Renault: ದಸರಾಗೆ ರೆನಾಲ್ಟ್‌ನಿಂದ ಭಾರೀ ರಿಯಾಯಿತಿ ಘೋಷಣೆ, ರೈತರಿಗೂ ವಿಶೇಷ ಆಫರ್ ಉಂಟು!
ಭಾರತದಲ್ಲಿ ರೆನಾಲ್ಟ್ (Renault) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದ್ದು, ಹಬ್ಬಕ್ಕೆ ವಿಶೇಷ ರಿಯಾಯಿತಿ ಕೊಡುಗೆಯನ್ನು ಘೋಷಿಸಿದೆ. ಕ್ವಿಡ್, ಟ್ರೈಬರ್ ಮತ್ತು ಕಿಗರ್ ಕಾರುಗಳು ಭರ್ಜರಿ ಆಫರ್ ಪಡೆದಿವೆ. ಇದು, ಅಕ್ಟೋಬರ್ 31 (2023)ರವರೆಗೆ ಲಭ್ಯವಿರಲಿದೆ.
ರೆನಾಲ್ಟ್ ಕ್ವಿಡ್, ಟ್ರೈಬರ್ ಮಾದರಿಗಳು ರೂ.50,000 ಹಾಗೂ ಕಿಗರ್ ರೂ.65,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಒಳಗೊಂಡಿದೆ. ಕ್ವಿಡ್ (Kwid) ಕಂಪನಿಯ ಎಂಟ್ರಿ ಲೆವೆಲ್ ಕಾರಾಗಿದ್ದು, ಮುಖ್ಯವಾಗಿ ರೂ.20,000 ನಗದು ಪ್ರಯೋಜನ (cash benefits) ರೂ.20,000 ವಿನಿಮಯ ಪ್ರಯೋಜನ (exchange benefits)ವನ್ನು ಪಡೆದಿರುವುದು ಖುಷಿಯ ವಿಚಾರವಾಗಿದೆ.

ರೆನಾಲ್ಟ್ ಕಿಗರ್ (Renault Kiger) ರೂ.₹25,000 ನಗದು ಪ್ರಯೋಜನ, ರೂ.20,000 ಎಕ್ಸ್ಚೇಂಜ್ ಬೆನಿಫಿಟ್ಸ್ ಹೊಂದಿದೆ. ಜೊತೆಗೆ ಲಾಯಲ್ಟಿ ಪ್ರಯೋಜನಗಳು ಸಹ ದೊರೆಯುತ್ತಿವೆ. ರೆನಾಲ್ಟ್ ಟ್ರೈಬರ್ (Renault Triber) ರೂ.20,000 ನಗದು ಪ್ರಯೋಜನ, ರೂ.20,000 ವಿನಿಮಯ ಪ್ರಯೋಜನ ಹಾಗೂ ಲಾಯಲ್ಟಿ ಬೆನಿಫಿಟ್ಸ್ ಕೂಡ ಪಡೆದಿದೆ. ಇದರೊಂದಿಗೆ ಕೆಲವೊಂದು ಹೆಚ್ಚುವರಿ ರಿಯಾಯಿತಿ ಪ್ರಯೋಜನಗಳು ಕೂಡ ಸಿಗುತ್ತಿವೆ.
ರೆನಾಲ್ಟ್ ಇಂಡಿಯಾದಿಂದ ಕಾರ್ಪೊರೇಟ್ ಗ್ರಾಹಕರಿಗೆ (Corporate customers) ವಿಶೇಷ ಕೊಡುಗೆ ಲಭ್ಯವಿದೆ. ಅವರಿಗೆ ರೂ.12,000 ವರೆಗೆ ಹೆಚ್ಚುವರಿ ನಗದು ರಿಯಾಯಿತಿ (cash discount) ಲಭ್ಯವಿದೆ. ಅದೇ ರೀತಿಯಲ್ಲಿ ಗ್ರಾಮೀಣ ಭಾಗದ ಜನರು, ರೈತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ರೂ.5,000 ವರೆಗೆ ಹೆಚ್ಚುವರಿಯಾಗಿ ಕ್ಯಾಶ್ ಡಿಸ್ಕೌಂಟ್ ದೊರೆಯುತ್ತದೆ. ಈ ಮೂಲಕ ಕಂಪನಿಯು ಎಲ್ಲ ವರ್ಗದವರಿಗೂ ವಿಶೇಷ ಕೊಡುಗೆ ಘೋಷಣೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆನಾಲ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇಲ್ಸ್ & ಮಾರ್ಕೆಟಿಂಗ್ ಉಪಾಧ್ಯಕ್ಷ ಸುಧೀರ್ ಮಲ್ಹೋತ್ರಾ ಅವರು, 'ನಮ್ಮ ಪ್ರಮುಖ ಕಾರುಗಳಾದ ಟ್ರೈಬರ್, ಕಿಗರ್ ಮತ್ತು ಕ್ವಿಡ್‌ಗೆ ಹಬ್ಬದ ಋತುವಿನಲ್ಲಿ ವಿಶೇಷ ಕೊಡುಗೆ ಘೋಷಣೆ ಮಾಡಿರುವುದು ಸಂತೋಷ ತಂದಿದೆ. ಈ ಮೂಲಕ ನಮ್ಮ ಗ್ರಾಹಕರಿಗೆ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸುತ್ತಿದ್ದೇವೆ. ನಿಮ್ಮ ಬೆಂಬಲವು ಹೀಗೆ ಮುಂದುವರಿಯಲಿ' ಎಂದು ಹೇಳಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವಿಡ್ ರೂ.4.70 ಲಕ್ಷದಿಂದ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68 PS ಗರಿಷ್ಠ ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5 ಸ್ವೀಡ್ ಮ್ಯಾನುವಲ್/ 5 ಸ್ವೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ.

ರೆನಾಲ್ಟ್ ಕಿಗರ್ ಕಾರಿನ ಬಗ್ಗೆ ಮಾತನಾಡುವುದಾದರೆ, ಇದು, ರೂ.6.50 ಲಕ್ಷದಿಂದ ರೂ.11.23 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. 1 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 18.24 - 20.5 kmpl ಮೈಲೇಜ್ ನೀಡಲಿದ್ದು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ಅತ್ಯಾಧುನಿಕ ಫೀಚರ್ಸ್ ಪಡೆದಿದೆ.
ರೆನಾಲ್ಟ್ ಟ್ರೈಬರ್ ಕುರಿತು ಹೇಳುವುದಾದರೆ, ಇದು ರೂ.6.33 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 PS ಪವರ್ & 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 18.2 - 20.0 kmpl ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








