ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರಾಟವು ತೀವ್ರಗತಿಯಲ್ಲಿ ವೇಗ ಪಡೆದುಕೊಳ್ಳುತ್ತಿದ್ದು, ಮಹೀಂದ್ರಾ ಒಡೆತನದ ಇಟಲಿಯಾನ್ ಕಾರು ಉತ್ಪಾದಕ ಕಂಪನಿಯಾಗಿರುವ ಪಿನಿನ್‌ಫರಿನಾ ತನ್ನ ಬಹುನೀರಿಕ್ಷಿತ ಬ್ಯಾಟಿಸ್ಟಾ ಕಾರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಪಿನಿನ್‌ಫರಿನಾ ಕಂಪನಿಯು ಬ್ಯಾಟಿಸ್ಟಾ ಹೈಪರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಈಗಾಗಲೇ ಅನಾವರಣಗೊಳಿಸಿದ್ದು, ಬಿಡುಗಡೆಯಾಗಲಿರುವ ಹೊಸ ಕಾರು ಕೇವಲ 150 ಯುನಿಟ್‌ಗಳನ್ನು ಮಾತ್ರ ಉತ್ವಾದನೆಗೊಳಿಸಲು ನಿರ್ಧರಿಸಲಾಗಿದೆ. ಹೊಸ ಕಾರು 2021ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಖರೀದಿ ಲಭ್ಯವಾಗುವ ಬಗ್ಗೆ ಮಹೀಂದ್ರಾ ಕಂಪನಿಯ ತನ್ನ ವಾರ್ಷಿಕ ವಾಹನ ಮಾರಾಟ ಪರಾಮರ್ಶೆ ಸಭೆಯಲ್ಲಿ ಹೊಸ ಕಾರಿನ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರು ಫಾರ್ಮುಲಾ 1 ರೇಸ್ ಕಾರಿಗಿಂತಲೂ ಹೆಚ್ಚು ವೇಗ ಹೊಂದಿದೆ.

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಜಿನೆವಾ ಮೋಟಾರ್ ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಪಿನಿನ್‌ಫರಿನಾ ಬ್ಯಾಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರು ಮಾದರಿಯು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಹೊಸ ಕಾರಿನ ಪವರ್‌ಟ್ರೇನ್ ಅನ್ನು ಕ್ರೊಯೇಷಿಯಾ ಕಂಪನಿಯ ರಿಮಾಕ್ ಆಟೊಮೊಬಿಲಿಯಿಂದ ಪಡೆಯಲಾಗಿದೆ.

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಜೊತೆಗೆ ಕ್ರೊಯೇಷಿಯಾದ ರಿಮಾಕ್ ಸಿ ಟು ಎಲೆಕ್ಟ್ರಿಕ್ ಹೈಪರ್ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಪಿನಿನ್‌ಫರಿನಾ ಬ್ಯಾಟಿಸ್ಟಾ ಕಾರು ಮಾದರಿಯು ಕೇವಲ 1.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಬಲ್ಲದು.

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಮುಂದಿನ ಮೂರು ಸೆಕೆಂಡುಗಳಲ್ಲಿ ಅವಧಿಯಲ್ಲಿ 350 ಕಿ.ಮೀ ಟಾಪ್ ಸ್ಪೀಡ್ ತಲುಪುವ ಪಿನಿನ್‌ಫರಿನಾ ಬ್ಯಾಟಿಸ್ಟಾ ಕಾರು ಮಾದರಿಯು ಕಾರು ಉತ್ಪಾದನೆಯ ಇತಿಹಾಸದಲ್ಲೇ ಮೊದಲ ಬಾರಿಗೆ 1900-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಪವರ್‌ಫುಲ್ ಪವರ್‌ಟ್ರೈನ್‌ಗಾಗಿ ಪ್ರತಿ ಚಕ್ರಕ್ಕೂ ಪ್ರತ್ಯೇಕವಾಗಿ 125kWh ಬ್ಯಾಟರಿ ಪ್ಯಾಕ್ ಜೋಡಿಸಲಾಗಿದ್ದು, ಪ್ರತಿ ಚಾರ್ಜ್‌ಗೆ ಹೊಸ ಕಾರು ಗರಿಷ್ಠ 450 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಕಾರ್ಬನ್ ಫೈಬರ್ ಮೊನಾರ್ಕ್ಯೂ ಚಾಸಿಸ್ ಹೊಂದಿರುವ ಪಿನಿನ್‌ಫರಿನಾ ಬ್ಯಾಟಿಸ್ಟಾ ಕಾರಿನಲ್ಲಿ ಸಾಧ್ಯವಿರುವಷ್ಟು ತೂಕ ಇಳಿಕೆಗೆ ಪ್ರಯತ್ನಿಸಲಾಗಿದ್ದು, ಲೈಟ್‌ವೇಟ್ ಮೆಟಿರಿಯಲ್ ತಂತ್ರಜ್ಞಾನ ಹೊಂದಿದ ನಂತರವೂ ಕಾರಿನ ತೂಕ 1.95 ಟನ್ ತೂಕ ಪಡೆದುಕೊಂಡಿದೆ.

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಪೆರೆಲಿ ಪಿ ಜಿರೊ ಕೊರಸಾ ಟೈರ್, 6-ಪಾಟ್ ಬ್ರೇಕ್ ಕ್ಯಾಪಿಪರ್ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್‌ಗಳು ಸಹ ಹೊಸ ಕಾರಿನಲ್ಲಿದ್ದು, ಹೊಸ ಕಾರನ್ನು ವಿಶೇಷವಾಗಿ ರೇಸ್ ಟ್ರ್ಯಾಕ್ ಉದ್ದೇಶಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಬಿಡುಗಡೆಯಾಗಲಿದೆ ಫಾರ್ಮುಲಾ 1 ರೇಸ್ ಕಾರಿಗಿಂತಲೂ ವೇಗದ ಪಿನಿನ್‌ಫರಿನಾ ಎಲೆಕ್ಟ್ರಿಕ್ ಹೈಪರ್ ಕಾರು

ಇನ್ನು ಪಿನಿನ್‌ಫರಿನಾ ಕಂಪನಿಯ ಸಂಸ್ಥಾಪಕ ಬ್ಯಾಟಿಸ್ಟಾ ಪಿನಿನ್‌ಫರಿನಾ ಅವರ ಹೆಸರಿನಲ್ಲೇ ನಿರ್ಮಾಣವಾಗಿರುವ ಹೊಸ ಬ್ಯಾಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರನ್ನು ಮಹೀಂದ್ರಾ ಕಂಪನಿಯೇ ಅಭಿವೃದ್ದಿಪಡಿಸುತ್ತಿದ್ದು, ಕಾರು ವಿನ್ಯಾಸ ಕಂಪನಿಯಾಗಿದ್ದ ಪಿನಿನ್‌ಫರಿನಾ ಅನ್ನು ಉತ್ಪಾದಕ ಕಂಪನಿಯಾಗಿ ಮಹೀಂದ್ರಾ ಅಭಿವೃದ್ದಿಪಡಿಸುತ್ತಿದೆ.

Most Read Articles

Kannada
English summary
Pininfarina Battista Electric Hypercar To Be Launched Soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X