ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್ ರಿವ್ಯೂ ವಿಡಿಯೋ ಇಲ್ಲಿದೆ... ಹಲವು ವಿಶೇಷತೆಗಳಿವೆ!
ರುಕಟ್ಟೆಯಲ್ಲಿನ ಪೈಪೋಟಿಗೆ ಅನುಗುಣವಾಗಿ ಈಗ 2023 ಟಾಟಾ ಸಫಾರಿ ತೀವ್ರ ಬದಲಾವಣೆಗಳಿಗೆ ಒಳಗಾಗಿದೆ. ಹಾಗಾದರೆ 2023 ಟಾಟಾ ಸಫಾರಿಯಲ್ಲಿನ ಬದಲಾವಣೆಗಳು ದೊಡ್ಡ ಕುಟುಂಬಗಳನ್ನು ಹೊಂದಿರುವವರಿಗೆ ಇನ್ನಷ್ಟು ಸ್ನೇಹಪರ ಎಸ್‌ಯುವಿಯನ್ನಾಗಿ ಮಾಡಿದೆಯೇ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನಾವು ಹೊಸ ಫೇಸ್‌ಲಿಫ್ಟ್ ಸಫಾರಿಯನ್ನು ಪುಣೆ ಬಳಿ ಓಡಿಸಿದ್ದೇವೆ.
ಹೊಸ ಹ್ಯಾರಿಯರ್‌ನಂತೆ, 2023 ಟಾಟಾ ಸಫಾರಿ ಕೂಡ ಬಾಹ್ಯ ವಿನ್ಯಾಸಕ್ಕೆ ಬಂದಾಗ ಸಾಕಷ್ಟು ಬದಲಾವಣೆಗೆ ಒಳಗಾಗಿದೆ. ಹಳೆಯ ಮಾದರಿಯಂತಲ್ಲದೇ ಸಫಾರಿಯು ಮೊದಲಿಗಿಂತ ತೀಕ್ಷ್ಣವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹೊಸ ಪ್ಯಾರಾಮೆಟ್ರಿಕ್ ಗ್ರಿಲ್ ನವೀಕರಿಸಿದ ಹ್ಯಾರಿಯರ್‌ಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ. ಇದರ ಡ್ರೈವಿಂಗ್ ಸೇರಿದಂತೆ ಸಂಪೂರ್ಣ ಅನುಭವವನ್ನು ಈ ರಿವ್ಯೂ ವಿಡಿಯೋದಲ್ಲಿ ನೀಡಿದ್ದೇವೆ.
ಹೊಸ ಹ್ಯಾರಿಯರ್‌ನಂತೆ, 2023 ಟಾಟಾ ಸಫಾರಿ ಕೂಡ ಬಾಹ್ಯ ವಿನ್ಯಾಸದ ವಿಷಯಕ್ಕೆ ಬಂದಾಗ ಸಾಕಷ್ಟು ಬದಲಾವಣೆಗೆ ಒಳಗಾಗಿದೆ. ಹಳೆಯ ಮಾದರಿಯಂತಲ್ಲದೇ ಸಫಾರಿಯು ಮೊದಲಿಗಿಂತ ತೀಕ್ಷ್ಣವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹೊಸ ಪ್ಯಾರಾಮೆಟ್ರಿಕ್ ಗ್ರಿಲ್ ನವೀಕರಿಸಿದ ಹ್ಯಾರಿಯರ್‌ಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.
ಗ್ರಿಲ್ ಮೇಲಿನ ಭಾಗವು ಬೋಡ್-ಬಣ್ಣದ ಇಂಟೇಕ್‌ಗಳು ಮತ್ತು ಟಾಟಾ ಬ್ಯಾಡ್ಜ್ ಅನ್ನು ಹೊಂದಿದೆ. ಅದರ ಕೆಳಗಿನ ಭಾಗವು ರಾಡಾರ್ ಸೆನ್ಸಾರ್‌ಗಳೊಂದಿಗೆ ಬ್ಲಾಕ್ ಇಂಟೇಕ್‌ಗಳನ್ನು ಹೊಂದಿದೆ. ಪೂರ್ಣ-ಅಗಲದ ಎಲ್ಇಡಿ ಡಿಆರ್ಎಲ್ ಸೆಟಪ್ ಗ್ರಿಲ್‌ನ ಮೇಲೆ ಚಲಿಸುತ್ತದೆ. ಎರಡೂ ಬದಿಯಲ್ಲಿರುವ ವಿಭಾಗಗಳು ಇಂಡಿಕೇಟರ್ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications