ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಹೊಸ ಕಾರು ಅನಾವರಣಗೊಳಿಸಿದ ಟೂಯೊಟಾ: ಹ್ಯುಂಡೈ ಕ್ರೆಟಾಗೆ ಆತಂಕ!
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಯಾರಿಸ್ ಕ್ರಾಸ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಈ ಎಸ್‍ಯುವಿಯು ಅರ್ಬನ್ ಕ್ರೂಸರ್ ಐಕಾನ್ ಅನ್ನು ಆಧರಿಸಿದೆ. ಹೊಸ ಟೊಯೊಟಾ ಯಾರಿಸ್ ಕ್ರಾಸ್ ಎಸ್‌ಯುವಿ ಮಾದರಿಯು ಜನಪ್ರಿಯ ಹ್ಯುಂಡೈ ಕ್ರೆಟಾ ಎಸ್‍ಯುವಿ ಪೈಪೋಟಿಯಾಗಿ ಬರಲಿದೆ.
ಈ ಹೊಸ ಟೊಯೊಟಾ ಯಾರಿಸ್ ಕ್ರಾಸ್ ಎಸ್‌ಯುವಿಯು ಇಂಡೋನೇಷ್ಯಾದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ, ಟೊಯೊಟಾ ಕಂಪನಿಯು ಇದನ್ನು ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಕ್ರಮೇಣ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿಗಳನ್ನು ಬಹಿರಂಗಪಡಿಸಿದೆ.ಹೊಸ ಟೊಯೊಟಾ ಯಾರಿಸ್ ಕ್ರಾಸ್ ಎಸ್‌ಯುವಿ ಮಾದರಿಯು ಜನಪ್ರಿಯ ಹ್ಯುಂಡೈ ಕ್ರೆಟಾ ಎಸ್‍ಯುವಿ ಪೈಪೋಟಿಯಾಗಿ ಬರಲಿದ್ದು, ಸದ್ಯ ಹ್ಯುಂಡೈ ಕ್ರೆಟಾ ಪ್ರಮುಖವಾಗಿ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿದೆ.

ಯಾರಿಸ್ ಸೆಡಾನ್‌ನೊಂದಿಗೆ ತನ್ನ ಹೆಸರನ್ನು ಹಂಚಿಕೊಳ್ಳುವ ಹೊಸ ಟೊಯೊಟಾ ಯಾರಿಸ್ ಕ್ರಾಸ್ ಮಸ್ಕಲರ್ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ವಾಹನ ತಯಾರಕರ ಮಾಡ್ಯುಲರ್ ಡಿಎನ್‌ಜಿಎ ಆರ್ಕಿಟೆಕ್ಚರ್‌ನಿಂದ ಆಧಾರವಾಗಿದೆ, ಇದು ತಂತ್ರಜ್ಞಾನ-ಹೊತ್ತ ಟೊಯೋಟಾ ಟಿಎನ್‌ಜಿಎ ಪ್ಲಾಟ್‌ಫಾರ್ಮ್‌ನ ಅಗ್ಗದ ಉತ್ಪನ್ನವಾಗಿದೆ. ಇನ್ನು ಈ ಯಾರಿಸ್ ಕ್ರಾಸ್ ತನ್ನ ಫ್ಲಾಟ್ ಫಾರ್ಮ್ Avanza ಎಂಪಿವಿ, ಯಾರಿಸ್ ಸೆಡಾನ್ ಮತ್ತು Raiz ಎಸ್‍ಯುವಿ ನಂತಹ ಇತರ ಮಾದರಿಗಳೊಂದಿಗೆ ಹಂಚಿಕೊಳ್ಳುತ್ತದೆ.
ಅಲ್ಲದೆ, ಏಷ್ಯಾದ ಮಾರುಕಟ್ಟೆಗಳಿಗೆ ಹೊಸದಾಗಿ ಪರಿಚಯಿಸಲಾದ ಎಸ್‌ಯುವಿ ಯುರೋಪ್ ದೇಶಗಳಲ್ಲಿ ಮಾರಾಟವಾಗುವ ಯಾರಿಸ್ ಕ್ರಾಸ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಟೊಯೊಟಾ ಯಾರಿಸ್ ಕ್ರಾಸ್ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ನೇರವಾಗಿ ಹುಂಡೈ ಕ್ರೆಟಾಗೆ ಪೈಪೋಟಿ ನೀಡುತ್ತದೆ. ಈ ಹುಂಡೈ ಕ್ರೆಟಾ ಎಸ್‍ಯುವಿಯು 4,310 mm ಉದ್ದವನ್ನು ಹೊಂದಿದೆ. ಇದು ಕ್ರೆಟಾಗಿಂತ ಸ್ವಲ್ಪ ಉದ್ದವಾಗಿದೆ. ಅಲ್ಲದೆ, ಟೊಯೊಟಾ ಎಸ್‍ಯುವಿ 2,620 ಎಂಎಂ ವ್ಹೀಲ್‌ಬೇಸ್‌ನೊಂದಿಗೆ ಬರುತ್ತದೆ, ಇದು ಹ್ಯುಂಡೈ ಕ್ರೆಟಾಕ್ಕಿಂತ 10 ಎಂಎಂ ಉದ್ದವಾಗಿದೆ.

ಹೊಸ ಟೊಯೊಟಾ ಯಾರಿಸ್ ಕ್ರಾಸ್ ಎಸ್‍ಯುವಿ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿ ತಾಜಾ ನೋಟವನ್ನು ಹೊಂದಿದೆ. ಇದು E60 BMW 5-ಸೀರಿಸ್ ನಂತೆಯೇ ವೈಬ್ ಅನ್ನು ನೀಡುವ ನೇರವಾದ ಮುಂಭಾಗದ ಫಾಸಿಕ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಈ ಎಸ್‍ಯುವಿ ಎತ್ತರದ ಬಂಪರ್‌ಗಳನ್ನು ಹೊಂದಿದೆ ಮತ್ತು ಟ್ರೆಪೆಜಾಯ್ಡಲ್ ಫ್ರಂಟ್ ಗ್ರಿಲ್ ಅನ್ನು ಪಡೆಯುತ್ತದೆ. ಈ ಕಾರು ಗ್ಲೋಷಿ ಬ್ಲ್ಯಾಕ್ ಅಕ್ಸೆಂಟ್ ನೊಂದಿಗೆ ಫಾಗ್ ಲ್ಯಾಂಪ್ ಗಳನ್ನು ಹೊಂದಿವೆ.
ಇನ್ನು ಈ ಎಸ್‍ಯುವಿ ಮುಂಭಾಗದ ಪ್ರೊಫೈಲ್‌ನ ಕೆಳಭಾಗದಲ್ಲಿ ದಪ್ಪನಾದ ಸ್ಕೀಡ್ ಪ್ಲೇಟ್ ಅಂದವಾಗಿ ಇರುತ್ತದೆ. ಈ ಹೊಸ ಟೊಯೊಟಾ ಯಾರಿಸ್ ಕ್ರಾಸ್ ಎಸ್‍ಯುವಿಯ ಇತರ ಬಾಹ್ಯ ಶೈಲಿಯ ಅಂಶಗಳು ದೊಡ್ಡ ಸ್ಕ್ವಾರಿಶ್ ವೀಲ್ ಅರ್ಚ್ ಗಳನ್ನು ಒಳಗೊಂಡಿವೆ, ಇದಕ್ಕೆ ವ್ಯತಿರಿಕ್ತ ಬ್ಲ್ಯಾಕ್ ಕ್ಲಾಡಿಂಗ್ ಮತ್ತು ನೇರವಾದ ರೂಫ್ ಅನ್ನು ಹಿಂಭಾಗದಲ್ಲಿ ಸ್ವಲ್ಪಮಟ್ಟಿಗೆ ಮೊಟಕುಗೊಳಿಸಲಾಗಿದೆ, ಇದು ಸ್ಪೋರ್ಟಿ ವೈಬ್ ಅನ್ನು ನೀಡುತ್ತದೆ.
ಇನ್ನು ಈ ಎಸ್‍ಯುವಿ ಹಿಂಭಾಗದಲ್ಲಿ ಅಡ್ಡಲಾಗಿ ಇರಿಸಲಾದ ಟೈಲ್‌ಲೈಟ್‌ಗಳನ್ನು ಹೊಂದಿವೆ. ಈ ಹೊಸ ಟೊಯೊಟಾ ಕ್ಯಾಬಿನ್ ಒಳಗೆ, ಕ್ರಾಸ್ ಡ್ಯುಯಲ್-ಲೇಯರ್ಡ್ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ಕ್ಯಾಬಿನ್‌ನ ಒಳಗಿನ ಪ್ರಮುಖ ಅಂಶವೆಂದರೆ ದೊಡ್ಡ ಮುಕ್ತ-ನಿಂತಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ, ಆದರೆ ಸೆಂಟರ್ ಕನ್ಸೋಲ್ ವಿವಿಧ ಕಾರ್ಯಗಳಿಗಾಗಿ ವಿವಿಧ ಫೆಸಿಕಲ್ ಬಟನ್‌ಗಳು ಮತ್ತು ಡಯಲ್‌ಗಳನ್ನು ಹೊಂದಿದೆ.
ಈ ಟೊಯೊಟಾ ಯಾರಿಸ್ ಕ್ರಾಸ್ ಎಸ್‍ಯುವಿಯು ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಎಂಜಿನ್ ಗಳನ್ನು ಪಡೆಯುತ್ತದೆ. ಈ ಎಸ್‍ಯುವಿಯಲ್ಲಿ 1.5-ಲೀಟರ್ 2NR-VE, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 104 hp ಪವರ್ ಮತ್ತು 138 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಸ್‍ಯುವಿಯ ಪೆಟ್ರೋಲ್-ಹೈಬ್ರಿಡ್ ರೂಪಾಂತರವು 1.5-ಲೀಟರ್ ನ್ಯಾಚುರಲ್ ಆಸ್ಪರರ್ಡ್ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಪೆಟ್ರೋಲ್ ಪವರ್ ಮಿಲ್ 90 hp ಪವರ್ ಮತ್ತು 121 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ಎಲೆಕ್ಟ್ರಿಕ್ ಮೋಟಾರು ಮಾತ್ರ 79 hp ಗರಿಷ್ಠ ಶಕ್ತಿ ಮತ್ತು 141 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯಲ್ಲಿ ಇ-ಸಿವಿಟಿ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.


Click it and Unblock the Notifications