ಭಾರೀ ಡಿಮ್ಯಾಂಡ್: ಬೈಕ್‌ನಂತೆ ಮೈಲೇಜ್, ಅಗ್ಗದ ಬೆಲೆಯ ಈ ಟೊಯೊಟಾ ಕಾರಿಗಾಗಿ ಮುಗಿಬಿದ್ದ ಗ್ರಾಹಕರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯನ್ನು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿತು ಹೆಚ್ಚು ಯಶಸ್ವಿಯಾದ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯನ್ನು ಆಧರಿಸಿರುವುದರಿಂದ ಟೊಯೊಟಾ ಕಂಪನಿಯು ಹೆಚ್ಚಿನ ಭರವಸೆಯನ್ನು ನೀಡಿದೆ.

ಆಸಕ್ತಿದಾಯಕ ಸಂಗತಿಯೆಂದರೆ ಟೊಯೊಟಾ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ರೂಮಿಯಾನ್ ಅನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿದೆ. ಹೊಸದಾಗಿ ಬಿಡುಗಡೆಯಾದ ಟೊಯೊಟಾ ರೂಮಿಯಾನ್ ಎಂಪಿವಿ ಈ ಹಬ್ಬದ ಸೀಸನ್ ನಲ್ಲಿ ಉತ್ತಮವಾಗಿ ಮಾರಾಟವಾಗಿದೆ. ಟೊಯೊಟಾ ಕಂಪನಿಯು ಅಬರ್ನ್ ಕ್ರೂಸರ್ ಹೈರೈಡರ್‌ನಿಂದ ರುಮಿಯಾನ್‌ವರೆಗಿನ ಕಾರುಗಳ ಬೇಡಿಕೆಯನ್ನು ಪೂರೈಸಲು ಹೊಸ ಘಟಕವನ್ನು ತೆರೆಯಲು ಯೋಜಿಸುತ್ತಿದೆ.

Toyota Rumion

ಟೊಯೊಟಾ ಕಾರಿಗಳಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಇದರಿಂದ ಟೊಯೊಟಾ ಕಾರುಗಳಿಗೆ ಹೆಚ್ಚಿನ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಟೊಯೊಟಾ ರೂಮಿಯಾನ್ ಕಾರಿಗಾಗಿ ಸುಮಾರು 12 ತಿಂಗಳುಗಳಿಗಿಂತ ಹೆಚ್ಚು ಕಾಯಬೇಕಾಗುತ್ತದೆ. ಟೊಯೊಟಾ ರೂಮಿಯಾನ್ ಕಾರನ್ನು ಆಗಸ್ಟ್ ಕೊನೆಯ ವಾರದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿತು. ಈ ಹೊಸ ಟೊಯೊಟಾ ರೂಮಿಯಾನ್ CNG ಕಾರಿನ ಕಾಯುವ ಅವಧಿಯು ಖರೀದಿದಾರರ ಸ್ಥಳವನ್ನು ಅವಲಂಬಿಸಿ 18 ತಿಂಗಳುಗಳು ಅಥವಾ ಒಂದೂವರೆ ವರ್ಷಗಳವರೆಗೆ ಇರುತ್ತದೆ.

ಭಾರೀ ಬೇಡಿಕೆಯಿಂದಾಗಿ, ಸೆಪ್ಟೆಂಬರ್‌ನಲ್ಲಿ ಟೊಯೊಟಾ ರುಮಿಯಾನ್ ಸಿಎನ್‌ಜಿಗಾಗಿ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಟೊಯೊಟಾ ರೂಮಿಯಾನ್ ಎಂಪಿವಿಗೆ ಅಗಾಧ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ ಎಂದು ಹೇಳಿದೆ. ಈ ಅನಿರೀಕ್ಷಿತ ಬೇಡಿಕೆಯು ಲೈನ್-ಅಪ್‌ನಾದ್ಯಂತ ದೀರ್ಘ ವಿತರಣಾ ಸಮಯವನ್ನು ಉಂಟುಮಾಡಿದೆ, ವಿಶೇಷವಾಗಿ ಸಿಎನ್‌ಜಿ ರೂಪಾಂತರಗಳಿಗೆ. ಇದರಿಂದ ತಾತ್ಕಾಲಿಕವಾಗಿ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಟೊಯೊಟಾ ರೂಮಿಯಾನ್ ಎಂಪಿವಿಯು ಹೊಸ ಮುಂಭಾಗದ ಬಂಪರ್ ಮತ್ತು ಗ್ರಿಲ್ ಅನ್ನು ಹೊಂದಿದೆ.

