ಸುರಕ್ಷತೆಯಲ್ಲೂ ಸೈ ಎನಿಸಿಕೊಂಡ ಮಾರುತಿ ಸುಜುಕಿ ಕಾರು... ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು
ವರನ ಕುಟುಂಬವೊಂದು ಹೊಸ ಮಾರುತಿ ಗ್ರಾಂಡ್ ವಿಟಾರ ಕಾರಿನಲ್ಲಿ ಮದುವೆಗೆ ಹೊರಟಿದ್ದಾಗ ಅಪಘಾತ ನಡೆದಿದೆ. ಹಿಂಬದಿಯಿಂದ ಬಂದ ಹ್ಯುಂಡೈ i20 ಕಾರು ಗ್ರಾಂಡ್ ವಿಟಾರಾವನ್ನು ಡಿಕ್ಕಿ ಹೊಡೆದಿದ್ದು, ಎರಡು ಬಾರಿ ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನೆಯಲ್ಲಿನ ಹೊಚ್ಚಹೊಸ ಗ್ರ್ಯಾಂಡ್ ವಿಟಾರಾ SUVಯ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ತನ್ನ ನಂಬರ್ ಪ್ಲೇಟ್‌ಗಳನ್ನು ಖರೀದಿಸುವ ಮುನ್ನವೇ ಪೆಟ್ರೋಲ್ ಬಂಕ್‌ವೊಂದರ ಮುಂದೆ ಅಪಘಾತಕ್ಕೀಡಾಗಿದೆ. ಈ ಘಟನೆ ಗುರುವಾರ ಬೆಳಗ್ಗೆ 8.20 ರ ಸುಮಾರಿಗೆ ನಡೆದಿದ್ದು, ಎರಡೂ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಒಟ್ಟು 6 ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಚಿಕಿತ್ಸೆ ಪಡೆದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಮದುವೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ
ವರ ರಿದಮ್ ವಿನೋದ್ ಭಾಯ್ ಮತ್ತು ಅವರ ಕುಟುಂಬವು ಹೊಚ್ಚ ಹೊಸ ಮಾರುತಿ ಸುಜುಕಿ ಗ್ರಾಂಡ್ ವಿಟಾರಾದಲ್ಲಿ ಅಹಮದಾಬಾದ್‌ನಿಂದ ಇಡಾರ್‌ಗೆ ಪ್ರಯಾಣಿಸುತ್ತಿದ್ದರು. ಇದೇ ಕುಟುಂಬದ ಮತ್ತೊಂದು ಕಾರಾದ ಹ್ಯುಂಡೈ i20 ಮಾರುತಿ ಗ್ರಾಂಡ್ ವಿಟಾರಾವನ್ನು ಹಿಂಬಾಲಿಸುತ್ತಿತ್ತು. ಈ ಕುಟುಂಬವು ಮದುವೆಗೆಂದು ಹೊರಟಿದ್ದು, ವರ ಕುಳಿತಿದ್ದ ಗ್ರಾಂಡ್ ವಿಟಾರ ಕಾರು ಗುಜರಾತ್‌ನ ಸಬರ್ಕಾಂತ ಜಿಲ್ಲೆಯ ದಲ್‌ಪುರ್ ಗ್ರಾಮದ ಪೆಟ್ರೋಲ್ ಬಂಕ್ ಬಳಿ ನಿಧಾನಗೊಂಡಿದೆ.
ಇದೇ ವೇಳೆ ಅತಿ ವೇಗದಲ್ಲಿದ್ದ ಹ್ಯುಂಡೈ i20 ಕಾರು ಗ್ರಾಂಡ್ ವಿಟಾರವನ್ನು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವರನ ಕುಟುಂಬದ ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ನಂತರ ಅಹಮದಾಬಾದ್‌ಗೆ ಸ್ಥಳಾಂತರಿಸಲಾಯಿತು. ಆಶ್ಚರ್ಯಕರವಾಗಿ, ಈ ಅಪಘಾತದಿಂದ ಬದುಕುಳಿದ ವರನು ಅದೇ ದಿನ ಇಡಾರ್‌ನಲ್ಲಿ ತನ್ನ ಮದುವೆಯ ತಾಣವನ್ನು ತಲುಪಿ ವಧುವನ್ನು ಮದುವೆಯಾಗಿದ್ದಾನೆ. ಪೆಟ್ರೋಲ್ ಬಂಕ್ ಹೊರಗೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಘಾತ ನಡೆದಿದ್ದು ಹೇಗೆ?
