ಹೊಸ ಟಾಟಾ ಸಫಾರಿಗೆ ತುಕ್ಕಿನ ಸಮಸ್ಯೆ... ಬದಲಿ ಕಾರಿಗಾಗಿ ಮಾಲೀಕ ಬೇಡಿಕೆ... ಸ್ಪಂದಿಸದ ಡೀಲರ್

ಅದೆಷ್ಟೋ ಮಂದಿಗೆ ಕಾರು ಖರೀದಿಸುವುದು ಕನಸಾಗಿರುತ್ತದೆ, ಒಂದೊಮ್ಮೆ ಕಾರನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಅದು ಕೈಕೊಟ್ಟರೇ? ಅಥವಾ ಸಮಸ್ಯೆಗಳನ್ನು ತಂದೊಡ್ಡಿದರೆ ಅಂತಹ ವಿಚಾರಗಳನ್ನು ಊಹಿಸಲು ಕೂಡ ಭಯವಾಗುತ್ತದೆ. ಇಂತಹ ಸಮಸ್ಯೆಯನ್ನೇ ಎದುರಿಸುತ್ತಿರುವ ಟಾಟಾ ಸಫಾರಿ ಮಾಲೀಕರೊಬ್ಬರು ಸಮಸ್ಯೆಗೆ ಸ್ಪಂದಿಸದ ಡೀಲರ್ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಹರಿಯಾಣದ ಫರಿದಾಬಾದ್‌ನ ಟಾಟಾ ಸಫಾರಿ ಮಾಲೀಕರೊಬ್ಬರು ತಮ್ಮ ಕಾರಿಗೆ ತುಕ್ಕು ಹಿಡಿಯುತ್ತಿರುವ ಬಗ್ಗೆ ದೆಹಲಿಯ ಮೋತಿ ನಗರ ಆಟೋವಿಕಾಸ್ ಟಾಟಾ ಮೋಟಾರ್ಸ್ ಅಧಿಕೃತ ಡೀಲರ್ ಬಳಿ ಸಮಸ್ಯೆಗಳನ್ನು ಎತ್ತಿದ್ದಾರೆ. ತಮ್ಮ ಹೊಸ ಸಫಾರಿ ಎಸ್‌ಯುವಿಯಲ್ಲಿ ಬಳಸಲಾದ ಕಬ್ಬಿಣ ಶೀಟ್‌ಗಳ ಗುಣಮಟ್ಟ ತುಂಬಾ ಕೆಟ್ಟದಾಗಿದೆ. ನಾಲ್ಕು ತಿಂಗಳೊಳಗೆ ತಮ್ಮ ಕಾರಿನ 45 ಕ್ಕೂ ಹೆಚ್ಚಿನ ಜಾಗಗಳಲ್ಲಿ ತುಕ್ಕು ಹಿಡಿದಿರುವ ಸಮಸ್ಯೆಗಳನ್ನು ಗಮನಿಸಿರುವುದಾಗಿ ಮಾಲೀಕರು ಹೇಳಿಕೊಂಡಿದ್ದಾರೆ.

ಹೊಸ ಟಾಟಾ ಸಫಾರಿಗೆ ತುಕ್ಕಿನ ಸಮಸ್ಯೆ... ಬದಲಿ ಕಾರಿಗಾಗಿ ಮಾಲೀಕ ಬೇಡಿಕೆ... ಸ್ಪಂದಿಸದ ಡೀಲರ್

ಈ ತಿಳಿದಿರುವ ಸಮಸ್ಯೆಗೆ ಎರಡು ತಿಂಗಳಾದರೂ, ಆಟೋವಿಕಾಸ್ ಟಾಟಾ ಮೋಟಾರ್ಸ್ ಶೋರೂಂ ಮಾಲೀಕ ರಾಕಿ ವಾಸಿಸ್ಟ್ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿಲ್ಲ. ಇತ್ತೀಚೆಗೆ ಮಾಲೀಕರು ಸಫಾರಿಯನ್ನು ಡೀಲರ್‌ಶಿಪ್‌ಗೆ ತಂದಾಗ ಕಾರು ಇನ್ನಷ್ಟು ಹದಗೆಟ್ಟಿರುವುದು ತಿಳಿದುಬಂದಿದೆ. ಈ ವೇಳೆ ಗ್ರಾಹಕರು ಹಾಗೂ ಡೀಲರ್‌ಶಿಪ್ ನಡುವೆ ಜಗಳ ಹೆಚ್ಚಾಗುತ್ತಿದ್ದಂತೆ ಟಾಟಾ ಮೋಟಾರ್ಸ್ ಡೀಲರ್‌ಶಿಪ್‌ಗೆ ಪೊಲೀಸರು ಆಗಮಿಸಿದ್ದರು. ಡೀಲರ್‌ನವರು ಇಂತಹ ಸನ್ನಿವೇಶವನ್ನು ಮೊದಲೇ ಅರಿತು ಪೊಲೀಸರನ್ನು ಕರೆದಿರುವುದಾಗಿ ಕಾರಿನ ಮಾಲೀಕ ದೂರಿದ್ದಾರೆ.

ಸ್ಥಳೀಯ ಮಾಧ್ಯಮಗಳು ಫರಿದಾಬಾದ್ ಘಟನೆಯನ್ನು ವಿವರವಾಗಿ ವರದಿ ಮಾಡಿದೆ. ವಿಡಿಯೋದಲ್ಲಿ, ಸಫಾರಿ ಮಾಲೀಕರು ಮಾಧ್ಯಮದವರನ್ನು ಕಾರಿನ ಸುತ್ತಲೂ ಕರೆದೊಯ್ದು ತುಕ್ಕು ಹಿಡಿದ ಎಲ್ಲಾ ಸ್ಥಳಗಳನ್ನು ವಿವರವಾಗಿ ತೋರಿಸಿದ್ದಾರೆ. ಕೆಲವು ಸ್ಥಳಗಳಲ್ಲಿ, ತುಕ್ಕು ತೀವ್ರವಾಗಿ ಹಿಡಿದಿದೆ. ಟಾಟಾ ಸಫಾರಿ ಎಸ್‌ಯುವಿಗಾಗಿ ತಾನು 21 ಲಕ್ಷ ರೂ. ಪಾವತಿಸಿದ್ದೇನೆ, ಇಷ್ಟು ದುಬಾರಿ ಕಾರಿಗೆ ಹೀಗಾಗುತ್ತದೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದು ಮಾಲೀಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೊಸ ಟಾಟಾ ಸಫಾರಿಗೆ ತುಕ್ಕಿನ ಸಮಸ್ಯೆ... ಬದಲಿ ಕಾರಿಗಾಗಿ ಮಾಲೀಕ ಬೇಡಿಕೆ... ಸ್ಪಂದಿಸದ ಡೀಲರ್

ಸದ್ಯ ರಾಕಿ ಅವರು ಟಾಟಾ ಮೋಟಾರ್ಸ್ ಡೀಲರ್‌ನಿಂದ ಬದಲಿಯಾಗಿ ಮತ್ತೊಂದು ಕಾರನ್ನು ಕೋರುತ್ತಿದ್ದಾರೆ. ಆದರೆ ಡೀಲರ್‌ನವರು ಇದಕ್ಕೆ ಸಿದ್ದವಾಗಿಲ್ಲ. ರಾಕಿ ಅವರು ಕೇಳುವುದರಲ್ಲೂ ನ್ಯಾಯವಿದೆ ಏಕೆಂದರೆ ಈ ಹೊಸ ಕಾರಿಗೆ ಅನೇಕ ಸ್ಥಳಗಳಲ್ಲಿ ತೀವ್ರ ತುಕ್ಕು ಹಿಡಿದಿರುವುದನ್ನು ನೋಡಬಹುದು. ಚಾಸಿಸ್ ನಂಬರ್ ಕೂಡ ಸ್ಟ್ಯಾಂಪ್ ಮಾಡಲಾಗಿದೆ, ತುಕ್ಕು ಹಿಡಿಯಲು ಪ್ರಾರಂಭಿಸಿದೆ. ಎಂಜಿನ್ ಬೇ ಮತ್ತು ಬಾನೆಟ್ ಕೂಡ ಹಲವೆಡೆ ತುಕ್ಕು ಹಿಡಿಯುವ ಜಾಗಗಳನ್ನು ಹೊಂದಿದೆ.

ಕಡೆಯದಾಗಿ ಇದರ ಬಗ್ಗೆ ಮಾಲೀಕರು ಡೀಲರ್ ಅನ್ನು ಸಂಪರ್ಕಿಸಿದಾಗ, ಬದಲಿ ಸಾಧ್ಯತೆಯನ್ನು ತಿರಸ್ಕರಿಸಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಟಾಟಾ ಮೋಟಾರ್ಸ್‌ಗೆ ತಿಳಿದಿದೆ ಎಂದು ಆಟೋವಿಕಾಸ್ ಡೀಲರ್‌ಶಿಪ್‌ನ ಶಿವಕುಮಾರ್ ಎಂಬುವರು ಬಹಿರಂಗಪಡಿಸಿದ್ದಾರೆ. ಪ್ರತಿಕೂಲವಾದ ಟಿಡಿಎಸ್ ಮಟ್ಟದೊಂದಿಗೆ ಫರಿದಾಬಾದ್‌ನ ಗಡಸು ನೀರು ತುಕ್ಕು ಹಿಡಿಯಲು ಕಾರಣ ಎಂದು ವಿತರಕರು ಹೇಳುತ್ತಿದ್ದಾರೆ. ತುಕ್ಕು ಹಿಡಿದ ಭಾಗಗಳಿಗೆ ಪುನಃ ಬಣ್ಣ ಬಳಿಯಲು ವಿತರಕರು ಸಿದ್ಧರಾಗಿದ್ದಾರೆ. ಆದರೆ ಬದಲಿಯಂತೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಹೊಸ ಕಾರಿಗೆ ಹೀಗಾಗಿರುವುದನ್ನು ಕಂಡು ತೀರ್ವ ಅಸಮಾಧಾನದಲ್ಲಿರುವ ಮಾಲೀಕ ಕಾರಿನ ಬದಲಿ ಅಥವಾ ನ್ಯಾಯಯುತ ಪರಿಹಾರಕ್ಕಾಗಿ ಹೋರಾಡುವುದಾಗಿ ತಿಳಿಸಿದ್ದಾರೆ. ಹಾಗೆಯೇ ಡೀಲರ್‌ ಬಳಿ ಎಷ್ಟೇ ಕೇಳಿಕೊಂಡರೂ ಸಮಸ್ಯೆ ಬಗೆಹರಿಯದ ಕಾರಣ, ಸಫಾರಿ ಮಾಲೀಕರು ಸಮಸ್ಯೆಯನ್ನು ಗ್ರಾಹಕರ ನ್ಯಾಯಾಲಯಕ್ಕೆ ಕೊಂಡೊಯ್ಯಲು ಯೋಜಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಈ ವಿಚಾರವಾಗಿ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಸದ್ಯ ಡೀಲರ್‌ಗಳಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, February 27, 2023, 16:25 [IST]
English summary
Rust problem for new tata safari owner demand for replacement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+