ಎರ್ಟಿಗಾದ ರಿಬ್ಯಾಡ್ಜ್ ಟೊಯೊಟಾ ರೂಮಿಯಾನ್ ಹೆಚ್ಚು ಮೈಲೇಜ್, ಅಗ್ಗದ ಬೆಲೆಯಲ್ಲಿ ಬಿಡುಗಡೆಗೆ ಸಜ್ಜು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ ಈ ಹೊಸ ಟೊಯೊಟಾ ಎಂಪಿವಿಗೆ ರೂಮಿಯಾನ್ (Rumion) ಎಂಬ ಹೆಸರನ್ನು ನೀಡಲಾಗಿದೆ. ಇದು ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯ ರಿಬ್ಯಾಡ್ಜ್ ಆವೃತ್ತಿ ಇದಾಗಿದೆ.

ಇದೀಗ ಟೊಯೊಟಾ ಕಂಪನಿಯು ಹೊಸ ರೂಮಿಯಾನ್ ಕಾರಿನ ದೃಶ್ಯ ಜಾಹೀರಾತು ಆದ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಟಿವಿಸಿಯಲ್ಲಿ ಎಲ್ಲಾ ಪ್ರೀಮಿಯಂ ಫೀಚರ್ಸ್ ಗಳನ್ನು ಪ್ರದರ್ಶಿಸುತ್ತದೆ. ಈ ಜಾಹಿರಾತಿನ ವೀಡಿಯೊದಲ್ಲಿ ಸ್ಪಂಕಿ ಬ್ಲೂ ಬಣ್ಣದ ರೂಮಿಯಾನ್ ಕಾರಿನ ಮುಂಭಾಗ, ಸೈಡ್ ಪ್ರೊಫೈಲ್ ಮತ್ತು ಹಿಂಭಾಗದ ಆಕರ್ಷಕ ವಿನ್ಯಾಸವನ್ನು ಪ್ರದರ್ಶಿಸುತ್ತದೆ. ಹೊಸ ರೂಮಿಯಾನ್ ಕ್ರೋಮ್ ಜೊತೆ ಒಂದು ವಿಶಿಷ್ಟವಾದ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ, ಇದು ಪ್ರಿ-ಫೇಸ್‌ಲಿಫ್ಟ್ ಇನ್ನೋವಾ ಕ್ರಿಸ್ಟಾದಿಂದ ಸ್ಫೂರ್ತಿಯನ್ನು ಪಡೆಯುತ್ತದೆ.

Toyota Rumion

ಈ ಜಾಹಿರಾತಿನಲ್ಲಿ ಶಾಲೆ ಮಕ್ಕಳು, ಗೆಳೆಯ ಬಳಗ ಮತು ಫ್ಯಾಮಿಲಿಯು ಪ್ರಯಾಣ ಮಾಡುವುದನ್ನು ತೋರಿಸುತ್ತದೆ. ಈ ಮೂಲಕ ಇದೊಂದು ಆಲ್ ರೌಂಡರ್ ಕಾರ್ ಎಂದು ತೋರಿಸಿದ್ದಾರೆ. ಆಸಕ್ತಿದಾಯಕ ಸಂಗತಿಯೆಂದರೆ ಟೊಯೊಟಾ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ರೂಮಿಯಾನ್ ಅನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿ

ಸದ್ಯಕ್ಕೆ ಈ ಹೊಸ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯ ಬೆಲೆ ಮತ್ತು ಬುಕಿಂಗ್ ಮೊತ್ತವನ್ನು ಘೋಷಿಸಲಾಗಿಲ್ಲ. ಟೊಯೊಟಾ ಆಗಿರುವುದರಿಂದ, ರೂಮಿಯಾನ್ 3 ವರ್ಷಗಳು/1,00,000 ಕಿಮೀ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಬರಲಿದೆ. ಈ ಟೊಯೊಟಾ ರೂಮಿಯಾನ್ ಕಾರು S, G, ಮತ್ತು V ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಪ್ರತಿಯೊಂದು ರೂಪಾಂತರವು ತನ್ನದೇ ಆದ ಫೀಚರ್ಸ್ ಮತ್ತು ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಇವುಗಳ ಬಗ್ಗೆ ಮಾಹಿತಿ ಇಲ್ಲಿದೆ.

