Nissan Magnite EZ-Shift: ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರಿವ್ಯೂ ವಿಡಿಯೋ.. ನೋಡೋಣ

ನಿಸ್ಸಾನ್ (Nissan) ಕಂಪನಿಯು ಮ್ಯಾಗ್ನೈಟ್ (Magnite) ಕಾಂಪ್ಯಾಕ್ಟ್ ಎಸ್‌ಯುವಿಯ ಇಝಡ್-ಶಿಫ್ಟ್ (EZ-Shift) ರೂಪಾಂತರವನ್ನು ಎಎಂಟಿ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಸಿದ್ದಪಡಿಸಿ, ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ನಮ್ಮ ತಂಡಕ್ಕೆ ಚೆನ್ನೈನಲ್ಲಿ ಈ ಕಾರಿನ ಟೆಸ್ಟ್ ಡ್ರೈವ್ ನಡೆಸಲು ಅವಕಾಶ ದೊರೆಯಿತು. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ.

ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರದಲ್ಲಿ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಬಳಕೆ ಮಾಡಲಾಗಿದ್ದು, 71 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಆಟೋಮೇಟೆಡ್ ಮ್ಯಾನುವಲ್ (ಎಎಂಟಿ) ಗೇರ್‌ಬಾಕ್ಸ್‌ ಹೊಂದಿದ್ದು, ಫ್ರಂಟ್ ವೀಲ್ ಗಳಿಗೆ ಪವರ್ ವರ್ಗಾಯಿಸುತ್ತದೆ.

ಈ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅದು ಬಹುತೇಕ ಹಿಂದಿನ ಮಾದರಿಗೆ ಹೋಲಿಕೆಯಾಗುತ್ತದೆ. ಮುಖ್ಯವಾಗಿ ಆಕರ್ಷಕ ಎಲ್ಇಡಿ ಹೆಡ್‌ಲೈಟ್‌, ಎಲ್ - ಆಕಾರದ ಡಿಆರ್‌ಎಲ್‌, ಅತ್ಯಾಧುನಿಕ ಗ್ರಿಲ್, ಎಲ್ಇಡಿ ಫಾಗ್ ಲೈಟ್‌, ನೂತನ ಅಲಾಯ್ ವೀಲ್ಸ್ ಹೊಂದಿದೆ. ಇದರೊಟ್ಟಿಗೆ, ಹಿಂಭಾಗದಲ್ಲಿ ಇಝಡ್ - ಶಿಫ್ಟ್ (EZ-Shift) ಬ್ಯಾಡ್ಜ್ ಪಡೆದಿದೆ.

ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಪಡೆದುಕೊಂಡಿರುವ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ, ಈ ಕಾರು, 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟ್ದ್ ಕಾರ್ ಟೆಕ್, ಮಲ್ಟಿ - ಫಂಕ್ಷನಲ್ ಸ್ಟೀರಿಂಗ್ ವೀಲ್, 7 - ಇಂಚಿನ TFT ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಕ್ಲೈಮೇಟ್ ಕಂಟ್ರೋಲ್, 360 - ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

Nissan Magnite EZ-Shift: ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರಿವ್ಯೂ ವಿಡಿಯೋ.. ನೋಡೋಣ

ಸುರಕ್ಷತೆಯ ದೃಷ್ಟಿಯಿಂದಲ್ಲೂ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರ ಅತ್ಯುತ್ತಮವಾಗಿದ್ದು, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ABS (ಆಂಟಿಲಾಕ್ ಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್, ಡ್ಯುಯಲ್ ಏರ್‌ಬ್ಯಾಗ್‌, ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟ್ರಾಕ್ಷನ್ ಕಂಟ್ರೋಲ್, ಸ್ಪೀಡ್ ಅಲರ್ಟ್ ಹಾಗೂ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, October 9, 2023, 10:53 [IST]
English summary
Nissan magnite ez shift suv review video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+