ಭಾರತದಲ್ಲಿ 3 ತಿಂಗಳಿನಿಂದ ಕೇವಲ 1 ಕಾರು ಮಾರಾಟವಾಗಿಲ್ಲ: ಪ್ರಮುಖ ಕಂಪನಿಯಿಂದ ಮಹತ್ವದ ತೀರ್ಮಾನ

ಪ್ರಪಂಚದಲ್ಲಿಯೇ ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಹಲವು ಕಂಪನಿ ಕಾರುಗಳು ಯಶಸ್ವಿಯಾಗಿ ಮಾರಾಟವಾದರೆ, ಕೆಲವು ಕಂಪನಿಗಳಿಗೆ ಆಯ್ದ ಮಾದರಿಯ ಒಂದೇ ಒಂದು ಕಾರನ್ನು ಸೇಲ್ ಮಾಡಲು ಸಾಧ್ಯವಾಗುವುದಿಲ್ಲ. ಇದೀಗ, ಜಪಾನಿನ ಪ್ರಮುಖ ವಾಹನ ತಯಾರಕ ಕಂಪನಿ 'ನಿಸ್ಸಾನ್'ನ ಕಿಕ್ಸ್ ಮಾದರಿ ಬುಕಿಂಗ್‌ನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ.

ಕೊರೋನಾ ಸೋಂಕಿನ ಬಳಿಕ, ಚೇತರಿಸಿಕೊಂಡ ದೇಶದ ಆಟೋಮೊಬೈಲ್ ಉದ್ಯಮವು 2022ರಲ್ಲಿ ಮತ್ತೊಂದು ಎತ್ತರಕ್ಕೆ ಸಾಗಿತು. ಭಾರೀ ಸಂಖ್ಯೆಯಲ್ಲಿ ವಿವಿಧ ಕಂಪನಿಯ ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಕಾರುಗಳು ಮಾರಾಟವಾದವು. ಆದರೆ, ನಿಸ್ಸಾನ್ ಕಂಪನಿಯ ಬಹುನಿರೀಕ್ಷಿತ ಕಾರು, 'ಕಿಕ್ಸ್' ಅದೇಕೋ ಭಾರತದ ಗ್ರಾಹಕರನ್ನು ಸೆಳೆಯಲು ವಿಫಲವಾಯಿತು. ಇದನ್ನು 2019ರ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. 2020ರಲ್ಲಿ BS6 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಎಂಜಿನ್ ನವೀಕರಿಸಲಾಗಿತ್ತು.

ಭಾರತದಲ್ಲಿ 3 ತಿಂಗಳಿನಿಂದ ಒಂದೇ ಒಂದು ಕಾರು ಮಾರಾಟವಾಗಿಲ್ಲ: ಪ್ರಮುಖ ಕಂಪನಿಯಿಂದ ಮಹತ್ವದ ತೀರ್ಮಾನ

ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, 2022ರ ನವೆಂಬರ್ ತಿಂಗಳಲ್ಲಿ 'ನಿಸ್ಸಾನ್' ಕಿಕ್ಸ್ ಎಸ್‌ಯುವಿಯ ಕೇವಲ ಮೂರು ಯುನಿಟ್ ಮಾರಾಟ ಮಾಡಿದೆ. ಆ ಬಳಿಕ, ಡಿಸೆಂಬರ್ ನಿಂದ 2023 ಫೆಬ್ರವರಿವರೆಗೆ ಒಂದೇ ಒಂದು ಯುನಿಟ್ ಸೇಲ್ ಮಾಡಲು ಸಾಧ್ಯವಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಕಿಕ್ಸ್ ಕಾರಿಗಾಗಿ ಆನ್‌ಲೈನ್ ಅಥವಾ ಡೀಲರ್‌ಶಿಪ್ ಮೂಲಕ ಬುಕಿಂಗ್ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ಕಳೆದ ನವೆಂಬರ್ ಬಳಿಕ ಕಿಕ್ಸ್‌ನ ಒಂದೇ ಒಂದು ಯುನಿಟ್ ಭಾರತಕ್ಕೆ ಆಮದಾಗಿಲ್ಲ. ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಮಾತ್ರ ಬುಕಿಂಗ್ ಮಾಡಲು ಗ್ರಾಹಕರಿಗೆ ಅವಕಾಶವಿದೆ. ಕಿಕ್ಸ್ ಎಸ್‌ಯುವಿಯನ್ನು ಸಂಪೂರ್ಣ ಮಾರಾಟದಿಂದಲೇ ಸ್ಥಗಿತಗೊಳಿಸಬಹುದು ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಕಿಕ್ಸ್ ಕಾರನ್ನು BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸುತ್ತಿರುವ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡದಿರುವುದರಿಂದ ಇದು ನಿಜವಾಗಬಹುದು.

ಭಾರತದ ಮಾರುಕಟ್ಟೆಯಲ್ಲಿ ನಿಸ್ಸಾನ್ ಕಿಕ್ಸ್, ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಎಕ್ಸ್ಎಲ್, ಎಕ್ಸ್‌ವಿ ಹಾಗೂ ಎಕ್ಸ್‌ವಿ ಪ್ರೀಮಿಯಂ. ರೂ.9.50 ಲಕ್ಷದಿಂದ ರೂ.14.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಸಿಗಲಿದೆ. 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 106 PS ಪವರ್, 142 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಪಡೆದಿದೆ.

ಮತ್ತೊಂದು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 156 PS ಪವರ್ ಹಾಗೂ 254 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನ್ಯುವಲ್ ಅಥವಾ CVT ಟ್ರಾಸ್ಮಿಷನ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಜೊತೆಗೆ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಅವುಗಳೆಂದರೆ, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಕ್ಲೈಮೇಟ್ ಕಂಟ್ರೋಲ್, 8-ಇಂಚಿನ ಟಚ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಹೊಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಕಂಪನಿಗೆ ಮ್ಯಾಗ್ನೈಟ್ ಕಾರುಗಳಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗಿದೆ. ಆದರೆ, ಸಾಕಷ್ಟು ನವೀನ ವೈಶಿಷ್ಟ್ಯ ಹಾಗೂ ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆ ಹೊಂದಿದ್ದರೂ ಕಿಕ್ಸ್ ಎಸ್‌ಯುವಿ ವಿಫಲವಾಗಿದೆ. ಇದೀಗ ವಾಹನ ಮಾರುಕಟ್ಟೆಯಿಂದಲೇ ದೂರವಾಗುವ ಪರಿಸ್ಥಿತಿಗೆ ಬಂದಿದೆ. ಆದರೆ, ಮ್ಯಾಗ್ನೈಟ್ ರೂ. 6 ರಿಂದ 10.94 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಉತ್ತಮವಾಗಿಯೇ ಪ್ರಗತಿ ಸಾಧಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, March 17, 2023, 12:00 [IST]
English summary
Nissan kicks bookings put hold in inidia details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+