1 ಕಿಲೋಮೀಟರ್‌ಗೆ 35 ಪೈಸೆಯಷ್ಟೇ ಖರ್ಚು: ಗೇಮ್ ಚೇಂಜರ್ ನಿಸ್ಸಾನ್ ಮ್ಯಾಗ್ನೈಟ್ Geza ಎಡಿಷನ್ ಬಿಡುಗಡೆ
ಜಪಾನ್ ಕಾರು ತಯಾರಕ ಕಂಪನಿ ನಿಸ್ಸಾನ್ (Nissan) ಭಾರತದ ಮಾರುಕಟ್ಟೆಯಲ್ಲಿ ತನ್ನ ಗೇಮ್ ಚೇಂಜರ್ ಎಸ್‌ಯುವಿ ಮ್ಯಾಗ್ನೈಟ್ (Magnite) ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿ, ಜನಪ್ರಿಯತೆ ಗಳಿಸಿದೆ. ಇದೀಗ, ಹೊಸ ಸೇರ್ಪಡೆಯಾಗಿ ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಸ್ಪೆಷಲ್ ಎಡಿಷನ್ (Nissan Magnite Geza Edition) ಬಿಡುಗಡೆಗೊಂಡಿದೆ.
ನೂತನ ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಎಡಿಷನ್ ಬೆಲೆ ಬಗ್ಗೆ ಮಾತನಾಡುವುದಾದರೆ, ಈ ಕಾರು, ರೂ.7.39 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಿದೆ. ಆಸಕ್ತ ಗ್ರಾಹಕರು, ರೂ.11,000 ಪಾವತಿಸುವ ಮೂಲಕ ಈ ಎಸ್‌ಯುವಿಯನ್ನು ಬುಕಿಂಗ್ ಮಾಡಬಹುದು. ಗೆಜಾ ಎಡಿಷನ್ ವಿಶೇಷವಾಗಿ ಒಂದೇ ಎಂಜಿನ್ ಹಾಗೂ ಐದು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.

ಹೊಸ ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಎಡಿಷನ್ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದು ದೇಶಾದ್ಯಂತ ಕಳೆದ ಏಪ್ರಿಲ್ 1ರಿಂದ ಜಾರಿಯಾದ BS6 ಹಂತ 2ರ ಮಾನದಂಡಗಳ ಅನ್ವಯ 1.0 ಲೀಟರ್ 3 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 71 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.
ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಎಡಿಷನ್ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಶಾರ್ಕ್ ಫಿನ್ ಆಂಟೆನಾ, ಆಪ್ ಆಧಾರಿತವಾಗಿ ನಿಯಂತ್ರಣ ಮಾಡಬಹುದಾದಂತಹ ಆಂಬಿಯೆಂಟ್ ಲೈಟಿಂಗ್, ಪ್ರೀಮಿಯಂ JBL ಸ್ಪೀಕರ್ಸ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಎಡಿಷನ್ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPಯಿಂದ 4 ಸ್ಟಾರ್ ರೇಟಿಂಗ್ ಪಡೆದಿದ್ದು, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), HSA (ಹಿಲ್ ಸ್ಟಾರ್ಟ್ ಅಸಿಸ್ಟ್) ಹಾಗೂ TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಈ ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಎಡಿಷನ್ ಕಡಿಮೆ ನಿರ್ವಹಣಾ ವೆಚ್ಚವನ್ನು (maintenance cost) ಹೊಂದಿದೆ. ಕಿಲೋಮೀಟರ್ ಗೆ ಕೇವಲ 35 ಪೈಸೆ ಖರ್ಚಾಗುತ್ತದೆ. (50,000 ಕಿಮೀ). ಜೊತೆಗೆ ಈ ಕಾರು, ಎರಡು ವರ್ಷ ಅಥವಾ 50,000 ಕಿಲೋಮೀಟರ್ ತನಕ ವಾರಂಟಿಯನ್ನು ಹೊಂದಿದೆ. ಅದನ್ನು ಬೇಕಾದರೆ, ಒಂದಷ್ಟು ಹಣ ವ್ಯಯಿಸಿ, ಐದು ವರ್ಷ/ ಒಂದು ಲಕ್ಷ ಕಿಲೋಮೀಟರ್ ತನಕ ಗ್ರಾಹಕರು ವಿಸ್ತರಿಸಿಕೊಳ್ಳಬಹುದು.
ಹೊಚ್ಚ ಹೊಸ ಗೆಜಾ ಎಡಿಷನ್ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಬ್ಲೇಡ್ ಸಿಲ್ವರ್, ಫ್ಲೇರ್ ಗಾರ್ನೆಟ್ ರೆಡ್, ಸ್ಟ್ರೋಮ್ ವೈಟ್, ಸ್ಯಾಂಡ್‌ಸ್ಟೋನ್ ಬ್ರೌನ್ ಹಾಗೂ ಓನಿಕ್ಸ್ ಬ್ಲ್ಯಾಕ್. ಇನ್ನು, ಈ ಕಾರು, ಹುಂಡೈ ವೆನ್ಯೂ, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಮಹೀಂದ್ರಾ XUV300, ಮಾರುತಿ ಸುಜುಕಿ ಫ್ರಾಂಕ್ಸ್, ರೆನಾಲ್ಟ್ ಕಿಗರ್ ಹಾಗೂ ಟಾಟಾ ಪಂಚ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications








