ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಜನಪ್ರಿಯ ಟಾಟಾ ಸಿಯೆರಾ

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 2023ರ ಆಟೋ ಎಕ್ಸ್ ಪೋದಲ್ಲಿ ಉತ್ಪಾದನೆಗೆ ಸಿದ್ಧವಾಗಿರುವ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಈಗಾಗಲೇ ಅನಾವರಣಗೊಳಿಸಿದೆ. ಟಾಟಾದ ಕಾರುಗಳ ಸರಣಿಯಲ್ಲಿ ಸಫಾರಿ ಎಸ್‍ಯುವಿ ಮಾದರಿಯ ಮೇಲಿನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅಲ್ಲದೇ ಇದನ್ನು ಪೆಟ್ರೋಲ್ ರೂಪಾಂತರದಲ್ಲಿಯೂ ಬಿಡುಗಡೆಯಾಗಲಿದೆ.

ಗ್ರೇಟರ್ ನೋಯ್ಡಾದಲ್ಲಿ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಯೆರಾ ಇವಿ ಕೂಡ ಒಂದಾಗಿದೆ. ಟಾಟಾದ ಲೈನಪ್‌ನ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ICE ವಾಹನಗಳನ್ನು ಹುಟ್ಟುಹಾಕಲು ಬಳಸಬಹುದಾದ ಸ್ಕೇಲೆಬಲ್ ಪ್ಲಾಟ್‌ಫಾರ್ಮ್‌ನಲ್ಲಿದೆ. ಟಾಟಾ ಸಿಯೆರಾ ಇವಿ 2020ದಲ್ಲಿ ಆಟೋ ಎಕ್ಸ್‌ಪೋದ ಹಿಂದಿನ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾನ್ಸೆಪ್ಟ್ ಗಿಂತ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಸಿಯೆರಾ ಇವಿಯ ಒಟ್ಟಾರೆ ನೋಟವು 2020 ರಿಂದ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಜನಪ್ರಿಯ ಟಾಟಾ ಸಿಯೆರಾ

ವಿನ್ಯಾಸ
ಹೊಸದಾಗಿ ಅನಾವರಣಗೊಂಡ ಟಾಟಾ ಸಿಯೆರಾ ಎಸ್‍ಯುವಿಯ ನೋಟ ಹಿಂದೆಂದಿಗಿಂತಲೂ ಹೆಚ್ಚು ಸಿದ್ಧವಾಗಿದೆ. ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಮುಂಭಾಗದಲ್ಲಿ ಸಂಪೂರ್ಣ ಲೈಟ್‌ಬಾರ್-ಶೈಲಿಯ DRL ಸೆಟಪ್ ಅನ್ನು ಹೊಂದಿದ್ದು, ಅದರ ಕೆಳಗೆ ಟಾಟಾ ಬ್ಯಾಡ್ಜ್ ಅನ್ನು ಹೊಂದಿದೆ. ಇದರ ಕೆಳಗೆ ನಿಜವಾದ ಹೆಡ್‌ಲ್ಯಾಂಪ್‌ಗಳನ್ನು ಸಂಪರ್ಕಿಸುವ ಕ್ರೋಮ್ ಸ್ಟ್ರಿಪ್ ಇರುತ್ತದೆ. ಇನ್ನು ICE ರೂಪದಲ್ಲಿ ಸಿಯೆರಾಗಾಗಿ ತೆರೆಯಬಹುದಾದ ದೊಡ್ಡ ಫಾಕ್ಸ್ ಗ್ರಿಲ್ ಅನ್ನು ಕೂಡ ಚಿತ್ರದಲ್ಲಿ ನೋಡಬಹುದಾಗಿದೆ.

ಈ ಹೊಸ ಸಿಯೆರಾ ಎಸ್‍ಯುವಿಯ ಬದಿಗಳಲ್ಲಿ ಈ ಎಸ್‍ಯುವಿ ಉತ್ಪಾದನೆಗೆ ಸಿದ್ದವಾಗಿರುವ ಮಾದರಿಯಂತೆ ಕೆಲವು ಸುಳಿವಿನ ಅಂಶಗಳನ್ನು ಹೊಂದಿವೆ. ಟಾಟಾ ಮೋಟಾರ್ಸ್‌ನ ಸಿಯೆರಾ ಇವಿ ಎಸ್‍ಯುವಿ ಸಾಂಪ್ರದಾಯಿಕ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳ ಒಳಗೆ ಇರುವ ವ್ಹೀಲ್ ಗಳು ಉತ್ಪಾದನಾ ವಾಹನದಲ್ಲಿ ಸಾಮಾನ್ಯವಾಗಿ ಕಾಣುತ್ತವೆ. ಇನ್ನು ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಹಿಂಭಾಗದಲ್ಲಿ, ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸಾಂಪ್ರದಾಯಿಕ ಟೈಲ್‌ಗೇಟ್‌ಗಳಂತೆ ಸಮಗ್ರ ರೂಫ್ ಸ್ಪಾಯ್ಲರ್ ಅನ್ನು ಗೋಚರಿಸುವಂತಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಜನಪ್ರಿಯ ಟಾಟಾ ಸಿಯೆರಾ