Toyota Rumion

ಈ ಟೊಯೊಟಾ ರೂಮಿಯಾನ್ ಕಾರಿನಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡೂ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ. ಇದರ 1.5-ಲೀಟರ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ಆಸ್ಪರೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 rpm ನಲ್ಲಿ 101 bhp ಪವರ್ ಮತ್ತು 4,400 rpm ನಲ್ಲಿ 136.8 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

CNG ಯಲ್ಲಿ ಚಾಲನೆಯಲ್ಲಿರುವಾಗ, ಈ ಎಂಜಿನ್ 5,500 rpm ನಲ್ಲಿ 86.63 bhp ಪವರ್ ಮತ್ತು 121.5 Nm ಅನ್ನು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಪವರ್‌ಟ್ರೇನ್‌ಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ. ಪೆಟ್ರೋಲ್ ಎಂಜಿನ್ 6-ಸ್ಪೀಡ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ಸಹ ಪಡೆಯುತ್ತದೆ. ಇದರ ಪೆಟ್ರೋಲ್ ಆವೃತ್ತಿಯು 20.51 ಕಿ.ಮೀ ಮೈಲೇಜ್ ಅನ್ನು ನೀಡಿದರೆ, CNG ಆವೃತ್ತಿಯು 26.11 ಕಿ.ಮೀ ಮೈಲೇಜ್ ನೀಡುತ್ತದೆ.

Toyota Rumion

ಎಸ್ ರೂಪಾಂತ್ರರ: ಟೊಯೊಟಾ ರೂಮಿಯಾನ್ ಎಸ್ ರೂಪಾಂತರದಲ್ಲಿ 1.5 ಲೀಟರ್ ಪೆಟ್ರೋಲ್/CNG ಎಂಜಿನ್ ಅನ್ನು ಹೊಂದಿದೆ. ಈ ರೂಪಾಂತರದಲ್ಲಿ ಸುರಕ್ಷತೆಗಾಗಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು (ಎರಡನೇ ಸಾಲಿಗೆ), ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.

ಎಸ್ ರೂಪಾಂತರದಲ್ಲಿ ಡ್ಯುಯಲ್-ಟೋನ್ ಇಂಟೀರಿಯರ್, ಎಲ್ಲಾ ಮೂರು ಸಾಲುಗಳಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್, ಎರಡನೇ ಸಾಲಿನ ಸೆಂಟರ್ ಆರ್ಮ್‌ರೆಸ್ಟ್, ರೂಫ್-ಮೌಂಟೆಡ್, ಗೇರ್ ಶಿಫ್ಟ್ ಸೂಚಕ (ಮ್ಯಾನ್ಯುಯಲ್ ಮಾತ್ರ), ಮ್ಯಾನ್ಯುವಲ್ ಎಸಿ, ಹೆಡ್‌ಲ್ಯಾಂಪ್, ಕೂಲ್ಡ್ ಕಪ್‌ಹೋಲ್ಡರ್‌ಗಳು, ರಿಮೋಟ್ ಕೀಲೆಸ್ ಎಂಟ್ರಿ, ಎಲ್ಲಾ ಪವರ್ ವಿಂಡೋಗಳು, ಮೊದಲ ಮತ್ತು ಎರಡನೇ ಸಾಲಿನಲ್ಲಿ 12V ಪವರ್ ಸಾಕೆಟ್‌ಗಳು, ಪವರ್ ಮತ್ತು ಟಿಲ್ಟ್ ಸ್ಟೀರಿಂಗ್, ಡ್ರೈವರ್ ವಿಂಡೋ ಆಟೋ ಅಪ್/ಡೌನ್ ಒಳಗೊಂಡಿದೆ.

ರೂಮಿಯನ್ ಜಿ : ಈ ರೂಪಾಂತರದಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್, ಟೊಯೊಟಾ ಕನೆಕ್ಟಿವಿಟಿ ಕಾರ್ ಟೆಕ್, ಡ್ಯುಯಲ್-ಟೋನ್ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ ಮತ್ತು ಎಂಜಿನ್ ಪುಶ್ ಸ್ಟಾರ್ಟ್/ಸ್ಟಾಪ್ ಅನ್ನು ಹೊಂದಿದೆ. ಈ ರೂಪಾಂತರದಲ್ಲಿ 15-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ರೂಮಿಯನ್ ವಿ ರೂಪಾಂತರದಲ್ಲಿ 1.5 ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಕೀ-ಚಾಲಿತ ಹಿಂತೆಗೆದುಕೊಳ್ಳುವ ವಿಂಗ್ ಮಿರರ್‌ಗಳು, ಲೆದರ್ ಸುತ್ತುವರೆದ ಸ್ಟೀಯರಿಂಗ್ ವ್ಹೀಲ್ ಮತ್ತು ಆಟೋ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ.

Article Published On: Friday, August 25, 2023, 11:27 [IST]
English summary
New toyota rumion tvc out before official launch details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+