ಕೈಗೆಟುಕವ ಬೆಲೆಯಲ್ಲಿ ಗೇಮ್ ಚೇಂಚರ್ ಆಗಿ ಬರುತ್ತಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು
ನಿಸ್ಸಾನ್ (Nissan) ಭಾರತದಲ್ಲಿ ದೊಡ್ಡ ಜನಪ್ರಿಯ ಬ್ರ್ಯಾಂಡ್ ಆಗಲ್ಲ. ಆದರೆ ಈ ಕಂಪನಿಯು ನಿರಂತರವಾಗಿ ತಮ್ಮ ಕಾರುಗಳ ಮಾರಾಟದ ವೇಗವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ, ನಿಸ್ಸಾನ್ ಕೇವಲ ಮ್ಯಾಗ್ನೈಟ್ ಮಾರಾಟದಲ್ಲಿ ಉಳಿದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಸ್ಸಾನ್ ಹೆಚ್ಚು ಕಾರುಗಳನ್ನು ತರಬೇಕಾಗಿದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.
ನಿಸ್ಸಾನ್ ಕೈಗೆಟುಕುವ 7-ಸೀಟರ್ ಕಾರಿನ ಆಯ್ಕೆಯನ್ನು ಹೊಂದಿಲ್ಲ. ನಿಸ್ಸಾನ್ ಸಾಕಷ್ಟು ವಿಭಾಗಗಳಲ್ಲಿ ಕೊರತೆಯನ್ನು ಹೊಂದಿದೆ. ಆದರೆ ಕೈಗೆಟುಕುವ 7-ಸೀಟರ್ ನಿಸ್ಸಾನ್‌ನಂತಹ ಬ್ರ್ಯಾಂಡ್‌ಗೆ ಲಾಭದಾಯಕವಾಗಿದೆ. ನಿಸ್ಸಾನ್ ಮ್ಯಾಗ್ನೈಟ್ 7-ಸೀಟರ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಗಳಾಗಿದೆ. ನಿಸ್ಸಾನ್ ಕಂಪನಿಯು ಟ್ರೈಬರ್ ಆಧಾರಿತ ಹೊಸ ಸೀಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಟ್ರೈಬರ್ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತದೆ.

ನಿಸ್ಸಾನ್ 7-ಸೀಟರ್ ತನ್ನದೇ ಆದ ವಿಶಿಷ್ಟ ಗುರುತನ್ನು ಪಡೆಯುತ್ತದೆ. ನಿಸ್ಸಾನ್ ಮ್ಯಾಗ್ನೈಟ್‌ನಂತೆಯೇ ಮುಂಭಾಗದ ವಿನ್ಯಾಸವನ್ನು ನೀಡಬಹುದು. ಆದ್ದರಿಂದ ನಾವು ಅಗ್ರೇಸಿವ್ ವಿನ್ಯಾಸ ಭಾಷೆಯನ್ನು ನಿರೀಕ್ಷಿಸಬಹುದು. ಆಂತರಿಕ ವಿನ್ಯಾಸವು 8.0-ಇಂಚಿನ ಇನ್ಫೋಟೈನ್‌ಮೆಂಟ್, ರೂಫ್-ಮೌಂಟೆಡ್ ಎಸಿ ವೆಂಟ್‌ಗಳು, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಇತ್ಯಾದಿಗಳಂತೆಯೇ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರಬಹುದು.
ಇನ್ನು ಈ ಹೊಸ ಕಾರಿನ ಎಂಜಿನ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ ಅದೇ 1.0 ನ್ಯಾಚುರಲ್ ಆಸ್ಪೈರ್ಡ್ ಎಂಜಿನ್ನೊಂದಿಗೆ ಬರಬಹುದು. ಟ್ರೈಬರ್‌ನಲ್ಲಿ ಕಾಣೆಯಾಗಿರುವ ಟರ್ಬೊ ಆಯ್ಕೆಯನ್ನು ನಿಸ್ಸಾನ್ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಇನ್ನು ಎಂಜಿನ್ ಆಯ್ಕೆಗಳನ್ನು ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಅನ್ನು ಒಳಗೊಂಡಿರುತ್ತದೆ. ಕಾರು ಟ್ರೈಬರ್ ಅನ್ನು ಆಧರಿಸಿದೆ ಎಂದು ಪರಿಗಣಿಸಿ, ನಿಸ್ಸಾನ್‌ಗೆ ಅದು ಕಷ್ಟಕರವಾಗಿರಬಾರದು.

ನಿಸ್ಸಾನ್ ಕಾರುಗಳು ತಮ್ಮ ರೆನಾಲ್ಟ್ ಕೌಂಟರ್ಪಾರ್ಟ್ಸ್ಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತವೆ. ನಿಸ್ಸಾನ್ 7-ಸೀಟರ್ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ 7-ಸೀಟರ್ ಆಗಲಿದೆ ಎಂದು ನಾವು ನಿರೀಕ್ಷಿಸಬಹುದು. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಪ್ರಯಾಣವು ಯಾವಾಗಲೂ ಹೋರಾಟಗಳಿಂದ ತುಂಬಿದೆ. ನಿಸ್ಸಾನ್ ಸರಣಿಯಲ್ಲಿರುವ ಮಾರಾಟದ ಅಂಕಿಅಂಶಗಳಿಗೆ ಬಂದಾಗ ಅವರ ಪ್ರತಿಸ್ಪರ್ಧಿಗಳ ಎದುರು ಹಿಂದೆ ಇದೆ. ಪ್ರಸ್ತುತ ನಿಸ್ಸಾನ್ ಮೋಟಾರ್ ಇಂಡಿಯಾ ಸ್ವಲ್ಪಮಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಒಮ್ಮೆ ನಿಸ್ಸಾನ್ ಸ್ಥಗಿತದ ಅಂಚಿನಲ್ಲಿತ್ತು, ಆದರೆ ಮ್ಯಾಗ್ನೈಟ್ ಕಾರಿನ ಬಿಡುಗಡೆಯ ಬಳಿಕ ಸ್ಥಿರವಾಗಿದೆ. ಇನ್ನು ಮ್ಯಾಗ್ನೈಟ್ ಅನ್ನು ಭಾರತದಲ್ಲಿ ನಿಸ್ಸಾನ್ ಅಸ್ತಿತ್ವವನ್ನು ಉಳಿಸಿದ ವಾಹನ ಎಂದು ಉದ್ಯಮ ತಜ್ಞರು ಶ್ಲಾಘಿಸುತ್ತಾರೆ. ಜಪಾನಿನ ವಾಹನ ತಯಾರಕರು 2022ರ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ನಿಸ್ಸಾನ್ ಕಶ್ಕೈ, ಎಕ್ಸ್-ಟ್ರಯಲ್ ಮತ್ತು ಜೂಕ್ ಎಸ್‌ಯುವಿಗಳನ್ನು ಪ್ರದರ್ಶಿಸಿದರು. ವಾಸ್ತವವಾಗಿ, ಕಂಪನಿಯು ತನ್ನ ಎರಡು ಜಾಗತಿಕ ಎಸ್‌ಯುವಿಗಳನ್ನು ದೇಶದಲ್ಲಿ ಪರೀಕ್ಷಿಸಲು ಪ್ರಾರಂಭಿಸಿದೆ.
ನಿಸ್ಸಾನ್ ಎಕ್ಸ್-ಟ್ರಯಲ್, ಟೊಯೊಟಾ ಫಾರ್ಚುನರ್ ವಿರುದ್ಧ ಸ್ಥಾನ ಪಡೆಯಲಿದೆ. ಈ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಕಾರನ್ನು 2023ರ ಮಧ್ಯದಲ್ಲಿ ಬಿಡುಗಡೆಯಾಗಲಿದೆ. ರೆನಾಲ್ಟ್-ನಿಸ್ಸಾನ್‌ನ CMF-C ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ನಾಲ್ಕನೇ ತಲೆಮಾರಿನ ಮಾದರಿಯಾಗಿದೆ. ಕಡಿಮೆ ಪ್ರಮಾಣದ CBU (ಸಂಪೂರ್ಣವಾಗಿ ಬಿಲ್ಟ್-ಅಪ್) ಯುನಿಟ್ ಮಾದರಿಯನ್ನು ಇಲ್ಲಿಗೆ ತರಲಾಗುತ್ತದೆ.
ಕುತೂಹಲಕಾರಿಯಾಗಿ, ಹೊಸ ಎಕ್ಸ್-ಟ್ರಯಲ್ ಭಾರತದಲ್ಲಿ ಮೊದಲ ನಿಸ್ಸಾನ್ ಇ-ಪವರ್ ಹೈಬ್ರಿಡ್ ಕಾರು ಆಗಿರುತ್ತದೆ. ಈ ಎಸ್‍ಯುವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಬಲವಾದ ಹೈಬ್ರಿಡ್ ಸಿಸ್ಟಮ್ನೊಂದಿಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಯುನಿಟ್ ನೊಂದಿಗೆ ಲಭ್ಯವಿದೆ. 2WD (ಟೂ-ವೀಲ್ ಡ್ರೈವ್) ನೊಂದಿಗೆ ಬರುವ ಮೈಲ್ಡ್ ಹೈಬ್ರಿಡ್ ಆವೃತ್ತಿಯು 163 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


Click it and Unblock the Notifications








