ಬೈಕ್‌ನಂತೆ ಮೈಲೇಜ್, ಆಕರ್ಷಕ ಬೆಲೆಯ 7-ಸೀಟರ್ ಟೊಯೊಟಾ ಕಾರಿನ ವಿಶೇಷತೆಗಳು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯನ್ನು ಬಿಡುಗಡೆಗೊಳಿಸಿದೆ. ಹೆಚ್ಚು ಯಶಸ್ವಿಯಾದ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯನ್ನು ಆಧರಿಸಿರುವುದರಿಂದ ಟೊಯೊಟಾ ಕಂಪನಿಗೆ ಹೆಚ್ಚಿನ ಭರವಸೆಯನ್ನು ನೀಡಿದೆ.
ಆಸಕ್ತಿದಾಯಕ ಸಂಗತಿಯೆಂದರೆ ಟೊಯೊಟಾ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ರೂಮಿಯಾನ್ ಅನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿದೆ. ಹೊಸದಾಗಿ ಬಿಡುಗಡೆಯಾದ ಟೊಯೊಟಾ ರೂಮಿಯಾನ್ ಎಂಪಿವಿ ಈ ಹಬ್ಬದ ಸೀಸನ್ ನಲ್ಲಿ ಭಾರತದಲ್ಲಿ ಅನೇಕ ನಿರೀಕ್ಷಿತ ಖರೀದಿದಾರರ ಗಮನವನ್ನು ಸೆಳೆಯಬಹುದು. ಈ ಹೊಸ ಟೊಯೊಟಾ ರೂಮಿಯಾನ್ ಎಂಪಿವಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿನ್ಯಾಸ: ಟೊಯೊಟಾ ರೂಮಿಯಾನ್ ಎಂಪಿವಿಯು ಹೊಸ ಮುಂಭಾಗದ ಬಂಪರ್ ಮತ್ತು ಗ್ರಿಲ್ ಅನ್ನು ಹೊಂದಿದೆ. ಈ ವಿನ್ಯಾಸದ ನವೀಕರಣಗಳ ಜೊತೆಗೆ, ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು ಮತ್ತು ಸ್ವಲ್ಪ ನವೀಕರಿಸಿದ ಹಿಂಭಾಗದ ಬಂಪರ್ ಜೊತೆಗೆ ಬರುತ್ತದೆ. ಈ ಹೊಸ ರೂಮಿಯಾನ್ ಕ್ರೋಮ್ ಜೊತೆ ಒಂದು ವಿಶಿಷ್ಟವಾದ ಮುಂಭಾಗದ ಗ್ರಿಲ್ ಅನ್ನು ಪ್ರಿ-ಫೇಸ್‌ಲಿಫ್ಟ್ ಇನೋವಾ ಕ್ರಿಸ್ಟಾದಿಂದ ಸ್ಫೂರ್ತಿಯನ್ನು ಪಡೆಯುತ್ತದೆ.
ರೂಪಾಂತರಗಳು: ಹೊಸದಾಗಿ ಬಿಡುಗಡೆಯಾದ ಟೊಯೊಟಾ ರೂಮಿಯಾನ್ ಎಂಪಿವಿಯು 6 ರೂಪಾಂತರಗಳಲ್ಲಿ ಲಭ್ಯವಿದೆ. ಇದು S, G, ಮತ್ತು V ಎಂಬ 3 ಟ್ರಿಮ್ ಹಂತಗಳನ್ನು ಒಳಗೊಂಡಿದೆ. ಇದರಲ್ಲಿ 'V' ಟಾಪ್-ಸ್ಪೆಕ್ ಟ್ರಿಮ್ ಆದರೆ 'S' ರೂಪಾಂತರವು ಮೂಲ ಮಾದರಿಯಾಗಿದೆ. ಇದಲ್ಲದೆ, ಟೊಯೊಟಾ ಸಿಎನ್‌ಜಿ ರೂಪಾಂತರವನ್ನು ಎಸ್ ಟ್ರಿಮ್ ಮಟ್ಟದಲ್ಲಿ ನೀಡುತ್ತದೆ.

ಟೊಯೊಟಾ ರೂಮಿಯಾನ್ ಎಂಪಿವಿಯ ಆಟೋಮ್ಯಾಟಿಕ್ ರೂಪಾಂತರಗಳನ್ನು S ಮತ್ತು V ಎಂಬ ಎರಡು ಟ್ರಿಮ್ ಹಂತಗಳಲ್ಲಿ ನೀಡಲಾಗುತ್ತದೆ. ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಹೆಚ್ಚು ಫ್ಯಾಮಿಲಿ ಕಾರನ್ನು ಖರೀದಿಸಲು ಬಯಸುವ ಗ್ರಾಹಕರನ್ನು ಸೆಳೆಯುತ್ತದೆ. ಅಲ್ಲದೇ ಹೆಚ್ಚು ಸಿಟಿಗಳಲ್ಲಿ ದೈನಿಂದಿನ ಬಳಕೆ ಮಾಡಲು ಬಯಸುವ ಗ್ರಾಹಕರನ್ನು ಕೂಡ ಸೆಳೆಯುತ್ತದೆ.
ಬೆಲೆ: ಟೊಯೊಟಾ ರುಮಿಯಾನ್ ಎಂಪಿವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.29 ಲಕ್ಷದಿಂದ ಪ್ರಾರಂಭವಾಗುತ್ತದೆ. ಆಟೋಮ್ಯಾಟಿಕ್ ರೂಪಾಂತರಗಳ ಬೆಲೆಗಳು ರೂ.11.89 ಲಕ್ಷ ಮತ್ತು ರೂ.13.68 ಲಕ್ಷವಾಗಿದೆ. ಇನ್ನು ಟೊಯೊಟಾ ರುಮಿಯಾನ್ ಎಂಪಿವಿಯ CNG ಮಾದರಿಯು ಒಂದೇ ರೂಪಾಂತರದಲ್ಲಿ ಲಭ್ಯವಿದೆ. ಇದರ ಬೆಲೆಯು ರೂ.11.24 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಎಂಜಿನ್: ಟೊಯೊಟಾ ರುಮಿಯಾನ್ ಎಂಪಿವಿಯಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರೆಡ್ ಪೆಟ್ರೋಲ್ ಎಂಜಿನ್ ಮಾರುತಿ ಸುಜುಕಿ ಎರ್ಟಿಗಾದಂತೆಯೇ ಇದೆ. ಈ ಎಂಜಿನ್ 102 bhp ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದು.
ಇನ್ನು ಟೊಯೊಟಾ ರುಮಿಯಾನ್ ಎಂಪಿವಿ CNG ಮೋಡ್‌ನಲ್ಲಿರುವ ಡ್ಯುಯಲ್-ಫ್ಯೂಯಲ್ ಪವರ್‌ಟ್ರೇನ್ 87 bhp ಮತ್ತು 121 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಪ್ರತ್ಯೇಕವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಅಲ್ಲದೆ, ರೂಮಿಯಾನ್ ಸಿಎನ್‌ಜಿಯು 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಟೊಯೊಟಾ ಹೇಳಿಕೊಂಡಿದೆ.
ಫೀಚರ್ಸ್: ಟೊಯೊಟಾ ರುಮಿಯಾನ್ ಎಂಪಿವಿಯು ಮಾರುತಿ ಸುಜುಕಿ ಎರ್ಟಿಗಾದಂತೆಯೇ ಸಜ್ಜುಗೊಂಡಿದೆ. ಈ ಹೊಸ ಎಂಪಿವಿಯಲ್ಲಿ ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ AppleCarPlay ಮತ್ತು Android Auto, 6 ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಚ್ಚಿನವುಗಳನ್ನು ಕೆಲವು ಅತ್ಯುತ್ತಮ ಫೀಚರ್ಸ್ ಗಳನ್ನು ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications