ವೇಗ ಹೆಚ್ಚಿಸಿದ ನಿಸ್ಸಾನ್... 2030 ರ ವೇಳೆಗೆ 23 EV ಮಾದರಿಗಳನ್ನು ಪರಿಚಯಿಸಲು ಸಜ್ಜು
ವಿಶ್ವದಾದ್ಯಂತ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ವೇಳೆ ಎಲ್ಲರಿಗಿಂತ ವೇಗವಾಗಿ ಸಾಲು ಸಾಲು ಇವಿಗಳನ್ನು ತರಲು ನಿಸ್ಸಾನ್ ಮುಂದಾಗಿದೆ. ಯುರೋಪ್‌ನಲ್ಲಿ ಹೊರಸೂಸುವಿಕೆ ನಿಯಮಗಳು ಅತ್ಯಂತ ಕಠಿಣವಾಗಿರುವುದರಿಂದ ಹೈಬ್ರಿಡ್ ಹಾಗೂ ಇವಿಗಳ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ನಿಸ್ಸಾನ್ ಮೋಟಾರ್ ಕಂಪನಿಯು ತನ್ನ ಎಲ್ಲಾ ಕೊಡುಗೆಗಳನ್ನು ಪ್ರಾಯೋಗಿಕವಾಗಿ ಯುರೋಪ್‌ನಲ್ಲಿ ಶೇ 98 ರಷ್ಟು ಎಲೆಕ್ಟ್ರಿಕ್ ಅಥವಾ ಸರಣಿ ಹೈಬ್ರಿಡ್‌ಗಳನ್ನು 2026 ರ ವೇಳೆಗೆ ತರಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದು ಈ ಹಿಂದಿನ ಗುರಿಯ ಶೇ 75 ಕ್ಕಿಂತ ಹೆಚ್ಚಾಗಿದೆ. ಹಾಗೆಯೇ ಜಪಾನ್‌ನಲ್ಲಿ, ಕಂಪನಿಯು ತನ್ನ ಮಾದರಿ ಕೊಡುಗೆಗಳಲ್ಲಿ ಶೇ 58 ರಷ್ಟು ಇವಿಗಳನ್ನು ತರುವ ಗುರಿಯನ್ನು ಹೊಂದಿದೆ, ಇದು ಈ ಹಿಂದಿನ ಗುರಿಗಿಂತಲೂ ಶೇ 55 ರಷ್ಟು ಹೆಚ್ಚಾಗಿದೆ.

ಹೈಬ್ರಿಡ್ ವಾಹನಗಳು ಇಂಧನ ಚಾಲಿತ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಎರಡನ್ನೂ ಒಳಗೊಂಡಿರುತ್ತವೆ, ಆದರೆ ಹೈಬ್ರಿಡ್ ವಾಹನದ ಪವರ್‌ಟ್ರೇನ್‌ಗೆ ಶಕ್ತಿ ನೀಡಲು ಒಂದೇ ರೀತಿಯ ಮೋಟಾರ್ ಅನ್ನು ಬಳಸುತ್ತವೆ. ಈ ಎಂಜಿನ್ ಮೋಟಾರ್‌ಗಾಗಿ ಜನರೇಟರ್‌ಗೆ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿ. ಅಂದರೆ ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳಿಗೆ ಹೋಲಿಸಿಕೊಂಡರೆ ಅಜಗಜಾಂತರ ವ್ಯತ್ಯಾಸದಲ್ಲಿ ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಣದಲ್ಲಿಡುತ್ತವೆ ಎಂಬುದು ಇಲ್ಲಿನ ಪ್ರಮುಖ ಅಂಶವಾಗಿದೆ.
ಇನ್ನು ಅಮೇರಿಕಾದಲ್ಲಿ EVಗಳು ಮತ್ತು ಸರಣಿ ಹೈಬ್ರಿಡ್‌ಗಳ ಮಾರಾಟವನ್ನು ಈ ಹಿಂದಿನಂತೆ ಶೇ 40 ರಷ್ಟು ಗುರಿಯನ್ನು ಹೊಂದಿದ್ದು, ಯಾವುದೇ ಬದಲಾವಣೆಯಾಗಿಲ್ಲ. ಆದರೆ ಚೀನಾದಲ್ಲಿ ಈ ಗುರಿಯನ್ನು ಶೇ 40 ರಿಂದ 35 ಕ್ಕೆ ಕಡಿತಗೊಳಿಸಲಾಗಿದೆ. ಇದು ಹೈಬ್ರಿಡ್‌ಗಳನ್ನು ಹೊರತುಪಡಿಸಿ ಶುದ್ಧ EVಗಳನ್ನು ಮಾತ್ರ ಒಳಗೊಂಡಿದೆ. ನಿಸ್ಸಾನ್ ಕಂಪನಿಯ ಈ ಗುರಿಯು ತನ್ನ ಮೈತ್ರಿ ಪಾಲುದಾರರ ನಿರೀಕ್ಷಿತ ವಾಹನ ಮಾರಾಟವನ್ನು ಒಳಗೊಂಡಿಲ್ಲ ಎನ್ನಲಾಗಿದೆ.

ಕಂಪನಿಯು ಆರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿತ್ತು, ಯಾವಾಗ ತನ್ನ ಪಾಲುದಾರ ಲೀಫ್ 2010 ರಲ್ಲಿ ಮಾರಾಟವಾಯಿತೋ, ಅಂದಿನಿಂದ ಟೆಸ್ಲಾ ಮತ್ತು ಚೈನೀಸ್ ವಾಹನ ತಯಾರಕ BYD ಯಂತಹ ಹೊಸಬರು ಕಂಪನಿಯನ್ನು ಹಿಂದಿಕ್ಕಿದ್ದಾರೆ. ಸದ್ಯ ಟೆಸ್ಲಾ ಹಾಗೂ ಬಿವೈಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮಾದರಿಗಳ ದಾಖಲೆ ಮಟ್ಟದ ಮಾರಾಟದ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಟೆಸ್ಲಾ ಈವರೆಗೆ ಭಾರತ ಸರ್ಕಾರದ ನಿಯಮಗಳನ್ನು ಅಂಗೀಕರಿಸದ ಕಾರಣ ದೇಶಕ್ಕೆ ಲಗ್ಗೆಯಿಟ್ಟಿಲ್ಲ.
ನಿಸ್ಸಾನ್ ಅಧಿಕಾರಿಗಳು ಹೇಳುವ ಪ್ರಕಾರ, ಯೊಕೊಹಾಮಾ ಮೂಲದ ಕಂಪನಿಯು EV ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನದ ಸಂಪತ್ತನ್ನು ಹೊಂದಿದೆ, ವಿಶೇಷವಾಗಿ ಗ್ರಾಹಕರು ಉತ್ಪನ್ನಗಳನ್ನು ಹೇಗೆ ಬಳಸುತ್ತಾರೆ ಮತ್ತು ಬ್ಯಾಟರಿಯಲ್ಲಿ ಯಾವ ರೀತಿಯ ಅಂಶಗಳನ್ನು ಬಳಸುತ್ತಾರೆ ಎಂಬುದರ ಕುರಿತು ಅವರಿಗೆ ಅರಿವಿದೆ. ಇದು ಹಸಿರು ಕಾರುಗಳ ಪ್ರಸರಣಕ್ಕೆ ನಿರ್ಣಾಯಕವಾಗಿದ್ದು, ಭವಿಷ್ಯದ ಕಾರು ತಯಾರಕರ ಪೈಪೋಟಿಯನ್ನು ಎದುರಿಸಲು ನಮಗೆ ಉತ್ತಮ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ.

ನಿಸ್ಸಾನ್ 2030 ರ ವೇಳೆಗೆ 19 ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಹೊರತರಲು ಕಂಪನಿ ಯೋಜಿಸಿದೆ. ಈ ತಿಂಗಳ ಆರಂಭದಲ್ಲಿ ಯುರೋಪ್‌ನಲ್ಲಿ ರೆನಾಲ್ಟ್‌ನ ಎಲೆಕ್ಟ್ರಿಕ್ ವಾಹನ ಮತ್ತು ಸಾಫ್ಟ್‌ವೇರ್ ಘಟಕವಾದ ಆಂಪಿಯರ್‌ನಲ್ಲಿ ಶೇ 15 ರಷ್ಟು ಪಾಲನ್ನು ಹೂಡಿಕೆ ಮಾಡುವುದಾಗಿ ನಿಸ್ಸಾನ್ ಹೇಳಿದೆ. ನಿಸ್ಸಾನ್ ಮತ್ತು ರೆನಾಲ್ಟ್ ಇವಿ ತಂತ್ರಜ್ಞಾನದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ, ಮುಂದಿನ ಪೀಳಿಗೆಯ ಬ್ಯಾಟರಿಯನ್ನು ಅಭಿವೃದ್ಧಿಪಡಿಸುವಲ್ಲಿ ನಿಸ್ಸಾನ್ ಮುಂದಾಳತ್ವ ವಹಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








