ವಿಶ್ವ ದಾಖಲೆ ಮುರಿದ ಮಹೀಂದ್ರಾ ಒಡೆತನದ ಇಟಾಲಿಯನ್ ಎಲೆಕ್ಟ್ರಿಕ್ ಹೈಪರ್ ಕಾರ್

ಮಹೀಂದ್ರಾ-ಮಾಲೀಕತ್ವದ ಇಟಾಲಿಯನ್ ಆಟೋಮೋಟಿವ್ ಸಂಸ್ಥೆ ನಿರ್ಮಿಸಿದ ಎಲೆಕ್ಟ್ರಿಕ್ ಹೈಪರ್‌ಕಾರ್ ಪಿನಿನ್‌ಫರಿನಾ ಬಟಿಸ್ಟಾ ವಿಶ್ವದಾಖಲೆಗಳನ್ನು ಮುರಿದಿದೆ. ಮಧ್ಯಪ್ರದೇಶದ ಇಂದೋರ್ ಬಳಿಯ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಸ್ (ನ್ಯಾಟ್ರಾಕ್ಸ್)ನಲ್ಲಿ ಈ ಉತ್ಪಾದನಾ ಕಾರ್ ಅತ್ಯಂತ ವೇಗವಾಗಿ ಅರ್ಧ ಮೈಲಿಯನ್ನು ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದೆ.

Pininfarina Battista ಮಹೀಂದ್ರಾ ಒಡೆತನದ ಇಟಾಲಿಯನ್ ಮಾರ್ಕ್‌ನ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಹೈಪರ್‌ಕಾರ್ ಆಗಿದ್ದು, 120kWh ವೇಗದ ಚಾರ್ಜಿಂಗ್ ಬ್ಯಾಟರಿ ಪ್ಯಾಕ್‌ನಿಂದ ಪವರ್ ಪಡೆಯುತ್ತದೆ. ಬಟಿಸ್ಟಾದ ಬ್ಯಾಟರಿ ಪ್ಯಾಕ್ ಒಟ್ಟು 1,877bhp ಪವರ್ ಮತ್ತು 2,340Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಗಳನ್ನು (ಪ್ರತಿ ಚಕ್ರದಲ್ಲಿ ಒಂದು) ಹೊಂದಿದೆ. ಈ ಪವರ್ ಒದಗಿಸುವ ದೇಶೀಯ ಬ್ರಾಂಡ್ ಒಡೆತನದ ಏಕೈಕ ಎಲೆಕ್ಟ್ರಿಕ್ ಕಾರು ಇದಾಗಿದೆ ಎಂದು ಹೇಳಬಹುದು.

ವಿಶ್ವ ದಾಖಲೆ ಮುರಿದ ಮಹೀಂದ್ರಾ ಒಡೆತನದ ಇಟಾಲಿಯನ್ ಎಲೆಕ್ಟ್ರಿಕ್ ಹೈಪರ್ ಕಾರ್

NATRAX ನಲ್ಲಿನ ಪರೀಕ್ಷಾ ಪ್ರಕ್ರಿಯೆಗಾಗಿ, ಪಿನಿನ್‌ಫರಿನಾ ಬಟಿಸ್ಟಾವನ್ನು ಜಿಗುಟಾದ ಮೈಕೆಲಿನ್ ಪೈಲಟ್ ಸ್ಪೋರ್ಟ್ ಕಪ್ 2R ಟೈರ್‌ಗಳೊಂದಿಗೆ ಸಜ್ಜುಗೊಳಿಸಲಾಗಿತ್ತು. ಇದು ಕ್ವಾರ್ಟರ್ ಮೈಲಿಯನ್ನು ಕೇವಲ 8.55 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರೆ, ಅರ್ಧ-ಮೈಲಿಯನ್ನು ಈ ಹೈಪರ್-ಜಿಟಿ ಕೇವಲ 13.38 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದೆ. ಇದರ ಜೊತೆಗೆ ಪರೀಕ್ಷಾ ಪ್ರಕ್ರಿಯೆಯಲ್ಲಿ 358.03km/h ವೇಗವನ್ನು ತಲುಪುವ ಮೂಲಕ ಭಾರತದಲ್ಲಿ ಅತ್ಯಂತ ವೇಗ ತಲುಪಿದ ಮೊದಲ ಕಾರ್ ಎಂಬ ಹೆಗ್ಗಳಿಕೆಯನ್ನು ಸಾಧಿಸಿದೆ.