Toyota Rumion

ಈ ವಿನ್ಯಾಸದ ನವೀಕರಣಗಳ ಜೊತೆಗೆ, ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು ಮತ್ತು ಸ್ವಲ್ಪ ನವೀಕರಿಸಿದ ಹಿಂಭಾಗದ ಬಂಪರ್ ಜೊತೆಗೆ ಬರುತ್ತದೆ. ಈ ಹೊಸ ರೂಮಿಯಾನ್ ಕ್ರೋಮ್ ಜೊತೆ ಒಂದು ವಿಶಿಷ್ಟವಾದ ಮುಂಭಾಗದ ಗ್ರಿಲ್ ಅನ್ನು ಪ್ರಿ-ಫೇಸ್‌ಲಿಫ್ಟ್ ಇನೋವಾ ಕ್ರಿಸ್ಟಾದಿಂದ ಸ್ಫೂರ್ತಿಯನ್ನು ಪಡೆಯುತ್ತದೆ. ಹೊಸದಾಗಿ ಬಿಡುಗಡೆಯಾದ ಟೊಯೊಟಾ ರೂಮಿಯಾನ್ ಎಂಪಿವಿಯು 6 ರೂಪಾಂತರಗಳಲ್ಲಿ ಲಭ್ಯವಿದೆ.

ಈ ಎಂಪಿವಿಯು S, G, ಮತ್ತು V ಎಂಬ 3 ಟ್ರಿಮ್ ಹಂತಗಳನ್ನು ಒಳಗೊಂಡಿದೆ. ಇದರಲ್ಲಿ 'V' ಟಾಪ್-ಸ್ಪೆಕ್ ಟ್ರಿಮ್ ಆದರೆ 'S' ರೂಪಾಂತರವು ಮೂಲ ಮಾದರಿಯಾಗಿದೆ. ಇದಲ್ಲದೆ, ಟೊಯೊಟಾ ಸಿಎನ್‌ಜಿ ರೂಪಾಂತರವನ್ನು ಎಸ್ ಟ್ರಿಮ್ ಮಟ್ಟದಲ್ಲಿ ನೀಡುತ್ತದೆ. ಟೊಯೊಟಾ ರೂಮಿಯಾನ್ ಎಂಪಿವಿಯ ಆಟೋಮ್ಯಾಟಿಕ್ ರೂಪಾಂತರಗಳನ್ನು S ಮತ್ತು V ಎಂಬ ಎರಡು ಟ್ರಿಮ್ ಹಂತಗಳಲ್ಲಿ ನೀಡಲಾಗುತ್ತದೆ.

Toyota Rumion

ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಹೆಚ್ಚು ಫ್ಯಾಮಿಲಿ ಕಾರನ್ನು ಖರೀದಿಸಲು ಬಯಸುವ ಗ್ರಾಹಕರನ್ನು ಸೆಳೆಯುತ್ತದೆ. ಅಲ್ಲದೇ ಹೆಚ್ಚು ಸಿಟಿಗಳಲ್ಲಿ ದೈನಿಂದಿನ ಬಳಕೆ ಮಾಡಲು ಬಯಸುವ ಗ್ರಾಹಕರನ್ನು ಕೂಡ ಸೆಳೆಯುತ್ತದೆ. ಈ ಟೊಯೊಟಾ ರುಮಿಯಾನ್ ಎಂಪಿವಿಯಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರೆಡ್ ಪೆಟ್ರೋಲ್ ಎಂಜಿನ್ ಮಾರುತಿ ಸುಜುಕಿ ಎರ್ಟಿಗಾದಂತೆಯೇ ಇದೆ. ಈ ಎಂಜಿನ್ 102 bhp ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದು. ಇನ್ನು ಟೊಯೊಟಾ ರುಮಿಯಾನ್ ಎಂಪಿವಿ CNG ಮೋಡ್‌ನಲ್ಲಿರುವ ಡ್ಯುಯಲ್-ಫ್ಯೂಯಲ್ ಪವರ್‌ಟ್ರೇನ್ 87 bhp ಮತ್ತು 121 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಪ್ರತ್ಯೇಕವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಅಲ್ಲದೆ, ರೂಮಿಯಾನ್ ಸಿಎನ್‌ಜಿಯು 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಟೊಯೊಟಾ ಹೇಳಿಕೊಂಡಿದೆ.

ಟೊಯೊಟಾ ರುಮಿಯಾನ್ ಎಂಪಿವಿಯು ಮಾರುತಿ ಸುಜುಕಿ ಎರ್ಟಿಗಾದಂತೆಯೇ ಸಜ್ಜುಗೊಂಡಿದೆ. ಈ ಹೊಸ ಎಂಪಿವಿಯಲ್ಲಿ ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ AppleCarPlay ಮತ್ತು Android Auto, 6 ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಚ್ಚಿನವುಗಳನ್ನು ಕೆಲವು ಅತ್ಯುತ್ತಮ ಫೀಚರ್ಸ್ ಗಳನ್ನು ಹೊಂದಿವೆ.

Article Published On: Tuesday, November 7, 2023, 13:57 [IST]
English summary
New toyota rumion mpv waiting period details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+