ಗ್ರ್ಯಾಂಡ್ ವಿಟಾರಾ ಪೆಟ್ರೋಲ್ ಬಂಕ್ ಮುಂದೆ ನಿಧಾನಗೊಳಿಸಿದಾಗ ಅಪಘಾತ ಸಂಭವಿಸಿದೆ. ಈ ಹಠಾತ್ ಬೆಳವಣಿಗೆಯ ಅರಿವಿಲ್ಲದೆ, i20 ಚಾಲಕನು ಗ್ರ್ಯಾಂಡ್ ವಿಟಾರಾವನ್ನು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಈ ಪ್ರಭಾವದಿಂದಾಗಿ, ಮುಂದೆ ಗ್ರ್ಯಾಂಡ್ ವಿಟಾರಾ ಎರಡು ಬಾರಿ ಉರುಳಿ ಅದರ ಎಡಭಾಗದಲ್ಲಿ ನಿಲ್ಲುತ್ತದೆ. ಬಹುತೇಕ 2 ಪೂರ್ಣ ರೋಲ್‌ಗಳನ್ನು ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಪ್ರಯಾಣಿಕರು ಸೇಫ್ ಆಗಿ ಹೊರ ಬಂದಿರುವುದು ಅಚ್ಚರಿಯಾಗಿದೆ.
ಈ ಘಟನೆಯ ನಂತರ ಸಂಪೂರ್ಣವಾಗಿ ಧ್ವಂಸಗೊಂಡ ಗ್ರ್ಯಾಂಡ್ ವಿಟಾರಾ ವಾಹನವನ್ನು ನಾವು ನೋಡಬಹುದು. ಹ್ಯುಂಡೈ ಐ20 ಮುಂಭಾಗವು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅದು ಉರುಳದ ಕಾರಣ ಅಷ್ಟೇನು ನುಜ್ಜುಗುಜ್ಜಾಗದೇ ಯಥಾಸ್ಥಿತಿಯಲ್ಲಿದೆ. ಇನ್ನು ವರ ರಿದಮ್ ವಿನೋದ್ ಭಾಯ್ ಸಣ್ಣ ಅಪಘಾತಗಳೊಂದಿಗೆ ಮತ್ತೊಂದು ಕಾರಿನಲ್ಲಿ ಇದಾರ್ ತಲುಪಿ ಮದುವೆಯಾದರು. ಗಾಯಗೊಂಡ ಆರು ಮಂದಿಯನ್ನು ಹಿಮ್ಮತ್ ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ನಾಲ್ವರನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಯಿತು.
ಮಾರುತಿ ಕಾರುಗಳು ಸುರಕ್ಷತೆಯಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಘಟನೆಯಿಂದ ಮಾರುತಿ ಗ್ರಾಹಕರಿಗೆ ಒಂದು ಮಟ್ಟಕ್ಕೆ ಬ್ರಾಂಡ್ ಮೇಲೆ ನಂಬಿಕೆ ಹೆಚ್ಚಾಗಿದೆ. ಮಾರುತಿ ಕೂಡ ಮುಂಬರುವ ದಿನಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿದರೆ ಮಾರಾಟದಲ್ಲಿ ಇನ್ನು ಹೆಚ್ಚು ಅಂಕಿಅಂಶಗಳನ್ನು ಸಾಧಿಸಬಹುದು ಎನ್ನಲಾಗುತ್ತಿದೆ. ಗ್ರಾಂಡ್ ವಿಟಾರಾ ಮಾದರಿಯು ಟೊಯೊಟಾದಿಂದ ಯಾಂತ್ರಿಕ ಹಾಗೂ ತಾಂತ್ರಿಕ ಅಂಶಗಳನ್ನು ಹಂಚಿಕೊಂಡಿದೆ. ಪ್ರಸ್ತುತ ಗ್ರಾಂಡ್ ವಿಟಾರಾ ಉತ್ತಮ ಮಾರಾಟವನ್ನು ದಾಖಲಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications