ಗೋವಾ ಸರ್ಕಾರ ಖಡಕ್ ನಿರ್ಧಾರ... ಪ್ರವಾಸಿಗರಿಗೆ ಬಾಡಿಗೆಗೆ ಈ ವಾಹನಗಳು ಸಿಗೋದಿಲ್ಲ!

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ವೇಗ ಹೆಚ್ಚಾಗಿದೆ. ಒಂದೊಂದೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡಿದರೆ ರಾಜ್ಯ ಸರ್ಕಾರಗಳು ಇವಿಗಳನ್ನು ಖರೀದಿಸಲು ಹಲವು ಸೌಲ್ಯಭಗಳನ್ನು ಒದಗಿಸುತ್ತಿವೆ. ಈಗ ಗೋವಾ ಸರ್ಕಾರ ಕೂಡ ಇವಿಗಳ ವೇಗದ ಅಳವಡಿಕೆಗಾಗಿ ಹೊಸ ಪ್ರಸ್ತಾವನೆಯನ್ನು ತಂದಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ರಾಜ್ಯ ಸರ್ಕಾರವು 2024 ಜನವರಿ 1 ರಿಂದ ನೋಂದಾಯಿಸಲಾಗುವ ಎಲ್ಲಾ ಪ್ರವಾಸಿ 'ರೆಂಟ್-ಎ-ಕ್ಯಾಬ್' ಮತ್ತು 'ರೆಂಟ್-ಎ-ಬೈಕ್' ಸೇವೆಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಗೋವಾದಲ್ಲಿ ಮುಂಬರುವ ಎಲ್ಲಾ ಬಾಡಿಗೆ ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳು ಎಲೆಕ್ಟ್ರಿಕ್ ವಾಹನಗಳಾಗಲಿವೆ.

rental-cabs-motorcycles-electrified-goa-january-2024

ಇ-ಮೊಬಿಲಿಟಿಯನ್ನು ವೇಗಗೊಳಿಸುವ ನೀತಿಗಳನ್ನು ಸಕ್ರಿಯಗೊಳಿಸುವ ಕುರಿತು 'ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್' ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇವಿ ಅಳವಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮೊದಲಿಗೆ ಸರ್ಕಾರದಿಂದ ಖರೀದಿಸಲಾಗುವ ಲಘು ಮೋಟಾರು ವಾಹನಗಳು ಕೇವಲ ಎಲೆಕ್ಟ್ರಿಕ್ ವಾಹನಗಳಾಗಿರುತ್ತವೆ ಎಂದು ಹೇಳಿದರು.

ಗೋವಾ ಜಾಗತಿಕ ಪ್ರವಾಸೋದ್ಯಮ ಹಾಟ್‌ಸ್ಪಾಟ್ ಆಗಿರುವುದರಿಂದ, ರಾಜ್ಯದ ಜನಸಂಖ್ಯೆಯು 15 ಲಕ್ಷ, ಆದರೆ ಪ್ರತಿ ವರ್ಷ 85 ಲಕ್ಷಕ್ಕೂ ಹೆಚ್ಚು (8.5 ಮಿಲಿಯನ್) ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಪ್ರಯಾಣಿಸಲು ಬಳಸುವ ಹೆಚ್ಚಿನ ಸಂಖ್ಯೆಯ ಟ್ಯಾಕ್ಸಿಗಳು, ಬಾಡಿಗೆ ವಾಹನಗಳು ಮತ್ತು ಬಸ್ಸುಗಳ ಕಾರಣದಿಂದಾಗಿ ರಾಜ್ಯದಲ್ಲಿ ಇಂಗಾಲದ ಹೊರಸೂಸುವಿಕೆ ಮಟ್ಟ ಹೆಚ್ಚಾಗಿದೆ.

rental-cabs-motorcycles

ಈ ನಿಟ್ಟಿನಲ್ಲಿ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಅವರು, ಗೋವಾದಲ್ಲಿ ಉತ್ಪತ್ತಿಯಾಗುವ ಶೇ 40 ರಷ್ಟು ಇಂಗಾಲದ ಹೊರಸೂಸುವಿಕೆಯು ಇಂಧನ ಚಾಲಿತ ಆಂತರಿಕ ದಹನಕಾರಿ ಎಂಜಿನ್ (ICE) ವಾಹನಗಳಿಂದ ಹೊರಹೊಮ್ಮುವ ಕಾರ್ಬನ್ ಆಗಿದೆ. ಹಾಗಾಗಿ ಗೋವಾದ ಬಾಡಿಗೆ ಫ್ಲೀಟ್ ಆಪರೇಟರ್‌ಗಳು ಜೂನ್ 2024 ರ ವೇಳೆಗೆ ತಮ್ಮ ಶೇ 30 ರಷ್ಟು ವಾಹನಗಳನ್ನು EV ಗಳಿಗೆ ಮರುಹೊಂದಿಸಲು ಕಡ್ಡಾಯಗೊಳಿಸಲಾಗುತ್ತದೆ ಎಂದರು.

ಇದರ್ಥ ಒಟ್ಟಾರೆ ಎಲ್ಲಾ ಹೊಸ ಪ್ರವಾಸಿ ವಾಹನಗಳು, ಬಾಡಿಗೆ-ಕ್ಯಾಬ್ ಮತ್ತು ಬಾಡಿಗೆ-ಬೈಕ್‌ಗಳು ಜನವರಿ 2024 ರಿಂದ EVಗಳಾಗಬೇಕು. ಬಹು ಪ್ರವಾಸಿ ಟ್ಯಾಕ್ಸಿಗಳು, ಬಾಡಿಗೆ-ಬೈಕ್ ಮತ್ತು ಬಾಡಿಗೆ-ಕ್ಯಾಬ್ ಆಪರೇಟರ್‌ಗಳನ್ನು ಹೊಂದಿರುವ ಪರ್ಮಿಟ್ ಹೊಂದಿರುವವರು ಜೂನ್ 2024 ರೊಳಗೆ ಫ್ಲೀಟ್‌ನ ಶೇ 30 ರಷ್ಟನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದು ಕಡ್ಡಾಯವಾಗಿದೆ.

ನಿರ್ಧಾರವನ್ನು ಸಮರ್ಥಿಸುತ್ತಾ, ಸಾವಂತ್ ರಾಜ್ಯದ ವಾಹನ ಸಾಂದ್ರತೆಯನ್ನು ಸೂಚಿಸಿದರು, ಇದು ಪ್ರವಾಸೋದ್ಯಮದ ಖಾತೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತ 4.5 ಪಟ್ಟು ಹೆಚ್ಚಾಗಿದೆ. ವಾಹನ ಸಾಂದ್ರತೆಯ ವಿಷಯದಲ್ಲಿ ಗೋವಾ ವಿಶ್ವದಲ್ಲಿ 15 ನೇ ಸ್ಥಾನದಲ್ಲಿದೆ. ಹಾಗಾಗಿ ಈಗಿನಿಂದಲೇ ಈ ಪರಿವರ್ತನೆಯ ವೇಗವನ್ನು ಹೆಚ್ಚಿಸಿದರೆ, ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಣಕ್ಕೆ ತರಬಹುದು ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

Article Published On: Thursday, July 20, 2023, 19:20 [IST]
English summary
Rental cabs motorcycles electrifying goa january 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+