ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಅಂತರಾಷ್ಟ್ರೀಯ ಮಾದರಿ ನಿಸ್ಸಾನ್ ಆರಿಯಾ EV... ಭಾರತಕ್ಕೆ ಬರಲಿದಿಯೇ?

ಭಾರತೀಯ ರಸ್ತೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ನಿಸ್ಸಾನ್ ಆರಿಯಾ ಎಲೆಕ್ಟ್ರಿಕ್ ಕಾರಿನ ಫೋಟೊಗಳು ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ. ಇಲ್ಲಿನ ರಸ್ತೆಗಳಲ್ಲಿ ಟೆಸ್ಟ್ ಮಾಡಲು ನಿಸ್ಸಾನ್ ತನ್ನ ಎಲೆಕ್ಟ್ರಿಕ್ SUV ಅನ್ನು ಭಾರತಕ್ಕೆ ತಂದಿದೆ ಎನ್ನಲಾಗುತ್ತಿದೆ. ಇದು ಭಾರತಕ್ಕೆ ಹೊಸತಾದರೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜುಲೈ 2020 ರಲ್ಲೇ ಜಾಗತಿಕವಾಗಿ ಬಹಿರಂಗಪಡಿಸಲಾಗಿತ್ತು.

ನಿಸ್ಸಾನ್‌ನ ಅತ್ಯಂತ ಯಶಸ್ವಿ ಲೀಫ್ EV ಹ್ಯಾಚ್‌ಬ್ಯಾಕ್‌ಗಿಂತ ಇದು ಟಾಪ್ ಸ್ಪೆಕ್ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಿಸ್ಸಾನ್ ಆರಿಯಾ ಮಾದರಿಗೆ Kia EV6 ಮತ್ತು ಹುಂಡೈ Ioniq 5 ನಂತಹ ಪ್ರೀಮಿಯಂ ಕ್ರಾಸ್ ಓವರ್‌ಗಳು ಪ್ರತಿಸ್ಪರ್ಧಿಗಳಾಗಿವೆ. ಇವೆರಡೂ ಈಗಾಗಲೇ ಭಾರತದಲ್ಲಿ ಮಾರಾಟದಲ್ಲಿದ್ದು, ಮುಂಬರುವ ದಿನಗಳಲ್ಲಿ ಆರಿಯಾ ಇವಿ ಬಿಡುಗಡೆಯಾದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ತೀರ್ವ ಪೈಪೋಟಿ ಎದುರಿಸಲಿದೆ. ಆದರೆ ಈ SUV ಅನ್ನು ಇಲ್ಲಿ ಬಿಡುಗಡೆ ಮಾಡುವ ಕುರಿತು ಕಂಪನಿ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಅಂತರಾಷ್ಟ್ರೀಯ ಮಾದರಿ ನಿಸ್ಸಾನ್ ಆರಿಯಾ EV... ಭಾರತಕ್ಕೆ ಬರಲಿದಿಯೇ?

ನಿಸ್ಸಾನ್ ಆರಿಯಾ EV: ವಿನ್ಯಾಸ, ವೈಶಿಷ್ಟ್ಯಗಳು

2019 ರಲ್ಲಿ ಟೋಕಿಯೊ ಮೋಟಾರ್ ಶೋನಲ್ಲಿ ಮೊದಲು ತೋರಿಸಲಾದ ಅದೇ ಹೆಸರಿನ ಪರಿಕಲ್ಪನೆಯಿಂದ Ariya EV ತನ್ನ ವಿನ್ಯಾಸದ ಸ್ಫೂರ್ತಿಯನ್ನು ಪಡೆದುಕೊಂಡಿದೆ. ಉತ್ಪಾದನಾ ಮಾದರಿಯನ್ನು 2020 ರಲ್ಲಿ ಬಹಿರಂಗಪಡಿಸಲಾಯಿತು, ಈ ಮಾದರಿಯು ರೆನಾಲ್ಟ್-ನಿಸ್ಸಾನ್-ಮಿತ್ಸುಬಿಷಿಯ CMF-EV ಎಲೆಕ್ಟ್ರಿಕ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ನಿಸ್ಸಾನ್ ಆರಿಯಾ ತನ್ನೇ ಆದ ಹೊಸ 'ವಿನ್ಯಾಸ' ಶೈಲಿಯನ್ನು ಹೊಂದುವ ಮೂಲಕ ಬ್ರಾಂಡ್‌ನ ಇತರ ಮಾದರಿಗಳಿಗಿಂತ ಭಿನ್ನವಾಗಿದೆ.

