ರಿವೀಲ್ ಆಯ್ತು ಬಹು ನಿರೀಕ್ಷಿತ ಟಾಟಾ ಹ್ಯಾರಿಯರ್ ಇವಿ: ಖಡಕ್ ಲುಕ್ - 500km ರೇಂಜ್, ನೀವೇನಂತೀರಾ?
ಜನವರಿಯಲ್ಲಿ ನಡೆದಿದ್ದ ಆಟೋ ಎಕ್ಸ್‌ಪೋ 2023 ಯಲ್ಲಿ ಟಾಟಾ ಮೋಟಾರ್ಸ್ ಸ್ಟಾಲ್‌ನಲ್ಲಿ ಅತೀ ಹೆಚ್ಚು ಗಮನ ಸೆಳೆದಿದ್ದ ಕಾನ್ಸೆಪ್ಟ್ ಕಾರುಗಳಲ್ಲಿ ಟಾಟಾ ಹ್ಯಾರಿಯರ್ ಇವಿಯೂ ಸಹ ಒಂದು. ಆಟೋ ಎಕ್ಸ್‌ಪೋದಲ್ಲಿ ಈ ಕಾರಿನ ಕಾನ್ಸೆಪ್ಟ್ ಅನಾವರಣಗೊಂಡಾಗಿನಿಂದ ಈ ಕಾರು ಮಾರುಕಟ್ಟೆಗೆ ಯಾವಾಗ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.
ಇದೀಗ ಟಾಟಾ ಮೋಟೋರ್ಸ್ ಹ್ಯಾರಿಯರ್ ಇವಿಯ (TATA Harrier EV) ಫೋಟೋವನ್ನು ಬಿಡುಗಡೆಗೊಳಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಟೋಎಕ್ಸ್‌ಪೋ ದಲ್ಲಿ ಬಿಳಿ ಕಲರ್‌ನ ಟಾಟಾ ಇವಿಯ ಕಾನ್ಸೆಪ್ಟ್ ಕಾರನ್ನು ಪ್ರದರ್ಶನಕ್ಕಿಟ್ಟಿದ್ದ ಟಾಟಾ, ಈಗಷ್ಟೇ ಬಿಡುಗಡೆಗೊಳಿಸಿದ ಛಾಯಾ ಚಿತ್ರದಲ್ಲಿ ಹ್ಯಾರಿಯರ್ ಇವಿಯ ಬಣ್ಣದಲ್ಲಿ ಬದಲಾವಣೆಯನ್ನು ಕಾಣಬಹುದು.

ಇತ್ತೀಚೆಗೆ ಬಿಡುಗಡೆಗೊಳಿಸಿದ ಫೋಟೋದಲ್ಲಿ ಡ್ಯುಯಲ್ ಟೋನ್ ನ ಬಣ್ಣವನ್ನು ಕಾಣಬಹುದಾಗಿದೆ. ಇದರಲ್ಲಿ ಬ್ರೋನ್ಸ್ ಮತ್ತು ಬಿಳಿ ಬಣ್ಣದ ಮಿಶ್ರಣವನ್ನು ಕಾಣಬಹುದು. ಇನ್ನು ಈ ಚಿತ್ರದಲ್ಲಿ ಕಾರಿನ ಡಿಸೈನ್ ವಿನ್ಯಾಸವೂ ಬಿಡುಗಡೆಯಾಗಿದ್ದು ಇದು ಕಾರು ಪ್ರೇಮಿಗಳನ್ನು ಆಕರ್ಷಿಸುವುದು ಪಕ್ಕಾ ಎಂಬುದು ಆಟೋಮೊಬೈಲ್ ಪಂಡಿತರ ಲೆಕ್ಕಾಚಾರ.
