ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿ ಅನಾವರಣ: ಐಷಾರಾಮಿ ಕಾರುಗಳಿಗೆ ನಡುಕ ಶುರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಟೊಯೊಟಾ ಸೆಂಚುರಿ (Toyota Century) ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಟೊಯೊಟಾ ಸೆಂಚುರಿ ಮಾದರಿಯು ಅಷಾರಾಮಿ ಎಸ್‍ಯುವಿಯಾಗಿದೆ. ಜಪಾನೀಸ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 1967 ರಲ್ಲಿ ಟೊಯೊಟಾ ಸೆಂಚುರಿ ಎಂಬ ಕಾರು ಬಿಡುಗಡೆಗೊಂಡಿತು.

ಈ ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿ ಅದರ ಬಿಡುಗಡೆಯನ್ನು ಈ ವರ್ಷ ಜಪಾನ್‌ಗೆ ನಿಗದಿಪಡಿಸಲಾಗಿದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಬಿಡುಗಡೆಯಾಗಲಿದೆ. ಟೊಯೊಟಾ ಪ್ರಸ್ತುತ ಭಾರತದಲ್ಲಿ ಹೊಸ ಸೆಂಚುರಿ ಐಷಾರಾಮಿ ಎಸ್‍ಯುವಿಯನ್ನು ಪರಿಚಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿಯಲ್ಲಿ 3.5 ಲೀಟರ್ V6 ಪೆಟ್ರೋಲ್ ಎಂಜಿನ್ ಅನ್ನು ಪ್ಲಗ್-ಇನ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಜೋಡಿಸಲಾಗಿದೆ.

Toyota Century

ಈ ಎಂಜಿನ್ 406 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಟೊಯೊಟಾ ಎಸ್‍ಯುವಿಯು WLTC ಸೈಕಲ್‌ನ ಪ್ರಕಾರ ಇದು, 69 ಕಿ.ಮೀ ರೇಂಜ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿಯಲ್ಲಿ ನಾರ್ಮಲ್, ಇಕೋ, ಸ್ಪೋರ್ಟ್ ಮತ್ತು ರಿಯರ್ ಕಂಫರ್ಟ್ ಸೇರಿದಂತೆ ಡ್ಯುಯಲ್ ಡ್ರೈವ್ ಮೋಡ್‌ಗಳನ್ನು ಒಳಗೊಂಡಿದೆ.

ಇನ್ನು ಬ್ಯಾಟರಿಯು ಖಾಲಿಯಾದಾಗ, ಇದು 100km ಗೆ ಸರಾಸರಿ 7 ಲೀಟರ್ಗಳಷ್ಟು ಹೈಬ್ರಿಡ್ ಇಂಧನ ಬಳಕೆಯನ್ನು ಹೊಂದಿರುತ್ತದೆ. ಈ ಹೊಸ ಟೊಯೊಟಾ ಮೋಟಾರ್ ಮತ್ತು ಎಂಜಿನ್ ಶಕ್ತಿಯುತ ಮತ್ತು ಉಲ್ಲಾಸದಾಯಕ ಪರ್ಫಾಮ್ನೆಸ್ ನೀಡುತ್ತದೆ ಎಂದು ಟೊಯೋಟಾ ಹೈಲೈಟ್ ಮಾಡುತ್ತದೆ. ಹೆಚ್ಚುವರಿಯಾಗಿ, ಇದು "ಡೈನಾಮಿಕ್ ರಿಯರ್ ಸ್ಟೀರಿಂಗ್" ಎಂಬ ಫ್ಹೋರ್-ವ್ಹೀಲ್ ಸ್ಟೀರಿಂಗ್ ಸಿಸ್ತಂ ಅನ್ನು ಹೊಂದಿದೆ. ಇದು ಕಡಿಮೆ ವೇಗದಲ್ಲಿ ಸುಗಮ ನಿರ್ವಹಣೆಯನ್ನು ಹೊಂದಿದೆ.

Toyota Century

ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿಯು ಉದ್ದ - 5,205mm, ಅಗಲ - 1,990mm ಮತ್ತು ಎತ್ತರ - 1,805mm ಹೊಂದಿದೆ. ಈ ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿಯನ್ನು ಹಿಂದಿನ ಡಾನ್‌ಗೆ ಹೋಲಿಸಿದರೆ, 130 ಎಂಎಂ ಚಿಕ್ಕದಾಗಿದೆ, 60 ಎಂಎಂ ಅಗಲ ಮತ್ತು 300 ಎಂಎಂ ಎತ್ತರವಾಗಿದೆ. ಹೊಸ ಎಸ್‍ಯುವಿಯು 2,950mm ವ್ಹೀಲ್‌ಬೇಸ್ ಮತ್ತು 2,570 ಕೆಜಿ ತೂಕವನ್ನು ಹೊಂದಿದೆ.

ಈ ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿ ಹಿಂಭಾಗದ ಡೋರುಗಳು 75 ಡಿಗ್ರಿಗಳಷ್ಟು ತೆರೆದುಕೊಳ್ಳುತ್ತವೆ. ಇದರಲ್ಲಿ ಹೊಸದಾಗಿ-ಅಭಿವೃದ್ಧಿಪಡಿಸಿದ ಲಗೇಜ್ ಕಂಪಾರ್ಟ್ಮೆಂಟ್ ಪ್ರತ್ಯೇಕ ರಚನೆ ಹೊಂದಿದೆ. ಹೊಸ ಟೊಯೊಟಾ ಸೆಂಚುರಿ ಎಸ್‍ಯುವಿಯು ಡ್ಯುಯಲ್ 12.3-ಇಂಚಿನ ಡಿಸ್ ಪ್ಲೇಗಳು, 18-ಸ್ಪೀಕರ್ ಸೌಂಡ್ ಸಿಸ್ಟಮ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಎರಡು ತೆಗೆಯಬಹುದಾದ 5.5-ಇಂಚಿನ ಟಚ್ಸ್ಕ್ರೀನ್ ಗಳನ್ನು ಹೊಂದಿವೆ.

Toyota Century

ಇದರೊಂದಿಗೆ ಎರಡು ಸೇರಿದಂತೆ ಸುಧಾರಿತ ಫೀಚರ್ಸ್ ಗಳನ್ನು ಹೊಂದಿವೆ. ಇನ್ನು 11.6-ಇಂಚಿನ ಟಿವಿಗಳು, ರೆಫ್ರಿಜರೇಟರ್, ಟರ್ನ್ ಪಿಕ್ನಿಕ್ ಟೇಬಲ್‌ಗಳು, ಡಿಜಿಟಲ್ ರಿಯರ್‌ವ್ಯೂ ಮಿರರ್, ವೈರ್‌ಲೆಸ್ ಫೋನ್ ಚಾರ್ಜರ್, ಹೀಟೆಡ್ ಸ್ಟೀರಿಂಗ್ ವೀಲ್ ಮತ್ತು ಇನ್ನಷ್ಟಗಳನ್ನು ಒಳಗೊಂಡಿದೆ. ಇನ್ನು ಟೊಯೊಟಾ ಮತ್ತು ಲೆಕ್ಸಸ್ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ವಾರಗಳಲ್ಲಿ ಭಾರತದಲ್ಲಿ ತಮ್ಮ ಜಾಗತಿಕ ಮಾದರಿಗಳನ್ನು ಪೂರ್ವಭಾವಿಯಾಗಿ ಪರಿಚಯಿಸುತ್ತಿವ

ಉದಾಹರಣೆಗೆ Vellfire ಮತ್ತು ಮುಂಬರುವ ಲೆಕ್ಸಸ್ LM ಎಂಪಿವಿ ಸೇರಿದೆ. ಸೆಂಚುರಿ ಎಸ್‍ಯುವಿಯನ್ನು ಆರಂಭದಲ್ಲಿ ಜಪಾನ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಬಹುದು. ಟೊಯೊಟಾ ಸೆಂಚುರಿ ಐಷಾರಾರಾಮಿ ಎಸ್‍ಯುವಿಯು ಮರ್ಸಿಡಿಸ್ Bentley,Range Rover ಮತ್ತು Mercedes-Maybach ಮುಂತಾದ ಬ್ರ್ಯಾಂಡ್‌ಗಳ ಐಷಾರಾಮಿ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, September 7, 2023, 11:33 [IST]
English summary
New toyota century suv unveiled specs features details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+