ವಿನ್ಯಾಸ ಕುರಿತು ಮಾತನಾಡುವುದಾದರೆ, ಪ್ರಕಾಶಿತ ನಿಸ್ಸಾನ್ ಲೋಗೋವನ್ನು ಕಾರಿನ ಮುಂಭಾಗದಲ್ಲಿ ತುಂಭಾ ಆಕರ್ಷಿತವಾಗಿ ನೀಡಲಾಗಿದೆ. ಹಿಂಭಾಗವನ್ನು ಸಂಪರ್ಕಿಸುವ ಪ್ರಮುಖ ಶೋಲ್ಡರ್ ಲೈನ್‌ನೊಂದಿಗೆ ಒಂದು ವಿಶಿಷ್ಟವಾದ ಕೂಪ್ ತರಹದ ವಿನ್ಯಾಸವನ್ನು ನೀಡಲಾಗಿದೆ. ಈ ಎಲೆಕ್ಟ್ರಿಕ್ SUV 19- ಇಂಚಿನ ಅಥವಾ 20- ಇಂಚಿನ ಚಕ್ರಗಳನ್ನು ಪಡೆದಿದ್ದು ಉತ್ತಮ ರಸ್ತೆಯ ಉಪಸ್ಥಿತಿಯನ್ನು ನೀಡುತ್ತದೆ. ಒಳಭಾಗದಲ್ಲಿ, ನಿಸ್ಸಾನ್ ಡ್ಯಾಶ್‌ಬೋರ್ಡ್‌ನಲ್ಲಿ ದೊಡ್ಡ 12.3-ಇಂಚಿನ ಸ್ಕ್ರೀನ್‌ನೊಂದಿಗೆ ಕ್ಲೀನ್ ನೋಟವನ್ನು ಹೊಂದಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಅಂತರಾಷ್ಟ್ರೀಯ ಮಾದರಿ ನಿಸ್ಸಾನ್ ಆರಿಯಾ EV... ಭಾರತಕ್ಕೆ ಬರಲಿದಿಯೇ?

ನಿಸ್ಸಾನ್ ಹೆಚ್ಚಿನ ಹಾರ್ಡ್ ಬಟನ್‌ಗಳನ್ನು ತೆಗೆದುಹಾಕಿ ಅವುಗಳ ಬದಲಾಗಿ ಹ್ಯಾಪ್ಟಿಕ್ ನಿಯಂತ್ರಣಗಳೊಂದಿಗೆ ಬದಲಾಯಿಸಿದೆ. ಎದ್ದುಕಾಣುವ ವೈಶಿಷ್ಟ್ಯಗಳಲ್ಲಿ ಬೋಸ್‌ನ ಪ್ರೀಮಿಯಂ ಸೌಂಡ್ ಸಿಸ್ಟಮ್ ಮತ್ತು ದೊಡ್ಡ ಹೆಡ್-ಅಪ್ ಡಿಸ್ಪ್ಲೇ ಸೇರಿವೆ. ಇದು ನಿಸ್ಸಾನ್‌ನ ಪ್ರೊಪೈಲಟ್ ಸಿಸ್ಟಮ್‌ನ ವರ್ಧಿತ ಆವೃತ್ತಿಯನ್ನು ಒಳಗೊಂಡಂತೆ ಸುಧಾರಿತ ಡ್ರೈವರ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಪಡೆದಿದೆ. Ariya ಯುರೋ NCAP ನಿಂದ ಪೂರ್ಣ 5 ಸ್ಟಾರ್ ಕ್ರ್ಯಾಶ್-ಟೆಸ್ಟ್ ರೇಟಿಂಗ್ ಅನ್ ಪಡೆದುಕೊಂಡಿದೆ.

ನಿಸ್ಸಾನ್ ಆರಿಯಾ 529 ಕಿ.ಮೀ ರೇಂಜ್
ನಿಸ್ಸಾನ್ ಆರಿಯಾವನ್ನು ಸಿಂಗಲ್-ಮೋಟರ್, ಹಿಂಬದಿ-ಚಕ್ರ-ಡ್ರೈವ್ ಮತ್ತು ಟ್ವಿನ್-ಮೋಟರ್, ಫೋರ್-ವೀಲ್-ಡ್ರೈವ್ ಪವರ್‌ಟ್ರೇನ್‌ಗಳು ಮತ್ತು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. 63kWh, 87kWh ನ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು, ಇದರಲ್ಲಿ 63kWh ಬ್ಯಾಟರಿ 217hp ಪವರ್ ಮತ್ತು 300Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಜೊತೆಗೆ ಸಿಂಗಲ್ ಚಾರ್ಜ್‌ನಲ್ಲಿ 402km ರೇಂಜ್ ನೀಡುತ್ತದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಅಂತರಾಷ್ಟ್ರೀಯ ಮಾದರಿ ನಿಸ್ಸಾನ್ ಆರಿಯಾ EV... ಭಾರತಕ್ಕೆ ಬರಲಿದಿಯೇ?

ಇನ್ನು ಇದರ 87kWh ಮಾಡೆಲ್ 242hp ಪವರ್ ಮತ್ತು 300Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ 529km ವರೆಗೆ ಕ್ಲೈಮ್ ಮಾಡಲಾದ ಶ್ರೇಣಿಯನ್ನು ಹೊಂದಿದೆ. ಟಾಪ್-ಸ್ಪೆಕ್ 87kWh ಆರಿಯಾವು 306hp ಮತ್ತು 600Nm ಟಾರ್ಕ್ ಅನ್ನು ನೀಡುತ್ತದೆ. ಇದು 513km ವರೆಗೆ ರೇಂಜ್ ಅನ್ನು ನೀಡುತ್ತದೆ. ನಿಸ್ಸಾನ್ ಹಲವಾರು ಹೊಸ SUV ಗಳು ಮತ್ತು EV ಗಳನ್ನು ಭಾರತೀಯ ಮಾರುಕಟ್ಟೆಗೆ ಯೋಜಿಸಿದೆಯಾದರೂ, Ariya EV ಅದರ ಮುಂಬರುವ ಬಿಡುಗಡೆಗಳಲ್ಲಿ ಒಂದಾಗಿದೆ ಎಂದು ದೃಢೀಕರಿಸಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Source: https://www.instagram.com/vrokade_/

More from DriveSpark

Article Published On: Tuesday, February 21, 2023, 15:55 [IST]
English summary
International model nissan aria ev seen during testing will it come to india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+