ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಟಾಟಾ ಮೋಟಾರ್ಸ್ ಕಂಪನಿಯು ದೇಶದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆದ ಟಿಯಾಗೋ ಇವಿ ವಿತರಣೆಯನ್ನು ಪ್ರಾರಂಭಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯು 133 ನಗರಗಳಲ್ಲಿ 2,000 ಯುನಿಟ್ ಗಳನ್ನು ಒಳಗೊಂಡಿರುವ ಮೊದಲ ಬ್ಯಾಚ್‌ಗೆ ಕೀಗಳನ್ನು ಹಸ್ತಾಂತರಿಸಿದ್ದಾರೆ. ಈ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಕೇವಲ ಒಂದೇ ದಿನದಲ್ಲಿ, 10,000 ಬುಕ್ಕಿಂಗ್ ಗಳನ್ನು ಪಡೆದುಕೊಂಡಿತು. ಇದು ದೇಶದಲ್ಲಿ ಅತ್ಯಂತ ವೇಗವಾಗಿ ಬುಕ್ ಆಗುವ ಎಲೆಕ್ಟ್ರಿಕ್ ಕಾರ್ ಆಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಇವಿ ವಿಶೇಷ ಪರಿಚಯಾತ್ಮಕ ಬೆಲೆಗಳನ್ನು ಹೆಚ್ಚುವರಿ 10,000 ಯುನಿಟ್‌ಗಳಿಗೆ ವಿಸ್ತರಿಸಿದೆ.

ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ

ಎಲೆಕ್ಟ್ರಿಕ್ ಕಾರಿಗೆ ಗ್ರಾಹಕರಿಂದ ಇಷ್ಟೊಂದು ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ಇದೇ ಮೊದಲು. ಈ ಕಾರು ಖರೀದಿಸಲು ಬಯಸುವ ಆಸಕ್ತ ಗ್ರಾಹಕರು ಟಾಟಾ ಡೀಲರ್‌ಶಿಪ್‌ನಲ್ಲಿ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಬುಕ್ಕಿಂಗ್ ಟೋಕನ್ ಮೊತ್ತ 21,000 ರೂ. ಆಗಿದೆ. ಟಾಟಾ ಮೋಟಾರ್ಸ್ ಕಂಪನಿಯು 2026ರ ವೇಳೆಗೆ ಹತ್ತು ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊವನ್ನು ಹೊಂದಲು ಟಾಟಾದ ಯೋಜನೆಗಳ ಭಾಗವಾಗಿದೆ. ಇದರ ನೆಟ್‌ವರ್ಕ್ ಆಗಿ 80 ಹೊಸ ನಗರಗಳನ್ನು ಪ್ರವೇಶಿಸಿದೆ.

165ಕ್ಕೂ ಹೆಚ್ಚು ನಗರಗಳಿಗೆ ಕೂಡ ವಿಸ್ತರಿಸಲಾಗಿದೆ. ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು IP67-ರೇಟೆಡ್ 24 kWh ಮತ್ತು 19.2 kWh ಬ್ಯಾಟರಿ ಪ್ಯಾಕ್‌ಗಳನ್ನು ಅಳವಡಿಸಲಾಗಿದೆ. ಮೊದಲನೆಯದು 315 ಕಿ.ಮೀ ರೇಂಜ್ ಅನ್ನು ನೀಡಿದರೆ, ಎರಡನೆಯದು ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತದೆ.

ಈ ಕಾರಿನಲ್ಲಿ 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಅನ್ನು ಮಾಡಬಹುದಾಗಿದೆ. 50kW ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 57 ನಿಮಿಷಗಳಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಬಹುದಾಗಿದೆ. ಕೊಡುಗೆಯನ್ನು ಹೆಚ್ಚು ಆಕರ್ಷಕವಾಗಿಸಲು, ಟಾಟಾ ಎಲೆಕ್ಟ್ರಿಕ್ ಹ್ಯಾಚ್ ಅನ್ನು ಎಂಟು ವರ್ಷ ಅಥವಾ 1.60 ಲಕ್ಷ ಕಿಮೀ ವಾರಂಟಿಯೊಂದಿಗೆ (ಯಾವುದು ಮೊದಲು ಬರುತ್ತದೆಯೋ ಅದು) ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಬರುತ್ತದೆ.

ಹೆಚ್ಚಿನ ಅನುಕೂಲಕ್ಕಾಗಿ, ನಾಲ್ಕು ಚಾರ್ಜಿಂಗ್ ಆಯ್ಕೆಗಳು ಕೂಡ ಲಭ್ಯವಿದೆ. ಇನ್ನು 15ಎಎಂಪಿ ಹೋಂ ಚಾರ್ಜರ್ ಮೂಲಕ ಚಾರ್ಜ್‌ ಮಾಡಿದ್ದಲ್ಲಿ ಕನಿಷ್ಠ 15 ರಿಂದ 18 ಗಂಟೆವರೆಗೂ ತೆಗೆದುಕೊಳ್ಳುತ್ತದೆ. ಸ್ವದೇಶಿ ತಯಾರಕರ ಟಾಟಾ ಹೇಳುವಂತೆ ಟಿಯಾಗೋ ಎಲೆಕ್ಟ್ರಿಕ್ ಕಾರು 1,000 ರೂ. 1,100 ಕಿಮೀ ಚಾಲನೆಗೆ ಇದು ಹೆಚ್ಚು ಆಕರ್ಷಕವಾದ ಪ್ರತಿಪಾದನೆಯಾಗಿದೆ ಮತ್ತು 250 ಕಿಮೀಗೆ 20 ಯೂನಿಟ್‌ಗಳ ಬಳಕೆಯೊಂದಿಗೆ, ನೀವು ಪ್ರತಿ ಕಿ.ಮೀ.ಗೆ 60 ಪೈಸೆ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೆಡ್‌ಲೈಟ್ ಸುತ್ತಲೂ ಬ್ಲ್ಯೂ ಹೈಲೈಟ್ಸ್ ನೀಡಲಾಗಿದೆ. ಎಲೆಕ್ಟ್ರಿಕ್ ಮಾದರಿಯಾಗಿ ಗುರುತಿಸಲು ಬ್ಲ್ಯೂ ಆಕ್ಸೆಂಟ್ ಸಹಕಾರಿಯಾಗಿದ್ದು, ಗೇರ್ ಸ್ಥಾನದಲ್ಲಿ ಇದೀಗ ಡ್ರೈವ್ ಮೋಡ್ ಡಯಲ್ ಅನ್ನು ಹೊಂದಿದೆ. ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ 7 ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ, ಅಂಡ್ರಾಯ್ಡ್ ಮತ್ತು ಆಟೋ ಕಾರ್ ಪ್ಲೇ, 8 ಸ್ಪೀಕರ್ಸ್ ಹರ್ಮನ್ ಆಡಿಯೋ ಸಿಸ್ಟಂ, ಜೆಡ್ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ ಅನ್ನು ಒಳಗೊಂಡಿದೆ.

ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 4 ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಅನ್ನು ನೀಡಿದೆ. ಗ್ರಾಹಕರು ಈ ಹೊಸ ಕಾರನ್ನು ಟೀಲ್ ಬ್ಲ್ಯೂ, ಡೇ ಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಮಿಡ್‌ನೈಟ್ ಪ್ಲಮ್ ಮತ್ತು ಟ್ರೋಪಿಕಲ್ ಮಿಸ್ಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟಾಟಾ ಕಂಪನಿಯು ಸಿಟಿ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ನೀಡಿದೆ.

Article Published On: Friday, February 3, 2023, 18:30 [IST]
English summary
New tata tiago ev deliveries commence in india details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+