ಇಂಟಿರಿಯರ್
ಹೊಸ ಟಾಟಾ ಸಿಯೆರಾ ಎಸ್‍ಯುವಿಯಲ್ಲಿ ಡ್ಯಾಶ್‌ನಲ್ಲಿ ಕಂಡುಬರುವ ಡ್ಯುಯಲ್ ಡಿಸ್ ಪ್ಲೇ ಸೆಟಪ್‌ನೊಂದಿಗೆ ಒಳಾಂಗಣಗಳು ಹೆಚ್ಚು ಸಾಂಪ್ರದಾಯಿಕವಾಗಿ ಕಾಣುತ್ತವೆ, ಇದು ಉಳಿದ ಕ್ಯಾಬಿನ್‌ನೊಂದಿಗೆ ಡ್ಯುಯಲ್-ಟೋನ್ ನೋಟವನ್ನು ಹೊಂದಿದೆ. ಟಾಟಾ ಮೋಟಾರ್ಸ್ ಸಿಯೆರಾ ಇವಿಯ ನಿಜವಾದ ಪವರ್‌ಟ್ರೇನ್ ಮತ್ತು ಅದರ ಬಿಡುಗಡೆಯ ಟೈಮ್‌ಲೈನ್ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ. ಟಾಟಾ Gen 2 ಎಲೆಕ್ಟ್ರಿಕ್ ವಾಹನಗಳ ಸರಣಿಯು 2025ರ ವೇಳೆಗೆ ಬಿಡುಗಡೆಯಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ಸಿಯೆರಾ ಯಾವಾಗ ಬೇಕಾದರೂ ಆಗಮಿಸುವ ನಿರೀಕ್ಷೆಯಿದೆ.

ಬ್ಯಾಟರಿ ಸ್ಪೆಕ್ ಹಾಗೂ ರೇಂಜ್
ಮುಂದಿನ ದಿನಗಳಲ್ಲಿ ಈ ಹೊಸ ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಇನ್ನು ಈ ಟಾಟಾ ಸಿಯೆರಾ ಎಲೆಕ್ಟ್ರಿಕ್ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದುವ ನಿರೀಕ್ಷೆಯಿದೆ. ಎರಡನೆಯದು 40.5kWh ಬ್ಯಾಟರಿ ಪ್ಯಾಕ್‌ನೊಂದಿಗೆ 437 ಕಿ.ಮೀ ರೇಂಜ್ ಅನ್ನು ನೀಡಬಹುದು ಇದರಲ್ಲಿ ಎಲೆಕ್ಟ್ರಿಕ್ ಮೋಟರ್ ಕೂಡ ಇದೆ. ಸೆಟಪ್ 143bhp ಪವರ್ ಮತ್ತು 250Nm ಟಾರ್ಕ್ ಅನ್ನು ನೀಡುತ್ತದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಜನಪ್ರಿಯ ಟಾಟಾ ಸಿಯೆರಾ

ಇನ್ನು ಟಾಟಾ ಕಂಪನಿಯು ಜೆನ್ 2 ಇವಿಗಳೊಂದಿಗೆ ಗುರಿಯನ್ನು ಹೊಂದಿದೆ ಎಂದು ಹೇಳಿದೆ. 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಟಾಟಾ ಮೋಟಾರ್ಸ್ ಕಂಪನಿಯು 1.2 ಲೀಟರ್ 3-ಸಿಲಿಂಡರ್ ಮತ್ತು 1.5 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅನಾವರಾಗೊಳಿಸಿದ್ದಾರೆ. ಇನ್ನು ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಆರಂಭಿಸಿದ್ದಾರೆ.

ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸ್ಥಿರವಾಗಿ ದಾಖಲಿಸುತ್ತಿವೆ. ಇದೇ ವೇಳೆಯಲ್ಲಿ ಟಾಟಾ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ.

Most Read Articles

Kannada
English summary
Find here some top highlights of new tata sierra in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X