ಹೆಚ್ಚು ಮೈಲೇಜ್, ಕೈಗೆಟುಕುವ ಬೆಲೆಯಲ್ಲಿ ಹೊಸ ಟೊಯೊಟಾ ಕಾರು ಬಿಡುಗಡೆಗೆ ಸಜ್ಜು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ಬಹುನಿರೀಕ್ಷಿತ ಹೊಸ ಎಂಪಿವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಈ ಹೊಸ ಟೊಯೊಟಾ ಎಂಪಿವಿಗೆ ರೂಮಿಯಾನ್ (Rumion) ಎಂಬ ಹೆಸರನ್ನು ನೀಡಲಾಗಿದೆ. ಇದು ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯ ರಿಬ್ಯಾಡ್ಜ್ ಆವೃತ್ತಿ ಇದಾಗಿದೆ.
ಆಸಕ್ತಿದಾಯಕ ಸಂಗತಿಯೆಂದರೆ ಟೊಯೊಟಾ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ರೂಮಿಯಾನ್ ಅನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಈ ಹೊಸ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯ ಬೆಲೆ ಮತ್ತು ಬುಕಿಂಗ್ ಮೊತ್ತವನ್ನು ಘೋಷಿಸಲಾಗಿಲ್ಲ. ಟೊಯೊಟಾ ಆಗಿರುವುದರಿಂದ, ರೂಮಿಯಾನ್ 3 ವರ್ಷಗಳು/1,00,000 ಕಿಮೀ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಬರಲಿದೆ.

ಟೊಯೊಟಾ ರೂಮಿಯಾನ್ ಕಾರು S, G, ಮತ್ತು V ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.ಪ್ರತಿಯೊಂದು ರೂಪಾಂತರವು ತನ್ನದೇ ಆದ ಫೀಚರ್ಸ್ ಮತ್ತು ತಾಂತ್ರಿಕ ಅಂಶಗಳನ್ನು ಹೊಂದಿವೆ. ಇವುಗಳು ವಿಭಿನ್ನ ಗ್ರಾಹಕರ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸುತ್ತದೆ. ಈ ಪ್ರತಿ ರೂಪಾಂತರಗಳ ಪ್ರತ್ಯೇಕ ಫೀಚರ್ಸ್ ಮತ್ತು ಇತರ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.
ರೂಮಿಯನ್ ಎಸ್: ಟೊಯೊಟಾ ರೂಮಿಯಾನ್ ಎಸ್ ರೂಪಾಂತರದಲ್ಲಿ 1.5 ಲೀಟರ್ ಪೆಟ್ರೋಲ್/CNG ಎಂಜಿನ್ ಅನ್ನು ಹೊಂದಿದೆ. ಈ ರೂಪಾಂತರದಲ್ಲಿ ಸುರಕ್ಷತೆಗಾಗಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು (ಎರಡನೇ ಸಾಲಿಗೆ), ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.

ಎಸ್ ರೂಪಾಂತರದಲ್ಲಿ ಡ್ಯುಯಲ್-ಟೋನ್ ಇಂಟೀರಿಯರ್, ಎಲ್ಲಾ ಮೂರು ಸಾಲುಗಳಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್, ಎರಡನೇ ಸಾಲಿನ ಸೆಂಟರ್ ಆರ್ಮ್‌ರೆಸ್ಟ್, ರೂಫ್-ಮೌಂಟೆಡ್, ಗೇರ್ ಶಿಫ್ಟ್ ಸೂಚಕ (ಮ್ಯಾನ್ಯುಯಲ್ ಮಾತ್ರ), ಮ್ಯಾನ್ಯುವಲ್ ಎಸಿ, ಹೆಡ್‌ಲ್ಯಾಂಪ್, ಕೂಲ್ಡ್ ಕಪ್‌ಹೋಲ್ಡರ್‌ಗಳು, ರಿಮೋಟ್ ಕೀಲೆಸ್ ಎಂಟ್ರಿ, ಎಲ್ಲಾ ಪವರ್ ವಿಂಡೋಗಳು, ಮೊದಲ ಮತ್ತು ಎರಡನೇ ಸಾಲಿನಲ್ಲಿ 12V ಪವರ್ ಸಾಕೆಟ್‌ಗಳು, ಪವರ್ ಮತ್ತು ಟಿಲ್ಟ್ ಸ್ಟೀರಿಂಗ್, ಡ್ರೈವರ್ ವಿಂಡೋ ಆಟೋ ಅಪ್/ಡೌನ್ ಅನ್ನು ಒಳಗೊಂಡಿದೆ.
ರೂಮಿಯನ್ ಜಿ : ಈ ರೂಪಾಂತರದಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್, ಟೊಯೊಟಾ ಕನೆಕ್ಟಿವಿಟಿ ಕಾರ್ ಟೆಕ್, ಡ್ಯುಯಲ್-ಟೋನ್ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ ಮತ್ತು ಎಂಜಿನ್ ಪುಶ್ ಸ್ಟಾರ್ಟ್/ಸ್ಟಾಪ್ ಅನ್ನು ಹೊಂದಿದೆ. ಈ ರೂಪಾಂತರದಲ್ಲಿ 15-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.
ರೂಮಿಯನ್ ವಿ ರೂಪಾಂತರದಲ್ಲಿ 1.5 ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಕೀ-ಚಾಲಿತ ಹಿಂತೆಗೆದುಕೊಳ್ಳುವ ವಿಂಗ್ ಮಿರರ್‌ಗಳು, ಲೆದರ್ ಸುತ್ತುವರೆದ ಸ್ಟೀಯರಿಂಗ್ ವ್ಹೀಲ್ ಮತ್ತು ಆಟೋ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.
ಹೊಸ ಟೊಯೊಟಾ ರೂಮಿಯಾನ್ ಕಾರಿನಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡೂ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ. ಇದರ 1.5-ಲೀಟರ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ಆಸ್ಪರೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 rpm ನಲ್ಲಿ 101 bhp ಪವರ್ ಮತ್ತು 4,400 rpm ನಲ್ಲಿ 136.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
CNG ಯಲ್ಲಿ ಚಾಲನೆಯಲ್ಲಿರುವಾಗ, ಈ ಎಂಜಿನ್ 5,500 rpm ನಲ್ಲಿ 86.63 bhp ಪವರ್ ಮತ್ತು 121.5 Nm ಅನ್ನು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಪವರ್‌ಟ್ರೇನ್‌ಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ. ಪೆಟ್ರೋಲ್ ಎಂಜಿನ್ 6-ಸ್ಪೀಡ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ಸಹ ಪಡೆಯುತ್ತದೆ. ಇದರ ಪೆಟ್ರೋಲ್ ಆವೃತ್ತಿಯು 20.51 ಕಿ.ಮೀ ಮೈಲೇಜ್ ಅನ್ನು ನೀಡಿದರೆ, CNG ಆವೃತ್ತಿಯು 26.11 ಕಿ.ಮೀ ಮೈಲೇಜ್ ನೀಡುತ್ತದೆ.


Click it and Unblock the Notifications