ಈ ಹಿಂದಿನ ದಾಖಲೆಯು ಗಂಟೆಗೆ 322 ಕಿ.ಮೀ ನ್ಯಾಶನಲ್ ಟೆಸ್ಟ್ ಟ್ರ್ಯಾಕ್ಸ್ ಸೌಲಭ್ಯದಲ್ಲಿ ಟಾಪ್ ಸ್ಪೀಡ್ ರನ್ ಅನ್ನು ಮೈಕೆಲಿನ್ ಪೈಲಟ್ ಸ್ಪೋರ್ಟ್ ಕಪ್ 2 ಟೈರ್‌ಗಳಲ್ಲಿ ನಡೆಸಲಾಯಿತು. ಪಿನಿನ್‌ಫರಿನಾ ಬಟಿಸ್ಟಾ ಈಗ ಭಾರತದಲ್ಲಿ ಇದುವರೆಗೆ ಪರೀಕ್ಷಿಸಿದ ಅತ್ಯಂತ ವೇಗದ ಎಲೆಕ್ಟ್ರಿಕ್ ಕಾರ್ ಎಂಬ ದಾಖಲೆಯನ್ನು ನಿರ್ಮಿಸಿದೆ. FIA ನೊಂದಿಗೆ ಸಂಯೋಜಿತವಾಗಿರುವ ಮೋಟಾರ್‌ಸ್ಪೋರ್ಟ್‌ಗಳ ಭಾರತದ ಆಡಳಿತ ಮಂಡಳಿ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (FMSCI) ದಿಂದ ಈ ರನ್‌ಗಳನ್ನು ಪರಿಶೀಲಿಸಲಾಗಿದೆ.

ವಿಶ್ವ ದಾಖಲೆ ಮುರಿದ ಮಹೀಂದ್ರಾ ಒಡೆತನದ ಇಟಾಲಿಯನ್ ಎಲೆಕ್ಟ್ರಿಕ್ ಹೈಪರ್ ಕಾರ್

ಬಟಿಸ್ಟಾ ದಾಖಲೆ ನಿರ್ಮಿಸಿರುವುದು ಇದೇ ಮೊದಲೇನಲ್ಲ. Battista 100 ಕಿ.ಮೀ ವೇಗವನ್ನು ಕೆವಲ 1.86 ಸೆಕೆಂಡುಗಳಲ್ಲಿ ತಲುಪಿದೆ. ಈ ಇಟಾಲಿಯನ್ ಹೈಪರ್-GT ಕೇವಲ 4.75 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ತಲುಪಿ ದಾಖಲೆ ನಿರ್ಮಿಸಿದೆ. ಕೇವಲ 31 ಮೀಟರ್‌ಗಳಲ್ಲಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತ್ಯಂತ ವೇಗದ- ಬ್ರೇಕಿಂಗ್ ಎಲೆಕ್ಟ್ರಿಕ್ ವಾಹನ ಎಂಬ ದಾಖಲೆಯನ್ನು ಕೂಡ ಬಟಿಸ್ಟಾ ಹೊಂದಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ.

NATRAX ನಲ್ಲಿನ ಸೆಟ್ಟಿಂಗ್ ರನ್‌ಗಳ ಕುರಿತು ಆಟೋಮೊಬಿಲಿ ಪಿನಿನ್‌ಫರಿನಾ ಸಿಇಒ ಪಾವೊಲೊ ಡೆಲ್ಲಾಚಾ ಮಾತನಾಡಿ, "ಮೊದಲ ಬಾರಿಗೆ ಬಟಿಸ್ಟಾವನ್ನು ಭಾರತಕ್ಕೆ ಕರೆತರಲು ನಾವು ತುಂಬಾ ಹೆಮ್ಮೆಪಡುತ್ತೇವೆ. ನಮ್ಮ ಷೇರುದಾರರಾದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನೊಂದಿಗಿನ ಸಹಯೋಗವು ತುಂಬಾ ಮಹತ್ವದ್ದಾಗಿದೆ. 2022 ರಲ್ಲಿ ನಾವು ಇಟಲಿಯಲ್ಲಿನ ನಮ್ಮ ಹೊಸ ಅಟೆಲಿಯರ್ ಸೌಲಭ್ಯದಲ್ಲಿ ಬಟಿಸ್ಟಾ ಉತ್ಪಾದನೆಯನ್ನು ಪ್ರಾರಂಭಿಸಿದ್ದೇವೆ, ಪ್ರಪಂಚದಾದ್ಯಂತದ ಗ್ರಾಹಕರಿಗೆ ವಿತರಣೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಎಂದರು."

"ಈ ವರ್ಷ ಹೊಸ Battista ಮಾಲೀಕರು ಕಾರಿನ ವಿನ್ಯಾಸ ಮತ್ತು ಎಂಜಿನಿಯರಿಂಗ್ ಕುರಿತ ಅಭೂತಪೂರ್ವ ಕಾರ್ಯಕ್ಷಮತೆಯನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ. ಈ ವೇಗದ ದಾಖಲೆ ಮತ್ತು ಸ್ವತಂತ್ರ ಪರೀಕ್ಷೆಗಳು - Battista ನೊಂದಿಗೆ ಹೊಸ ಪೀಳಿಗೆಯ ಹೈಪರ್ ಮತ್ತು ಐಷಾರಾಮಿ ಕಾರ್ ಅನ್ನು ರಚಿಸುವ ನಮ್ಮ ಮಹತ್ವಾಕಾಂಕ್ಷೆಯನ್ನು ಮೌಲ್ಯೀಕರಿಸಿದೆ, ಆ ಮೂಲಕ ಎಲೆಕ್ಟ್ರಿಕ್ ಪವರ್ ICE ಪವರ್‌ಟ್ರೇನ್‌ಗಳ ಜಗತ್ತಿನಲ್ಲಿ ಸರಳವಾಗಿ ಸಾಧಿಸಲಾಗದ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದರು."

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, February 24, 2023, 10:46 [IST]
English summary
Pininfarina battista breaks half mile world records
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+