ಚಿತ್ರದಲ್ಲಿ ಕಾಣುವಂತೆ ಹೊಸ ಟಾಟಾ ಹ್ಯಾರಿಯರ್ ಇವಿಯಲ್ಲಿ ಸಂಪೂರ್ಣ ಮುಚ್ಚಿದ ಗ್ರಿಲ್ ಡಿಸೈನ್ ಅನ್ನು ಕಾಣಬಹುದಾಗಿದೆ. ಈ ಎಸ್‌ಯುವಿಯು ಫುಲ್ ವಿಡ್ತ್ ರನ್ನಿಂಗ್ ಲ್ಯಾಂಪ್ ಜೊತೆ ಸ್ಪ್ಲಿಟ್ ಹೆಡ್ ಲ್ಯಾಂಪ್ ವ್ಯವಸ್ಥೆಯನ್ನು ನಾವು ಕಾಣಬಹುದಾಗಿದೆ. ನಾವು ಆಟೋ ಎಕ್ಸ್‌ಪೋದಲ್ಲಿ ಕಂಡ ಹ್ಯಾರಿಯರ್ ಇವಿಯ ಡಿಸೈನ್‌ನಲ್ಲಿ ಸಣ್ಣದಾದ ಕೆಲವೇ ಕೆಲವು ಅಂಶಗಳನ್ನು ಮಾತ್ರ ಬದಲಾಯಿಸಬಹುದಾಗಿದೆ.

ಇನ್ನು ಈಗಿರುವ ಟಾಟಾ ಹ್ಯಾರಿಯರ್ ಕಾರ್‌ಗಿಂತ ಈ ಕಾರು ಡಿಸೈನ್‌ನಲ್ಲಿ ಭಿನ್ನವಾಗಿದ್ದು, ಮುಂಬರುವ ಐಸಿಇ ಎಂಜಿನ್‌ನಲ್ಲಿ ಹ್ಯಾರಿಯರ್ ಫೆಸ್‌ಲಿಫ್ಟ್ ಕಾರಿಗೆ ಈಗ ರಿವೀಲ್ ಆಗಿರುವ ಟಾಟಾ ಹ್ಯಾರಿಯರ್ ಇವಿಯ ಡಿಸೈನ್ ಅನ್ನು ಪರಿಚಯಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು ಇದನ್ನು ಕಾದು ನೋಡಬೇಕಾಗಿದೆ.
ಇನ್ನು ಈಗಾಗಲೇ ಟಾಟಾ ಮೋಟೋರ್ಸ್ ತಿಳಿಸಿರುವಂತೆ ಈ ಟಾಟಾ ಹ್ಯಾರಿಯರ್ ಇವಿಯು ಭಾರತದ ಮಾರುಕಟ್ಟೆಗೆ ಕಾಲಿಡುವ ವೇಳೆಯಲ್ಲಿ ಇದು ಡ್ಯುಯಲ್ ಮೋಟೋರ್ ವ್ಯವಸ್ಥೆಯನ್ನು ಹೊಂದಿರಲಿದ್ದು, ಇದರ ಜೊತೆಗೆ ಆಲ್ ವ್ಹೀಲ್ ಕಾನ್ಫಿಗರೇಷನ್‌ನಲ್ಲಿ ಈ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ. ಇದು ಮಾರುಕಟ್ಟೆಯಲ್ಲಿರುವ ಟಾಟಾ ಇವಿ ಯ ಪಾರುಪತ್ಯವನ್ನು ಅಧಿಕ ಗೊಳಿಸಲಿದೆ.
ಇನ್ನು ಇದರಲ್ಲಿರುವ ಪ್ರಮುಖ ಫೀಚರ್ ಎಂದರೆ ಈ ಕಾರಿನಲ್ಲಿ ವೆಹಿಕಲ್ ಟು ಲೋಡ್ ಮತ್ತು ವೆಹಿಕಲ್ ಟು ವೆಹಿಕಲ್ ಚಾರ್ಜಿಂಗ್ ಮಾಡುವ ವ್ಯವಸ್ಥೆ. ಟಾಟಾ ಮೋಟಾರ್ಸ್ ಈ ಹ್ಯಾರಿಯರ್ ಇವಿಯ ನಿರ್ಧಿಷ್ಟ ಫೀಚರ್‌ಗಳನ್ನು ಬಿಡಲಿಲ್ಲವಾದರೂ ಮಾಹಿತಿಗಳ ಪ್ರಕಾರ ಇದು ಸುಮಾರು 400-500 ಕಿಮೀ ರೇಂಜ್ ನೀಡುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications