್ ಮೈಲೇಜ್ ಬಹಿರಂಗ, ಯಾವ ಬೈಕ್‌ಗೂ ಕಡಿಮೆಯಿಲ್ಲ ಗುರು!

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ ನವೀಕರಿಸಿದ ನೆಕ್ಸಾನ್ ಎಸ್‍ಯುವಿ ಬೆಲೆಯನ್ನು ಬಹಿರಂಗಪಡಿಸಿತ್ತು. ಇದು, ಸಬ್ 4 ಮೀಟರ್ ಕಾರಾಗಿದೆ. 11 ರೂಪಾಂತರ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ರೂ.8.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಸದ್ಯ, ಈ ಕಾರಿನ ಇಂಧನ ದಕ್ಷತೆ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಅದನ್ನು ತಿಳಿಯುವ ಮೊದಲು ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡೋಣ. ಇದರ, 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 118.2 bhp ಪವರ್ ಮತ್ತು 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5/6 ಸ್ವೀಡ್ ಮ್ಯಾನುವಲ್, 6 ಸ್ವೀಡ್/ 7 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗುತ್ತದೆ.

Tata: ಟಾಟಾ ನೆಕ್ಸಾನ್ ಮೈಲೇಜ್ ಬಹಿರಂಗ, ಯಾವ ಬೈಕ್‌ಗೂ ಕಡಿಮೆಯಿಲ್ಲ ಗುರು!

ಇನ್ನೊಂದು, 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಇದ್ದು, 113.3 bhp ಗರಿಷ್ಠ ಪವರ್, 260 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಗ್ರಾಹಕರಿಗೆ ಲಭ್ಯವಿದೆ. ಮೈಲೇಜ್ ವಿಷಯಕ್ಕೆ ಬರುವುದಾದರೆ, 1.2 ಲೀಟರ್ ಪೆಟ್ರೋಲ್ ಎಂಜಿನ್, 5/6 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಕಾರು, 17.44 kmpl (ARAI) ಇಂಧನ ದಕ್ಷತೆ ಹೊಂದಿದೆ.

1.2 - ಲೀಟರ್ ಪೆಟ್ರೋಲ್, 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರುವ ನೆಕ್ಸಾನ್ 17.18 kmpl ಮೈಲೇಜ್ ನೀಡುತ್ತದೆ. 1.2 - ಲೀಟರ್ ಪೆಟ್ರೋಲ್, ಎಂಜಿನ್ 7 ಸ್ವೀಡ್ ಡಿಸಿಟಿ ಆಯ್ಕೆಯೊಂದಿರುವ ಕಾರು, 17.01 kmpl ಇಂಧನ ದಕ್ಷತೆ ಪಡೆದಿದೆ. 1.5 - ಲೀಟರ್ ಡೀಸೆಲ್ ಎಂಜಿನ್, 6 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಕಾರು, 23.23 kmpl ಮೈಲೇಜ್ ನೀಡುತ್ತದೆ.

1.5 - ಲೀಟರ್ ಡೀಸೆಲ್ ಎಂಜಿನ್, 6 ಸ್ವೀಡ್ ಆಟೋಮೆಟಿಕ್ ಹೊಂದಿರುವ ಕಾರು, 24.08 kmpl ಇಂಧನ ದಕ್ಷತೆಯನ್ನು ಹೊಂದಿದೆ. ನವೀಕರಿಸಿದ ನೆಕ್ಸಾನ್ ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ವಿಶೇಷವಾಗಿ ಹೆಡ್‌ಲ್ಯಾಂಪ್ಸ್, ಟರ್ನ್ ಸಿಗ್ನಲ್‌ಗಳಾಗಿ ಎಲ್‌ಇಡಿ ಡಿಆರ್‌ಎಲ್, 16 ಇಂಚಿನ ಅಲಾಯ್ ವೀಲ್ಸ್, ಎಲ್ಇಡಿ ಟೈಲ್‌ಲೈಟ್ಸ್ ಹೊಂದಿದೆ.

ನವೀಕರಿಸಿದ ನೆಕ್ಸಾನ್ ಕಾರು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ, 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 8 ಸ್ಪೀಕರ್ JBL ಆಡಿಯೊ ಸಿಸ್ಟಮ್‌, ಡುಯಲ್-ಕ್ಲಚ್ ಗೇರ್‌ಬಾಕ್ಸ್‌ಗಾಗಿ ಫ್ಯಾನ್ಸಿ ಶಿಫ್ಟರ್, ರೇರ್ ಎಸಿ ವೆಂಟ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಯ ಸಲುವಾಗಿ ಈ ಕಾರು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್ಸ್, ಪಾರ್ಕಿಂಗ್ ಸೆನ್ಸರ್ಸ್, ಎಮರ್ಜೆನ್ಸಿ, ಬ್ರೇಕ್ ಡೌನ್ ಕಾಲ್ ಅಸ್ಸಿಸ್ಟನ್ಸ್ ಒಳಗೊಂಡಂತೆ ಸಾಕಷ್ಟು ನವೀನ ಫೀಚರ್ಸ್ ಪಡೆದಿದೆ.

ಇನ್ನು, ನೆಕ್ಸಾನ್ ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್, ಪ್ರಿಸ್ಟಿನ್ ವೈಟ್, ಪ್ಯೂರ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಈಗ ಮೈಲೇಜ್ ಬಗ್ಗೆ ವಿವರಗಳು ಲಭ್ಯವಾಗಿದ್ದು, ಯಾವ ಬೈಕ್‌ಗೂ ಕಮ್ಮಿ ಇಲ್ಲದ ರೀತಿಯಲ್ಲಿ ಇಂಧನ ದಕ್ಷತೆಯನ್ನು ಹೊಂದಿದ್ದು, ಹಬ್ಬದ ಋತುವಿನಲ್ಲಿ ಈ ಎಸ್‍ಯುವಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 20, 2023, 16:03 [IST]
English summary
New tata nexon suv mileage revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+