Renault Offer: ಯಾರು ಅಂದಾಜಿಸಿರಲಿಲ್ಲ... ರೆನಾಲ್ಟ್‌ನಿಂದ ಭಾರೀ ಬಂಪರ್ ಆಫರ್

ಭಾರತದಲ್ಲಿ ಫ್ರೆಂಚ್ ವಾಹನ ತಯಾರಕ ರೆನಾಲ್ಟ್‌ (Renault) ತಯಾರಿಸುವ ಕಾರುಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ಅವುಗಳ ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆ ಪ್ರತಿಯೊಬ್ಬ ಗ್ರಾಹಕರಿಗೆ ಇಷ್ಟವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಇದೀಗ, ಕಂಪನಿ ಈ ಜೂನ್ ತಿಂಗಳಲ್ಲಿ ವಿವಿಧ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ.

ರೆನಾಲ್ಟ್‌ನ ಜನಪ್ರಿಯ ಎಂಪಿವಿಯಾಗಿರುವ 'ಟ್ರೈಬರ್' ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಇದರ ಆಯ್ದ ರೂಪಾಂತರಗಳು ಒಟ್ಟು ರೂ.62,000 ಡಿಸ್ಕೌಂಟ್ ಆಫರ್ ಪಡೆದಿವೆ. ಅದರಲ್ಲಿ ರೂ.25,000 ನಗದು ರಿಯಾಯತಿ ಹಾಗೂ 12,000 ಕಾರ್ಪೊರೇಟ್ ಡಿಸ್ಕೌಂಟ್ ಇದೆ. BS6 ಹಂತ 2ರ ಅನ್ವಯ ಮೇಲ್ದರ್ಜೆಗೇರಿಸಿರುವ ಟ್ರೈಬರ್ ಒಟ್ಟು ರೂ. 45,000 ರಿಯಾಯಿತಿ ಪ್ರಯೋಜನ ಹೊಂದಿದೆ.

Renault Offer: ಯಾರು ಅಂದಾಜಿಸಿರಲಿಲ್ಲ... ರೆನಾಲ್ಟ್‌ನಿಂದ ಭಾರೀ ಬಂಪರ್ ಆಫರ್

ರೆನಾಲ್ಟ್‌ ಟ್ರೈಬರ್ ಕಾರು, ರೂ.6.33 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 1 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 PS ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್/5 ಸ್ವೀಡ್ AMT ಆಯ್ಕೆಯಲ್ಲಿ ಸಿಗಲಿದ್ದು, 18.2 - 20.0 kmpl ಮೈಲೇಜ್ ನೀಡಲಿದೆ.

ರೆನಾಲ್ಟ್‌ ಕಿಗರ್ ಕಾರು ಕೂಡ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. BS6 ಮಾದರಿಗಳು ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಒಟ್ಟು ರೂ.65,000 ಡಿಸ್ಕೌಂಟ್ ಆಫರ್ ಪಡೆದಿವೆ. BS6 ಹಂತ 2 ಪ್ರಕಾರ, ನವೀಕರಣಗೊಂಡಿರುವ ಈ ಕಾರಿನ ಮಾದರಿಗಳು ರೂ.25,000 ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಆಯ್ದ ರೂಪಾಂತರಗಳು ರೂ.20,000 ಎಕ್ಸ್ಚೇಂಜ್ ಬೋನಸ್ ಅನ್ನು ಪಡೆದಿವೆ.

ದೇಶೀಯ ಮಾರುಕಟ್ಟೆಯಲ್ಲಿ ರೆನಾಲ್ಟ್‌ ಕಿಗರ್ ರೂ.6.50 ಲಕ್ಷದಿಂದ ರೂ.11.23 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದು, 1 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 18.24 - 20.5 kmpl ಮೈಲೇಜ್ ನೀಡುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

ರೆನಾಲ್ಟ್‌ ಕಂಪನಿ ಅತ್ಯಂತ ಕೈಗೆಟುಕುವ ಬೆಲೆಯ ಕಾರೆಂದು ಖ್ಯಾತಿಗಳಿಸಿರುವ 'ಕ್ವಿಡ್' ಸಹ ಬಂಪರ್ ಡಿಸ್ಕೌಂಟ್ ಆಫರ್ ಪಡೆದಿದೆ. ಒಟ್ಟು ರೂ.57,000 ರಿಯಾಯಿತಿ ಪಯೋಜನವನ್ನು ಹೊಂದಿದೆ. ಅದರಲ್ಲಿ AMT ರೂಪಾಂತರ ರೂ.25,000 ಹಾಗೂ ಮ್ಯಾನುವಲ್ ರೂಪಾಂತರ ರೂ.20,000 ಕ್ಯಾಶ್ ಡಿಸ್ಕೌಂಟ್ ಹೊಂದಿದೆ. BS6 ಹಂತ 2ರ ಅನ್ವಯ ಮೇಲ್ದರ್ಜೆಗೇರಿಸಿರುವ ಮಾದರಿ ರೂ.57,000 ರಿಯಾಯಿತಿ ಪ್ರಯೋಜನ ಹೊಂದಿದೆ.

ರೆನಾಲ್ಟ್‌ ಕ್ವಿಡ್ ರೂ.4.70 ಲಕ್ಷದಿಂದ ರೂ.6.33 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. 1 ಲೀಟರ್ ಪೆಟ್ರೋಲ್ ಎಂಜಿನ್ 68 PS ಗರಿಷ್ಠ ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್/ 5 ಸ್ವೀಡ್ AMT ಗೇರ್ ಬಾಕ್ಸ್ ಹೊಂದಿದ್ದು, 21.46 - 22.3 kmpl ಮೈಲೇಜ್ ನೀಡುತ್ತದೆ.

ರೆನಾಲ್ಟ್‌ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ದ್ವಿಗುಣಗೊಳಿಸಿಕೊಳ್ಳಲು ಕೈಗೆಟುಕುವ ಬೆಲೆಯ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಈ ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಖ್ಯಕ್ಕೆ ಬೇರೆ-ಬೇರೆ ರೀತಿಯಲ್ಲಿ ಇರಲಿದ್ದು, ನಿಮ್ಮ ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿ ಪಡೆಯಬಹುದು.

More from DriveSpark

Article Published On: Thursday, June 8, 2023, 12:41 [IST]
English summary
Renault big discount june kiger kwid triber car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+