ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ

ಮೂರು ದಶಕಗಳ ಹಿಂದೆ ಜನಪ್ರಿಯ ಸಿಯೆರಾ ಬಿಡುಗಡೆಯು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ರತನ್ ಟಾಟಾ ಕಂಪನಿಯ ಆಡಳಿತವನ್ನು ವಹಿಸಿಕೊಂಡ ಸಮಯವಾಗಿತ್ತು. ಸ್ವಾಭಾವಿಕವಾಗಿ, ಸಿಯೆರಾ ಎಸ್‍ಯುವಿಗೆ ಟಾಟಾ ಕಂಪನಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಅದರ ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು 4×4 ಆಯ್ಕೆಗಾಗಿ ಇದು ಆಫ್-ರೋಡ್ ಪ್ರಿಯರಿಗೆ ಸಾಕಷ್ಟು ಜನಪ್ರಿಯವಾಗಿತ್ತು.

2023ರ ಆಟೋ ಎಕ್ಸ್‌ಪೋದಲ್ಲಿ, ಟಾಟಾ ಸಿಯೆರಾ ಕಾನ್ಸೆಪ್ಟ್ ಅನ್ನು ಇವಿ ರೂಪದಲ್ಲಿ ಪ್ರದರ್ಶಿಸಿತು. ಈ ಹೊಸ ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯು 2024ರ ಕೊನೆಯಲ್ಲಿ ಅಥವಾ 2025ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪೆಟ್ರೋಲ್ ರೂಪಾಂತರವು ಸಹ ಲಭ್ಯವಾಗುವ ನಿರೀಕ್ಷೆಯಿದೆ. ಹಿಂದೆ ಮಾರಾಟವಾಗುತ್ತಿದ್ದ ಟಾಟಾ ಸಿಯೆರಾ ಎಸ್‍ಯುವಿಯು ಕೇವಲ ಡೀಸೆಲ್ ಎಂಜಿನ್ ನೊಂದಿಗೆ ಮಾತ್ರ ಲಭ್ಯವಿತ್ತು. ಈ ಟಾಟಾ ಸಿಯೆರಾ ಎಸ್‍ಯುವಿಯು ಹೊಸ ರೂಪದಲ್ಲಿ ಬಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರಲಿದೆ.

ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ

ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಟಾಟಾ ಮೋಟಾರ್ಸ್ ಕಂಪನಿಯ ಗ್ಲೋಬಲ್ ಡಿಸೈನ್‌ನ VP ಮುಖ್ಯಸ್ಥ ಮಾರ್ಟಿನ್ ಉಹ್ಲಾರಿಕ್ ಅವರು ಹೊಸ ಸಿಯೆರಾ ಕಾನ್ಸೆಪ್ಟ್ ಮಾದರಿಯನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ ಎಂಬುದರ ಕುರಿತು ವಿವರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಅವರು ಒಂದು ಕುತೂಹಲಕಾರಿ ಕಥೆಯನ್ನು ಹೇಳಿದ್ದಾರೆ. ರತನ್ ಟಾಟಾ ಅವರು ಟಾಟಾ ಸಿಯೆರಾ ಎಸ್‍ಯುವಿಯ ಅವರು ದಪ್ಪವಾದ ಬಿ-ಪಿಲ್ಲರ್ ಮತ್ತು ಹಿಂಬದಿಯ ವಿಂಡೋವನ್ನು ಉಳಿಸಿಕೊಳ್ಳಲು ಕೇಳಿಕೊಂಡಿದ್ದರು.

ರತನ್ ಟಾಟಾ ಅವರು ತೀಕ್ಷ್ಣವಾದ ಸ್ಮರಣಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಹೊಂದಿದ್ದಾರೆ ಎಂದು ಮಾರ್ಟಿನ್ ಹೇಳಿದ್ದಾರೆ. ಸಿಯೆರಾ ಕಾನ್ಸೆಪ್ಟ್ ಮಾದರಿಯ ವಿಂಡೋವನ್ನು ಮೂಲ ಸಿಯೆರಾದ ನಿಜವಾದ ಸಾರವನ್ನು ಸೆರೆಹಿಡಿಯಲು ಸಹಾಯ ಮಾಡಿದೆ. ಮೂರು ದಶಕಗಳ ಹಿಂದೆ ಎಸ್‍ಯುವಿಗಳ ಯಶಸ್ಸಿಗೆ ಕೊಡುಗೆ ನೀಡಿದ ಸಿಗ್ನೇಚರ್ ವೈಶಿಷ್ಟ್ಯಗಳೊಂದಿಗೆ ಆಧುನಿಕ ವಿನ್ಯಾಸದ ಥೀಮ್‌ಗಳನ್ನು ಸಂಯೋಜಿಸಲು ಇದು ವಿನ್ಯಾಸ ತಂಡಕ್ಕೆ ಅವಕಾಶ ಮಾಡಿಕೊಟ್ಟಿದೆ.

ಇದು ಕೇವಲ ಸಾಂದರ್ಭಿಕ ಹೇಳಿಕೆಯಾಗಿರಲಿಲ್ಲ, ಏಕೆಂದರೆ ಇದು ಮೂಲ ಸಿಯೆರಾ ಎಸ್‍ಯುವಿಯ ಕೆಲವು ಪ್ರಮುಖ ವಿನ್ಯಾಸದ ಮುಖ್ಯಾಂಶಗಳನ್ನು ಸೂಚಿಸುತ್ತದೆ. ರತನ್ ಟಾಟಾ ಅವರು ವಿನ್ಯಾಸ ಸ್ಟುಡಿಯೋಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಸಲಹೆಯನ್ನು ನೀಡಿದ್ದಾರೆ. ಅವರು ಕಾನ್ಸೆಪ್ಟ್ ಮಾದರಿಯನ್ನು ಇಷ್ಟಪಟ್ಟಿದ್ದರು ಮತ್ತು ಅದರ ಹೊಸ ಅವತಾರದಲ್ಲಿ ಅದು ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ಹೊಂದಿದ್ದರು. ವಿಂಡೋವನ್ನು ಉಳಿಸಿಕೊಳ್ಳಲು ಮತ್ತು ಬಿ-ಪಿಲ್ಲರ್ ಅನ್ನು ತುಂಬಾ ಚಿಕ್ಕದಾಗಿಸದಂತೆ ವಿನ್ಯಾಸ ತಂಡವನ್ನು ಅವರು ನಿರ್ದಿಷ್ಟವಾಗಿ ಹೇಳಿದ್ದರು.

ಟಾಟಾದಲ್ಲಿನ ವಿನ್ಯಾಸ ತಂಡವು ಮೂಲ ಸಿಯೆರಾದ ಮೂಲ ಸತ್ವವನ್ನು ಉಳಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ, ಅದರ ಜೊತೆ ಹೊಸ ಸಿಯೆರಾ ಆಧುನಿಕ ಪ್ರೊಫೈಲ್ ನಿಂದ ಕೂಡಿರುತ್ತದೆ. ಇನ್ನು ಹೊಸ ಟಾಟಾ ಸಿಯೆರಾ ಎಸ್‍ಯುವಿಯ ನೋಟ ಹಿಂದೆಂದಿಗಿಂತಲೂ ಹೆಚ್ಚು ಸಿದ್ಧವಾಗಿದೆ. ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಮುಂಭಾಗದಲ್ಲಿ ಸಂಪೂರ್ಣ ಲೈಟ್‌ಬಾರ್-ಶೈಲಿಯ DRL ಸೆಟಪ್ ಅನ್ನು ಹೊಂದಿದ್ದು, ಅದರ ಕೆಳಗೆ ಟಾಟಾ ಬ್ಯಾಡ್ಜ್ ಅನ್ನು ಹೊಂದಿದೆ. ಇದರ ಕೆಳಗೆ ನಿಜವಾದ ಹೆಡ್‌ಲ್ಯಾಂಪ್‌ಗಳನ್ನು ಸಂಪರ್ಕಿಸುವ ಕ್ರೋಮ್ ಸ್ಟ್ರಿಪ್ ಇರುತ್ತದೆ.

ಇನ್ನು ICE ರೂಪದಲ್ಲಿ ಸಿಯೆರಾಗಾಗಿ ತೆರೆಯಬಹುದಾದ ದೊಡ್ಡ ಫಾಕ್ಸ್ ಗ್ರಿಲ್ ಅನ್ನು ಕೂಡ ಚಿತ್ರದಲ್ಲಿ ನೋಡಬಹುದಾಗಿದೆ. ಈ ಹೊಸ ಸಿಯೆರಾ ಎಸ್‍ಯುವಿಯ ಬದಿಗಳಲ್ಲಿ ಈ ಎಸ್‍ಯುವಿ ಉತ್ಪಾದನೆಗೆ ಸಿದ್ದವಾಗಿರುವ ಮಾದರಿಯಂತೆ ಕೆಲವು ಸುಳಿವಿನ ಅಂಶಗಳನ್ನು ಹೊಂದಿವೆ. ಟಾಟಾ ಮೋಟಾರ್ಸ್‌ನ ಸಿಯೆರಾ ಇವಿ ಎಸ್‍ಯುವಿ ಸಾಂಪ್ರದಾಯಿಕ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳ ಒಳಗೆ ಇರುವ ವ್ಹೀಲ್ ಗಳು ಉತ್ಪಾದನಾ ವಾಹನದಲ್ಲಿ ಸಾಮಾನ್ಯವಾಗಿ ಕಾಣುತ್ತವೆ.

ಇನ್ನು ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಹಿಂಭಾಗದಲ್ಲಿ, ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸಾಂಪ್ರದಾಯಿಕ ಟೈಲ್‌ಗೇಟ್‌ಗಳಂತೆ ಸಮಗ್ರ ರೂಫ್ ಸ್ಪಾಯ್ಲರ್ ಅನ್ನು ಗೋಚರಿಸುವಂತಿದೆ. ಹೊಸ ಟಾಟಾ ಸಿಯೆರಾ ಎಸ್‍ಯುವಿಯಲ್ಲಿ ಡ್ಯಾಶ್‌ನಲ್ಲಿ ಕಂಡುಬರುವ ಡ್ಯುಯಲ್ ಡಿಸ್ ಪ್ಲೇ ಸೆಟಪ್‌ನೊಂದಿಗೆ ಒಳಾಂಗಣಗಳು ಹೆಚ್ಚು ಸಾಂಪ್ರದಾಯಿಕವಾಗಿ ಕಾಣುತ್ತವೆ, ಇದು ಉಳಿದ ಕ್ಯಾಬಿನ್‌ನೊಂದಿಗೆ ಡ್ಯುಯಲ್-ಟೋನ್ ನೋಟವನ್ನು ಹೊಂದಿದೆ. ಟಾಟಾ ಮೋಟಾರ್ಸ್ ಸಿಯೆರಾ ಇವಿಯ ನಿಜವಾದ ಪವರ್‌ಟ್ರೇನ್ ಮತ್ತು ಅದರ ಬಿಡುಗಡೆಯ ಟೈಮ್‌ಲೈನ್ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ.

Most Read Articles

Kannada
English summary
New tata sierra concept design details in kannada
Story first published: Friday, January 27, 2023, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X