ಅತ್ಯಂತ ದುಬಾರಿ ಬೆಲೆಯ ಹೈಪರ್‌ಕಾರ್ ಪ್ರದರ್ಶಿಸಿದ ಮಹೀಂದ್ರಾ: ಈ ಕಾರಿನಲ್ಲಿ ಕ್ರಿಕೆಟ್ ದೇವರು ಸವಾರಿ

ಎಸ್‍ಯುವಿ ಅಥವಾ ಯುಟಿಲಿಟಿ ವಾಹನಗಳ ಉತ್ಪಾದನೆಗೆ ಜನಪ್ರಿಯವಾದ ಸ್ವದೇಶಿ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಇತ್ತೀಚೆಗೆ ದೇಶದ ಅತ್ಯಂತ ದುಬಾರಿ ಸೂಪರ್‌ಕಾರ್ ಪಿನಿನ್‌ಫರಿನಾ ಬಟಿಸ್ಟಾ ಮಾದರಿಯನ್ನು ಪ್ರದರ್ಶಿಸಿತು. ಈ ಅಲ್ಟ್ರಾ-ಹೈ-ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಹೈಪರ್‌ಕಾರ್ ಅನ್ನು ವಾಹನ ತಯಾರಕರು 2023ರ ಹೈದರಾಬಾದ್ ಇ-ಮೋಟಾರ್ ಶೋನಲ್ಲಿ ಪ್ರದರ್ಶಿಸಿತು.

ಈ ಹೊಸ ಬಟಿಸ್ಟಾ ಆಲ್-ಎಲೆಕ್ಟ್ರಿಕ್ ಹೈಪರ್‌ಕಾರ್ ಆಗಿದ್ದು, ಇದನ್ನು ಮಹೀಂದ್ರಾ ಮಾಲೀಕತ್ವದ ಇಟಾಲಿಯನ್ ಡಿಸೈನ್ ಹೌಸ್ ಪಿನಿನ್‌ಫರಿನಾ ಉತ್ಪಾದಿಸುತ್ತದೆ. ಈ ಬಟಿಸ್ಟಾ ಆಲ್-ಎಲೆಕ್ಟ್ರಿಕ್ ಹೈಪರ್‌ಕಾರ್ ಬೆಲೆಯು ಬರೊಬ್ಬರಿ 20 ಕೋಟಿ ರೂ.ಗಳಾಗಿದ್ದು, ಭಾರತದಲ್ಲಿ ಪ್ರದರ್ಶಿಸಿದ ಈ ಹೈಪರ್‌ಕಾರ್ ಅತ್ಯಂತ ದುಬಾರಿ ಸೂಪರ್‌ಕಾರ್‌ ಆಗಿದೆ. ಹೈದರಾಬಾದ್ ಸರ್ಕಾರವು ಆಯೋಜಿಸಿರುವ ಇ-ಮೊಬಿಲಿಟಿ ವೀಕ್‌ನ ಭಾಗವಾಗಿರುವ ಇ-ಮೋಟಾರ್ ಶೋನಲ್ಲಿ ಪಿನಿನ್‌ಫರಿನಾ ಬಟಿಸ್ಟಾ ಸೂಪರ್ ಕಾರ್ ಅನ್ನು ಮಹೀಂದ್ರಾ ಕಂಪನಿಯು ಪ್ರದರ್ಶಿಸಿದರು.

ಅತ್ಯಂತ ದುಬಾರಿ ಬೆಲೆಯ ಹೈಪರ್‌ಕಾರ್ ಪ್ರದರ್ಶಿಸಿದ ಮಹೀಂದ್ರಾ

ಈ ಇ-ಮೊಬಿಲಿಟಿ ಹೈದರಾಬಾದ್ ನಲ್ಲಿರುವ ಸ್ಟ್ರೀಟ್ ಟ್ರ್ಯಾಕ್‌ನಲ್ಲಿ ಭಾರತದ ಮೊದಲ ಫಾರ್ಮುಲಾ ಇ ರೇಸ್‌ಗಿಂತ ಮೊದಲು ಹೈದರಾಬಾದ್‌ನ 2023ರ ಫೆಬ್ರವರಿ 11 ರಂದು ನಡೆಯಿತು. ಈ ಹೈದರಾಬಾದ್‌ನ ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್ ಇ-ಮೋಟಾರ್ ಶೋ ಆಯೋಜಿಸಿತ್ತು. ಹಲವಾರು ವಾಣಿಜ್ಯ ಇವಿ ಉತ್ಪನ್ನ ತಯಾರಕರು, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಇವಿ ಯುನಿಟ್ ತಯಾರಕರು ಮತ್ತು ಈ ಪ್ರದೇಶಗಳ ಸ್ಟಾರ್ಟ್‌ಅಪ್‌ಗಳು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶಿಸಿತು.

ಇ-ಮೋಟಾರ್ ಶೋನಲ್ಲಿ ತೆಲಂಗಾಣ ಸರ್ಕಾರದ ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್‌ಗಳು ಮತ್ತು ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ನಿರ್ದೇಶಕ ಸುಜೈ ಕರಂಪೂರಿ ಅವರು ಪಿನಿನ್‌ಫರಿನಾ ಬಟಿಸ್ಟಾ ಹೈಪರ್‌ಕಾರ್ ಅನ್ನು ಅನಾವರಣಗೊಳಿಸಿದರು. ಈಹೈಪರ್‌ಕಾರ್ ಅನ್ನು ಅನಾವರಣಗೊಳಿಸಿದ ಬಳಿಕ ನಿರ್ದೇಶಕರು ಮಾತನಾಡಿ, ಎಲೆಕ್ಟ್ರಿಕ್ ವಾಹನಗಳ ಸುಸ್ಥಿರ ಚಲನಶೀಲತೆಯ ಭವಿಷ್ಯ ಎಂದು ನಾನು ಬಲವಾಗಿ ನಂಬುತ್ತೇನೆ. ಅಲ್ಲದೇ ಹಸಿರು ಭವಿಷ್ಯಕ್ಕಾಗಿ ರಾಜ್ಯವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚು ಉತ್ತೇಜನವನ್ನು ನೀಡುತ್ತದೆ ಎಂದು ಹೇಳಿದರು.

ಎಂಬುದಕ್ಕೆ ಪಿನಿನ್‌ಫರಿನಾ ಬಟಿಸ್ಟಾ ಪರಿಪೂರ್ಣ ಉತ್ತರವನ್ನು ಹೊಂದಿದ್ದರು. ಇದು ತುಂಬಾ ವೇಗವಾಗಿತ್ತು, ನಾವು ಸಮಯವನ್ನು ಧಿಕ್ಕರಿಸಿ ಭವಿಷ್ಯದಲ್ಲಿ ಇಳಿದಿದ್ದೇವೆ! ಆನಂದ್ ಮಹೀಂದ್ರಾ ಮತ್ತು ಅವರ ತಂಡದಿಂದ ಅದ್ಭುತ ಸಾಧನೆ. ಭಾರತೀಯ ಕಂಪನಿಗಳು ಅತ್ಯಾಧುನಿಕ, ವಿಶ್ವ ದರ್ಜೆಯ ಆಟೋಮೊಬೈಲ್‌ಗಳನ್ನು ಹಿಂತಿರುಗಿಸುವುದನ್ನು ನೋಡಲು ಸಂತೋಷವಾಗಿದೆ, "ಎಂದು ತೆಂಡೂಲ್ಕರ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಇನ್ನು ಇ-ಮೋಟಾರ್ ಶೋನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಹಾಜರಾಗಿದ್ದರು. ಸಚಿನ್ ಅವರು ಪಿನಿನ್‌ಫರಿನಾ ಬಟಿಸ್ಟಾ ಕಾರಿನಲ್ಲಿ ಸವಾರಿ ಮಾಡಿದರು. ಇನ್ನು ಸಚಿನ್ ಅವರು ಇವಿಗಳು ಭವಿಷ್ಯವೇ?ಎಂಬುದಕ್ಕೆ ಪಿನಿನ್‌ಫರಿನಾ ಬಟಿಸ್ಟಾ ಪರಿಪೂರ್ಣ ಉತ್ತರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಪಿನಿನ್‌ಫರಿನಾ ಬಟಿಸ್ಟಾ ಕಾರು ಇಟಾಲಿಯನ್ ಡಿಸೈನ್ ಹೌಸ್ ಪಿನಿನ್‌ಫರಿನಾ ಅವರ ಹೊಸ ಇವಿ ಹೈಪರ್‌ಕಾರ್ ಆಗಿದ್ದು, ಇದು ಐಕಾನಿಕ್ ಇಟಾಲಿಯನ್ ಬ್ರ್ಯಾಂಡ್ ಫೆರಾರಿ ಮಾದರಿಗಳನ್ನು ವಿನ್ಯಾಸಗೊಳಿಸಲು ಪ್ರಸಿದ್ಧವಾಗಿದೆ.

2015 ರಲ್ಲಿ ಪಿನಿನ್‌ಫರಿನಾ ಫೆರಾರಿಯೊಂದಿಗೆ ಬೇರ್ಪಟ್ಟ ನಂತರ ಕಂಪನಿಯನ್ನು ಭಾರತದ ಕಾರು ತಯಾರಕರಾದ ಮಹೀಂದ್ರಾ ಸ್ವಾಧೀನಪಡಿಸಿಕೊಂಡರು. ಭಾರತೀಯ ವಾಹನ ದೈತ್ಯ ಸುಮಾರು €168 ಮಿಲಿಯನ್‌ಗೆ ಪಿನಿನ್‌ಫರಿನಾ ವನ್ನು ಖರೀದಿಸಿದರು. ಬ್ಯಾಟಿಸ್ಟಾ ಮೊದಲ ಪಿನಿನ್‌ಫರಿನಾ-ಬ್ರಾಂಡ್‌ನ ಟಾಪ್-ಪರ್ಫಾಮೆನ್ಸ್ ಐಷಾರಾಮಿ ಎಲೆಕ್ಟ್ರಿಕ್ ಹೈಪರ್‌ಕಾರ್ ಆಗಿದೆ. ಇದು ರಿಮ್ಯಾಕ್ ಆಟೋಮೊಬಿಲಿ ಟಿ-ಆಕಾರದ 120 kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಅಲ್ಲದ್ ಪ್ರತಿ ಚಕ್ರದಲ್ಲಿ ನಾಲ್ಕು ಸಿಂಕ್ರೊನಸ್ ಅಲ್ಲದ ಮೋಟಾರ್‌ಗಳನ್ನು ಇರಿಸಲಾಗಿದೆ.

ಈ ಹೈಪರ್‌ಕಾರ್ ಕಾರ್ಬನ್ ಫೈಬರ್ ಮೊನೊಕೊಕ್ ಚಾಸಿಸ್ ಮತ್ತು ಕಾರ್ಬನ್ ಫೈಬರ್ ಬಾಡಿ ಪ್ಯಾನೆಲ್‌ಗಳ ಮೇಲೆ ತೂಕವನ್ನು ಕಡಿಮೆ ಮಾಡಲು ಕಾರನ್ನು ನಿರ್ಮಿಸಲಾಗಿದೆ. ಕಂಪನಿಯು ತನ್ನ ಜಾಗತಿಕ ಬಿಡುಗಡೆಯ ಸಮಯದಲ್ಲಿ ಬಟಿಸ್ಟಾದ 150 ಯುನಿಟ್ ಗಳನ್ನು ಮಾತ್ರ ಉತ್ಪಾದಿಸಲಾಗುವುದು ಎಂದು ಘೋಷಿಸಿತು. ಈ ಬ್ಯಾಟಿಸ್ಟಾ ಕಾರಿನಲ್ಲಿ 1,400 kW ಅನ್ನು ಹೊಂದಿದ್ದು, ಇದು 1900 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 349 ಕಿ.ಮೀ ಗಿಂತ ಹೆಚ್ಚಿನ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಐಷಾರಾಮಿ ಎಲೆಕ್ಟ್ರಿಕ್ ಹೈಪರ್‌ಕಾರ್ 2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

Article Published On: Monday, February 13, 2023, 11:50 [IST]
English summary
Pininfarina battista is perfect answer to ev future says sachin tendulkar details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+